ಮಾನವನಿಗೂ ಮಣ್ಣಿಗೂ ಅವಿನಾಭಾವ ಸಂಬಂಧ : ಶಾಸಕ ಉಮಾನಾಥ ಕೋಟ್ಯಾನ್

Picture of RB NEWS

RB NEWS

Bureau Report

ಕಾರ್ಕಳ‌ : ಯುವಸಂಗಮ ಕಾಂತಾವರ (ರಿ.) ಇದರ ನೇತೃತ್ವದಲ್ಲಿ ಯುವ ಉತ್ಸಾಹಿ ಬಳಗ (ರಿ.) ,ಕೇಮಾರು ಇದರ ಸಹಭಾಗಿತ್ವದಲ್ಲಿ ನಡೆದ “ಕೆಸರ್ ಡ್ ಒಂಜಿ ದಿನ – 2025“ ಕಾರ್ಯಕ್ರಮದಲ್ಲಿ ಜರಗಿತು.

ಮೂಡುಬಿದಿರೆ ಶಾಸಕ ಉನಾನಾಥ ಕೋಟ್ಯಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ತುಳುನಾಡಿನ ಸರ್ವ ಋತುಗಳಿಗೆ, ಮಾಸಗಳಿಗೆ ಒಂದೊಂದು ರೀತಿಯಲ್ಲಿ ಮಹತ್ವ‌ಇದೆ. ಅವುಗಳು ಇಲ್ಲಿ ಸಂಸ್ಕಾರ, ಸಂಸ್ಕೃತಿ, ಆಹಾರ ಪದ್ಧತಿ‌ ಜೊತೆಗೆ ಜೀವನ ಶೈಲಿಯನ್ನು ತಿಳಿಯ ಪಡಿಸುತ್ತದೆ.
ಮನುಷ್ಯ‌ಮತ್ತು ಮಣ್ಣಿ‌ ಸಂಬಂಧಗಳ ಇಂದು ನಿನ್ನೆಯದಲ್ಲ. ಅನಾದಿಕಾಲದ ಇತಿಹಾಸವಿದೆ. ಕೃಷಿಯಿಂದ ದೈನಂದಿನ ಜೀವನ ಚಟುವಟಿಕೆಗಳಿಗೆ ಮಣ್ಣು ಆಧಾರವಾಗಿದೆ. ಮಣ್ಣಿನಲ್ಲಿ ರೋಗ ಗುಣಪಡಿಸಬಲ್ಲ ಶಕ್ತಿ ಅಡಕವಾಗಿದೆ. ಮಾನಸಿಕ ಹಾಗೂ ದೈಹಿಕ‌ ಸಂಬಂಧಪಟ್ಟ ದೃಢತೆಗೆ ತಾಂತ್ರಿಕ ಯುಗದಲ್ಲೂ ಬಳಕೆಯಾಗುತ್ತಿರುವುದು ಗಮನಾರ್ಹವಾಗಿದೆ ಎಂದರು.‌

ಕೇಮಾರು ಮಠದ ಶ್ರೀ ಈಶ ವಿಠಲ ಸ್ವಾಮೀಜಿ ದಿವ್ಯ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top