ಶಾಲೆಗೆ ರಜೆ ಇದೆಯಾ?
ಮಳೆಯ ರಜೆ – ಅನಾಹುತಕ್ಕೆ ದಾರಿಯಾಗದಿರಲಿ –ಡಾ.ಮಾಲತಿ ಪೈ

ಎಲ್ಲಾ ಕಡೆಯೂ ನೋಡಿದರೂ ವಿಪರೀತ ಮಳೆಯದ್ದೇ ಸುದ್ದಿ. ಮಕ್ಕಳಿಗಂತೂ ಮಳೆಯ ರಜೆ ಎಂದರೆ ಖುಷಿಯೋ ಖುಷಿ. ಆದರೆ ವಿಪರೀತ ಮಳೆಯೊಂದಿಗಿನ ಖುಷಿಯೊಡನೆ ಮಕ್ಕಳು, ಪೋಷಕರು ಅತೀ ಅವಶ್ಯಕವಾಗಿ ಜಾಗರೂಕರಾಗಿರಬೇಕಾದ ಕೆಲ ವಿಷಯಗಳು.

- ಮಕ್ಕಳಿಗೆ ರಜೆ ಕೊಡುವುದು ಅವರ ಸುರಕ್ಷತೆಗೇ ಹೊರತು, ಮಳೆಯೊಡನೆ ಆಟವಾಡಲು ಅಲ್ಲ ಎಂಬದನ್ನು ಮನದಲ್ಲಿಟ್ಟುಕೊಳ್ಳಿ.
- ಮನೆಯ ಸುತ್ತಮುತ್ತಲಿನ ಗುಡ್ಡಗಳು, ಕಾಂಪೌಂಡ್ ಗಳು ಅತೀವ ಒದ್ದೆಯಾಗಿರುವುದರಿಂದ ಜರಿದು ಬೀಳುವ ಸಾಧ್ಯತೆ ಅಧಿಕವಾಗಿರುವುದರಿಂದ ಮಕ್ಕಳು ಹೊರಗಡೆ ಹೋಗದ ರೀತಿಯಲ್ಲಿ ಗಮನಹರಿಸಿ.
- ಜರಿದು ಬೀಳುವುದನ್ನು ತಪ್ಪಿಸಲು ಮಳೆಯ ಬಿಡುವಿನಲ್ಲಿ ಬೇಕಾದ ಮಂಜಾಗೃತಾ ಕ್ರಮಗಳನ್ನು ಕೈಗೊಂಡು ಅದನ್ನು ಸರಿಪಡಿಸಲು ಸಿದ್ದರಾಗಿ.
- ಬಾವಿಯ ಕಟ್ಟೆಯ ಕಡೆ ಮಕ್ಕಳು ಹೋಗುವುದನ್ನು ತಡೆಯಿರಿ, ವಿಪರೀತ ಮಳೆಯಿಂದ ಪಾಚಿ ಹಿಡಿದು ಜಾರಿ ಬೀಳುವ ಸಾಧ್ಯತೆ ಅಧಿಕ.
- ಬಾವಿಯಿಂದ ನೀರೆತ್ತುವಾಗ ದಯವಿಟ್ಟು ಕಟ್ಟೆಯನ್ನು ಮುಟ್ಟದಂತೆ ಗಮನಹರಿಸಿ.
- ಅಲ್ಲಲ್ಲಿ ವಿದ್ಯುತ್ ತಂತಿಗಳು, ಮರಗಳು ಬೀಳುವ ಸಾಧ್ಯತೆ ಇರುವುದರಿಂದ ಅದನ್ನು ಗಮನಹರಿಸಿ ತಕ್ಷಣವೇ ಇಲಾಖೆಗೆ ವಿವರ ನೀಡಿ.
- ವಿದ್ಯುತ್ ತಂತಿಗಳ ಕುರಿತು ಜಾಗರೂಕರಾಗಿರಲು ಮಕ್ಕಳಿಗೆ ಖುದ್ದಾಗಿ ಮನವರಿಕೆ ಮಾಡಿಕೊಡಿ.
- ರಜೆಯ ಖುಷಿಯಲ್ಲಿ ಕೆರೆ, ನದಿಗಳ ಹತ್ತಿರ ಮಕ್ಕಳು ಹೋಗುವುದನ್ನು ತಪ್ಪಿಸಿ, ಉಕ್ಕಿ ಹರಿಯುವ ನೀರಿನಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದನ್ನು ಮಕ್ಕಳಿಗೆ ಮನದಟ್ಟು ಮಾಡಿಕೊಡಿ.
- ಮಕ್ಕಳಿಗೆ ರಜೆ ಶಾಲೆಗೇ ಹೊರತು ವಿದ್ಯಾಭ್ಯಾಸಕ್ಕಲ್ಲ ಎಂಬುದನ್ನೂ ಗಮನದಲ್ಲಿಟ್ಟು ಮನೆಯಲ್ಲಿಯೇ ಕಲಿಯಲು ಖುದ್ದಾಗಿ ಪೋಷಕರೇ ಅನುವು ಮಾಡಿಕೊಡಿ.
- ಅಧಿಕ ಹೊತ್ತು ಮೊಬೈಲಿನಲ್ಲೇ ಬಿದ್ದಿರದೆ, ಸುತ್ತಮುತ್ತಲಿನ ವಾತಾವರಣದ ಬಗ್ಗೆ, ಅದರಿಂದಾಗುವ ಅನಾಹುತಗಳ ಬಗ್ಗೆ ಮನದಟ್ಟು ಮಾಡಿಕೊಡಿ.
- ಅನಾಹುತ ಸಂಭವಿಸಿ ದುಃಖಿತರಾಗುವುದರ ಹೊರತು ಅನಾಹುತ ತಪ್ಪಿಸಲು ಬೇಕಾದ ಮುಂಜಾಗೃತಾ ಕ್ರಮವನ್ನು ತಕ್ಷಣವೇ ಕೈಗೊಳ್ಳಿ.
- ಮಕ್ಕಳಿಗೆ ಆ ಕಾರ್ಯ ಮಾಡಬೇಡಿ ಎಂದು ಗದರಿಸುವ ಬದಲು, ಅದು ಯಾಕೆ ಮಾಡಬಾರದು ಎಂದು ಶಾಂತಿಯಿಂದ ಮನವರಿಕೆ
ಮಾಡಿಕೊಡಿ.
11 ಯೋಗ ಪ್ರಾಣಾಯಾಮ ಉಸಿರಾಟದ ವ್ಯಾಯಾಮಗಳು ಧ್ಯಾನ ಜಪ ತಪ ವನ್ನು ನಿರಂತರವಾಗಿ ರೂಡಿಸಿಕೊಳ್ಳಿ - ಕೊನೆಯದಾಗಿ ಯಾರೇ ಸಹಾಯ ಕೇಳಿದರೂ ಇಲ್ಲ ಎನ್ನಬೇಡಿ. ನಮ್ಮ ಮನೆಯೊಂದಿಗೆ ಇನ್ನೊಬ್ಬರ ಮನೆಯೂ ಸಂತೋಷವಾಗಿರಲಿ.
- ಪೊಲೀಸ್, ಆ್ಯಂಬುಲೆನ್ಸ್, ಫೈರ್‌ಗೆ ಒಂದೇ ನಂಬರ್, 108 ಸಮಸ್ಯೆಗಳಿಗೆ ಪರಿಹಾರ 112 ನೆನಪಿನಲ್ಲಿಡ ಲು ಮರೆಯಬೇಡಿ































