ಕಾರ್ಕಳ : ಸ್ತ್ರೀಯರು ಕೌಟುಂಬಿಕವಾಗಿಯೂ ಸಾಮಾಜಿಕವಾಗಿಯೂ ಪರಿಣಾಮಕಾರಿ ಪಾತ್ರವನ್ನು ವಹಿಸಬಲ್ಲರು .ವ್ಯವಹಾರ , ಉದ್ದಿಮೆ , ರಾಜಕಾರಣದಲ್ಲೂ ಕೂಡ ಅನೇಕ ಮಹಿಳೆಯರು ಸೀಮೋಲ್ಲಂಘನ ಸಾಧಿಸಿದ ಇತಿಹಾಸ ಇದೆ .ಮಹಿಳೆಯರು ಸಮಾಜಮುಖಿಯಾಗಿ ಬದುಕಿ ಲೋಕಕ್ಕೆ ಮಾರ್ಗದರ್ಶನ ನೀಡಿದ್ದಾರೆ .ಮಹಿಳೆಯರ ಬಹುಮುಖಿ ಪಾತ್ರ ಯಾವತ್ತೂ ಪ್ರಾತಃಸ್ಮರಣೀಯ ಎಂದು ಯಕ್ಷಗಾನ ಕಲಾವಿದೆ ತಾಳಮದ್ದಳೆ ಅರ್ಥದಾರಿ ಜಯಶ್ರೀ ಶೆಟ್ಟಿ ಹೇಳಿದ್ದಾರೆ.
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕಾರ್ಕಳ ಹೊಸಸಂಜೆ ಬಳಗ ಆಯೋಜಿಸಿದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ರೋಟರಿ ಕ್ಲಬ್ ಮಾಜಿ ಅಧ್ಯಕ್ಷೆ ಸುವರ್ಣಾ ನಾಯಕ್ , ಮುನಿಯಾಲು ಸರಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಅರುಣಾ ಎಸ್ ., ಹಿರಿಯ ನಾಗರಿಕ ಭಾಸ್ಕರ ಕಾರಂತ , ಕಾರ್ಕಳ ಪುರಸಭೆಯ ಮಾಜಿ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ , ಯಕ್ಷಗಾನ ಗುರು ಹರೀಶ ಶೆಟ್ಟಿ ಸೂಡ , ವಿಜಯಾ ಬ್ಯಾಂಕ್ ನಿವೃತ್ತ ಸೀನಿಯರ್ ಮ್ಯಾನೇಜರ್ ಕೆ . ಎ . ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು

.
ಸಾಹಿತ್ಯ ಸಂಘದ ಗೌರವಾಧ್ಯಕ್ಷ ತುಕಾರಾಮ ನಾಯಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು .
ಜಯಲಕ್ಷ್ಮಿ ಶೆಟ್ಟಿ ಸ್ವಾಗತಿಸಿದರು .ಹೊಸಸಂಜೆ ಬಳಗದ ಅಧ್ಯಕ್ಷ ಆರ್ . ದೇವರಾಯ ಪ್ರಭು ಕಾರ್ಯಕ್ರಮ ಸಂಯೋಜಿಸಿದರು . ಬೇಬಿ ಶೆಟ್ಟಿ ವಂದಿಸಿದರು .


























