ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳದಲ್ಲಿ ಸನ್ಮಾನ ಸ್ವೀಕರಿಸಲಿರುವ ಈದು ಪಡ್ಯಾರಮನೆ ಅಶೋಕ್ ಕುಮಾರ್ ಜೈನ್
ಕಾರ್ಕಳ : ಈದು ಮುಜಿಲ್ನಾಯ ದೈವಸ್ಥಾನ ಆಡಳಿತ ಮೊಕ್ತೇಸರ ಹಾಗೂ ಈದು ಜಯ – ವಿಜಯ ಜೋಡುಕರೆ ಕಂಬಳದ ಸ್ಥಾಪಕ ಅಶೋಕ್ ಕುಮಾರ್ ಜೈನ್ ಅವರು ಮಾರ್ಚ್ 15ರಂದು ನಡೆಯಲಿರುವ ಮಿಯ್ಯಾರು ಲವ – ಕುಶ ಜೋಡುಕರೆ ಕಂಬಳದಲ್ಲಿ ಸನ್ಮಾನ ಸ್ವೀಕರಿಸಲಿದ್ದಾರೆ
17 ವರ್ಷಗಳ ಕಾಲ ಈದು ಗ್ರಾಮ ಪಂಚಾಯತ್ ಸದಸ್ಯರಾಗಿ, ಕಾರ್ಕಳ ಎಪಿಎಂಸಿ ಉಪಾಧ್ಯಕ್ಷರಾಗಿ, ನೆಲ್ಲಿಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ, ಹೊಸ್ಮಾರು ರಬ್ಬರ್ ಬೆಳೆಗಾರರ ಸಂಘದ ಅಧ್ಯಕ್ಷರಾಗಿ, ಈದು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿ, ನಾರಾವಿ ಜೈನ್ ಮಿಲನ್ ಅಧ್ಯಕ್ಷರಾಗಿ, ಈದು ಮುಜಿಲ್ನಾಯ ದೈವಸ್ಥಾನದ ಆಡಳಿತ ಮೊಕ್ತೆಸರರಾಗಿ, ಹತ್ತಾರು ಸಂಘ – ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಕೃಷಿ- ಕ್ರೀಡಾ- ಕ್ಷೇತ್ರಗಳಲ್ಲಿ ಹಲವಾರು ಸಾಧನೆಗೈದು ಜನರ ನಡುವೆ ಬೆರೆತು ಜನಸ್ನೇಹಿಯಾಗಿ ಅಶೋಕ ಅಣ್ಣ ಎಂದೇ ಹೆಸರುಗಳಿಸಿದ್ದಾರೆ.
ಕಂಬಳ ಕ್ರೀಡೆಯಲ್ಲಿ ಸತತ 24 ವರ್ಷಗಳ ಕಾಲ ಭಾಗವಹಿಸಿ, ಈದು ಜಯ – ವಿಜಯ ಜೋಡುಕರೆ ಕಂಬಳದ ಸ್ಥಾಪಕರು ಈದು ಪಡ್ಯಾರಮನೆ ಅಶೋಕ್ ಕುಮಾರ್ ಜೈನ್ ಆಗಿದ್ದಾರೆ.

































