ಮಾಣಿ: ಯುವವಾಹಿನಿ (ರಿ.)ಮಾಣಿ ಘಟಕ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಮಾಣಿ ಇವುಗಳ ಸಂಯುಕ್ತ ಆಶ್ರಯದಲ್ಲಿವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ “ಮಾತೆಯ ಮಡಿಲು” ವಿಚಾರ ವಿನಿಮಯ ಕಾರ್ಯಕ್ರಮವು ಮಾಚ್೯ 8 ಶುಕ್ರವಾರ ಬೆಳಿಗ್ಗೆ 9-30 ಕ್ಕೆ ಮಾಣಿ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಜರುಗಲಿದೆ.
ಯುವ ವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ ಕೊಂಕಣಪದವು ಅಧ್ಯಕ್ಷತೆ ವಹಿಸಲಿದ್ದಾರೆ.
ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ( ರಿ.)ಮಾಣಿ ಯ ಮಹಿಳಾ ಅಧ್ಯಕ್ಷ ಹರಿಣಾಕ್ಷಿ ಉದ್ಘಾಟಿಸಲಿದ್ದಾರೆ.
ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರುನ ಮಹಿಳಾ ಸಂಘಟನಾ ನಿರ್ದೇಶಕಿ ನಯನ ಸುರೇಶ್, ಕೂಡಪದವು ಶಾಲಾ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕಿ ಆರತಿ ದಾಸಪ್ಪ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.)ಮಾಣಿ ಯ ಅಧ್ಯಕ್ಷ ಸುರೇಶ್ ಸೂರ್ಯ, ಯುವವಾಹಿನಿ( ರಿ.) ಮಾಣಿ ಘಟಕದ ಮಹಿಳಾ ನಿರ್ದೇಶಕಿ ಶಕೀಲಾ ಕೃಷ್ಣ ಮಿತ್ತಕೋಡಿ, ಮೊದಲಾದವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು.
ಸಂಪನ್ಮೂಲ ವ್ಯಕ್ತಿಗಳಾಗಿ "ಅಸ್ವಸ್ಥತೆಯ ಮಹಿಳೆ- ಸ್ವಸ್ಥ ಮನೆ" ಎಂಬ ವಿಚಾರವಾಗಿ ವಿಟ್ಲ ಸುರಕ್ಷಾ ಹೆಲ್ತ್ ಸೆಂಟರ್ ಡಾಕ್ಟರ್ ಗಾಯತ್ರಿ ಜಿ ಪ್ರಕಾಶ್, "ಕಾನೂನಿನ ಸಂರಕ್ಷಣೆಯಲ್ಲಿ ಮಹಿಳೆ "ಎಂಬ ವಿಷಯದ ಬಗ್ಗೆವಕೀಲೆ ಶೋಭಾ ಲತಾ ಸುವರ್ಣ ವಿಚಾರ ವಿನಿಮಯ ಮಾಡಲಿರುವರು ಎಂದು ಕಾರ್ಯಕ್ರಮದ ಸಂಚಾಲಕಿ ಡಾ. ತ್ರಿವೇಣಿ ರಮೇಶ್ ಮಜಲ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.






































