ಕಾರ್ಕಳ : ಹೊಸ್ಮಾರು ಮಜ್ಮಉಸುನ್ನ ಎಜುಕೇಶನಲ್ ಟ್ರಸ್ಟ್ (ರಿ.) ಇದರ ಮಹಿಳಾ ಶರೀಅತ್ ವಿದ್ಯಾರ್ಥಿನಿಯರಿಗೆ ‘ಅಸ್ಸುಅದಾ’ ಪದವಿ ಪ್ರಧಾನ ಕಾರ್ಯಕ್ರಮದ ಅಂಗವಾಗಿ ಮಾರ್ಚ್ 8 ರಂದು ಸಂಜೆ ಗಂಟೆ 7 ರಿಂದ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ನೇತೃತ್ವದಲ್ಲಿ ‘ಮದನೀಯಂ ಮಜ್ಲಿಸ್’ ನಡೆಯಲಿದೆ.
ಮರ್ಹೂಮ್ ಉಪ್ಪಾಪ ಅಬ್ದರ್ರಹ್ಮಾನ್ ಮುಸ್ಲಿಯಾರ್ ಅವರ ಅನುಸ್ಮರಣೆ, ಜಲಾಲಿಯ್ಯ ರಾತೀಬ್ ಮಜ್ಲಿಸ್, ಮೌಲಿದ್ ಪಾರಾಯಣ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಅಬುಲ್ ಬುಶ್ರಾ ಬಿ.ಕೆ. ಅಬ್ದರ್ರಹ್ಮಾನ್ ಫೈಝಿ ಸಂಪ್ಯರವರು ಅಧ್ಯಕ್ಷತೆ ವಹಿಸಲಿದ್ದಾರೆ.
ಅಸ್ಸಯ್ಯಿದ್ ಪೂಕುಂಞಿ ಅಲ್ಹಾದಿ ತಂಙಳ್ ಉದ್ಯಾವರ, ಅಸ್ಸಯ್ಯಿದ್ ಅಬ್ದರ್ರಹ್ಮಾನ್ ಸಾದಾತ್ ತಂಙಳ್ ಬಾಅಲವಿ, ಡಾ| ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಅಸ್ಸಯ್ಯಿದ್ ಎಸ್.ಎಂ. ತಂಙಳ್ ಕುಂಜತ್ತೂರು, ಅಸ್ಸಯ್ಯಿದ್ ಸುಹೈಲ್ ತಂಙಳ್ ಮಾಡೂರು, ಇಸ್ಮಾಯಲ್ ಮದನಿ ಮಾವಿನಕಟ್ಟೆ, ಪಿ.ಪಿ. ಅಹ್ಮದ್ ಸಖಾಫಿ, ಶರೀಫ್ ಸಅದಿ ಕಿಲ್ಲೂರು, ಹೊಸ್ಮಾರು ಶೈಖ್ ಮುಹ್ಯಿಯುದ್ದೀನ್ ಜುಮ್ಮಾ ಮಸೀದಿ ಖತೀಬರಾದ ಅಬ್ದುಲ್ ರಶೀದ್ ಸಅದಿ ಅಲ್ಅಫ್ಲಲಿ, ಹೊಸ್ಮಾರು ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಾಂಶುಪಾಲ ಎಂ.ಹೆಚ್. ಸುಲೈಮಾನ್ ಸಅದಿ ಅಲ್ಅಫ್ಳಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




































