ಮಿಜಾರು ದೇವಸ್ಥಾನದ  ಜೀರ್ಣೋದ್ಧಾರಕ್ಕೆ ಮೀಸಲಿಟ್ಟ ಮರಗಳ ಕಳ್ಳತನ: ಆರ್ ಎಫ್ ಒ ಗೆ ದೂರು

Picture of RB NEWS

RB NEWS

Bureau Report

ಮೂಡುಬಿದಿರೆ : ಮಿಜಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು,  ಅದಕ್ಕಾಗಿ ಮಿಜಾರು ಗುತ್ತು ಬ್ರಿಜೇಶ್ ಶೆಟ್ಟಿ ಯವರ ಜಮೀನಿನಲ್ಲಿದ್ದ ಮರಗಳನ್ನು ಮೀಸಲಿಟ್ಟಿದ್ದು, ಆದಿತ್ಯವಾರ  ರಾತ್ರಿ ಹೊತ್ತು ಯಾರು ಇಲ್ಲದ ಸಮಯ ಸಾಧಿಸಿ ಕಳ್ಳರು ತಮ್ಮ ಕೈಚಳಕವನ್ನು  ತೋರಿಸಿ ಮರಗಳನ್ನು ಕಳ್ಳತನ ಮಾಡಿರುತ್ತಾರೆ ಅಂಶ ಬೆಳಕಿಗೆ ಬಂದಿದೆ. 

ಘಟನಾ ನಡೆದಿರುವ  ಸ್ಥಳದ ಪರಿಸರದಲ್ಲಿ  ರಾಷ್ಟ್ರೀಯ  ಹೆದ್ದಾರಿ -169 ಕಾಮಗಾರಿ ನಡೆಯುತ್ತಿರುವುದು ಗಮನಾರ್ಹವಾಗಿದೆ. 

ಮರಗಳ ಕಳ್ಳತನ ಮಾಡಿದವರು ಕೂಡಲೇ‌   ದೇವಸ್ಥಾನದ ಸನ್ನಿಧಿಗೆ ಒಪ್ಪಿಸಬೇಕೆಂದು ಬ್ರಜೇಶ್ ಶೆಟ್ಟಿಯವರು ಆಗ್ರಹಿಸಿದ್ದಾರೆ.

ಈ ಘಟನೆಯ ಕುರಿತು ಮೂಡಬಿದಿರೆ ಆರ್ ಎಫ್ ಒ ಅವರಿಗೆ ಇ ಮೇಲ್ ಮೂಲಕ ದೂರು ನೀಡಿದ್ದಾರೆ. 

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top