ಮಿಯ್ಯಾರು ಶ್ರೀ ಕ್ಷೇತ್ರ: ಅಕ್ಷೇಪದ ನಡುವೆಯೂ ಆಡಳಿತ ಮಂಡಳಿಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ

Picture of RB NEWS

RB NEWS

Bureau Report

ಕಾರ್ಕಳ : ಭಾರೀ ಅಕ್ಷೇಪದ ನಡುವೆಯೂ ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿನ್ನಾಗಿ ಮಿಯ್ಯಾರು ತಾರನಾಥ ಕೋಟ್ಯಾನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ದೂರುಗಳು ಕೇಳಿಬರುತ್ತದೆ.

ಮಿಯ್ಯಾರು ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಾಸ್ಥಾನ ವ್ಯವಸ್ಥಾಪನಾ ಸಮಿತಿಯನ್ನು ರಚನೆಯಲ್ಲಿ ಲೋಪದೋಷ ಕಂಡು ಬಂದಿದೆ ಎಂದು ಆರೋಪಿಸಿ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಕಮಿಷನರ್ ಅವರಿಗೆ ಶ್ರೀ ಕ್ಷೇತ್ರದ ಆಡಳಿತ ಮಂಡಳಿಯ ಮಾಜಿ ಸದಸ್ಯ ರೋಹಿತ್ ಕುಮಾರ್ ಹಾಗೂ ಮಾಜಿ ಆಡಳಿತ ಮೊಕ್ತೇಸರ ಸತ್ಯೇಂದ್ರ ನಾಯಕ್ ಅಕ್ಷೇಪ ಪತ್ರ ಸಲ್ಲಿಸಿದ್ದರು.

ಸಮಿತಿಯ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಲು ಅರ್ಜಿದಾರರು ಕನಾಟಕ ಹಿಂದೂ ದಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1998 ಕಲಂ 25(2) (ಸಿ) ಮತ್ತು (ಡಿ) ರಡಿಯಲ್ಲಿ ಸೂಚಿಸಿರುವಂತೆ ಕೆಲವೊಂದು ಮೂಲ ಅರ್ಹತೆಯನ್ನು ಹೊಂದಿರತಕ್ಕುದಾಗಿರುತ್ತದೆ.

—————————————————————————

ಆ ಅರ್ಹತೆಗಳ ಪೈಕಿ ಸದಸ್ಯತ್ವ ಪಡೆಯುವ ಸದಸ್ಯ ಯಾವುದೇ ರಾಜಕೀಯ ಪಕ್ಷದ ಪದಾಧಿಕಾರಿಯಾಗಿರಬಾರರು ಎಂಬುದು ಕೂಡಾ ಒಂದಾಗಿರುತ್ತದೆ.

ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿರುವ ತಾರಾನಾಥ್ ಕೋಟ್ಯಾನ್ ಸೂರಾಲು ಹಾಗೂ ರಮಕಾಂತ್ ಶೆಟ್ಟಿ, ಕರೀಮಾರ್ ಕಟ್ಟೆ ಇವರು ಅರ್ಜಿಯನ್ನು ಸಲ್ಲಿಸಿರುತ್ತಾರೆ.

ತಾರಾನಾಥ್ ಕೋಟ್ಯಾನ್ ಕಾಂಗ್ರೆಸ್ ಮಿಯ್ಯಾರು ಗ್ರಾಮ ಸಮಿತಿ ಇದರ ಅಧ್ಯಕ್ಷರು ಆಗಿರುತ್ತಾರೆ‌. ಮಿಯ್ಯಾರು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಅಕ್ರಮ ಸಕ್ರಮ ಸಮಿತಿಯ ಸದಸ್ಯರೂ ಕೂಡಾ ಆಗಿರುತ್ತಾರೆ.

ರಮಕಾಂತ್ ಶೆಟ್ಟಿ ಇವರು ಕಾರ್ಕಳ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷರಾಗಿರುತ್ತಾರೆ.

ಅಧಿಸೂಚನೆಯಲ್ಲಿ ಸೂಚಿಸಿರುವ ಅರ್ಹತೆಗಳ ಪ್ರಕಾರ ಇವರ ಅಯ್ಕೆ ಅರ್ಹತೆಗೆ ಸರಿಯಾದುದಲ್ಲ. ಆದುದರಿಂದ ಅರ್ಜಿ ಸಲ್ಲಿಸಿರುವ ವ್ಯಕ್ತಿಗಳಲ್ಲಿ ಅರ್ಹತೆಗೆ ಸರಿಯಾದ ಸದಸ್ಯರನ್ನು ಆಯ್ಕೆ ಮಾಡಬೇಕಾಗಿ ಪತ್ರದಲ್ಲಿ ರೋಹಿತ್ ಕುಮಾರ್ ಆಗ್ರಹಿಸಿದ್ದಾರೆ.

ಮಿಯ್ಯಾರು ಮಹಾಲಿಂಗೇಶ್ವರ ದೇವಾಸ್ಥಾನ ಜೀರ್ಣೋದ್ದಾರಗೊಳ್ಳುತ್ತಿದ್ದು ಜನವರಿ 16 ರಿಂದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ನಡೆಯಲಿವೆ.

ಈ ಸಂದರ್ಭದಲ್ಲಿ ಹೊಸ ಸಮಿತಿಯ ರಚನೆಯಾದರೆ ಆಗುತ್ತಿರುವ ಕೆಲಸಗಳಿಗೆ ತೊಂದರೆಯಾಗುವ ಸಾಧ್ಯತೆವಿದ್ದು, ಬ್ರಹ್ಮಕಲಶದ ನಂತರ ಅಧಿಸೂಚನೆಯಂತೆ ಹೊಸ ಮಿತಿಯನ್ನು ರಚಿಸಬೇಕಾಗಿ ಅವರು ಕೋರಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top