ಅಂಡರ್ ಪಾಸ್ ನಿರ್ಮಾಣಕ್ಕೆ ಆರ್.ಬಿ.ನ್ಯೂ ಸ್ ವರದಿ ಪ್ರೇರಣದಾಯಕವಾಗಿತ್ತು. ಗ್ರಾಮಸ್ಥರ ಪರವಾಗಿ ಧನ್ಯವಾದಗಳು.
–ಮಿಜಾರು ಬ್ರಿಜೇಶ್ ಶೆಟ್ಟಿ
ಸಾಮಾಜಿಕ ಹೋರಾಟಗಾರ
ಮಿಜಾರು ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್ ಹೋರಾಟಕ್ಕೆ ಜಯ
ಮೂಡುಬಿದಿರೆ: ತೆಂಕಮಿಜಾರಿನ ಉಳಾಯಂಗಡಿಯ ಪರಿಸರದಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡುವ ಬಗ್ಗೆ ಗ್ರಾಮಸ್ಥರ ಬೇಡಿಕೆಗೆ ಕೊನೆಗೂ ಜಯ ದೊರಕಿದೆ.
ರಾಷ್ಟ್ರೀಯ ಹೆದ್ದಾರಿ ಇಲಾಖೆಯು ತೆಂಕ ಮಿಜಾರು ಗ್ರಾಮದಲ್ಲಿ ಅಂಡರ್ ಪಾಸ್ ನಿರ್ಮಾಣಕೈ ಅನುಮತಿ ನೀಡಿದೆ.
ಅಂಡರ್ ಪಾಸ್ ಬೇಡಿಕೆ ಮುಂದಿಟ್ಟು ಗ್ರಾಮಸ್ಥರು ಹೋರಾಟ ಮಾಡಿದ್ದರು.
ರಾಷ್ಟ್ರೀಯ ಹೆದ್ದಾರಿ ಭೂ ಮಾಲಕರ ಹೋರಾಟ ಸಮಿತಿಯ ಮುಖಂಡ ಬ್ರಿಜೇಶ್ ಶೆಟ್ಟಿ ಯವರು ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆ ತೆಗೆದುಕೊಂಡ ಡಿಬಿಎಲ್ ಕಂಪನಿಯ ಸಿಬ್ಬಂದಿಗಳ ಮದ್ಯೆ ಮಾತಿನ ಚಕಮಕಿ ನಡೆದ ನಂತರ ಗ್ರಾಮಸ್ಥರು ಈ ಹೆದ್ದಾರಿ ಕಾಮಗಾರಿಯನ್ನು ನಿಲ್ಲಿಸಿದ್ದನು ಸ್ಮರಿಸಬಹುದು.





















