ಮಲ್ಪೆ : ಮೀನು ಕಳವು ಆರೋಪ ; ಮಹಿಳೆಯನ್ನು ಕಟ್ಟಿ ಹಾಕಿ ಕಪಾಲಮೋಕ್ಷ !


ಉಡುಪಿ : ಮೀನು ಕದ್ದ ಆರೋಪದ ಹಿನ್ನಲೆಯಲ್ಲಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಲಾದ ಘಟನೆ ಮಲ್ಪೆಯಲ್ಲಿ ಬೆಳಕಿಗೆ ಬಂದಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಬಿಡುಗಡೆಗೊಂಡಿರುವ ವೀಡಿಯೊದಲ್ಲಿ ಕಂಡು ಬಂದಿರುವಂತೆ, ಮಲ್ಪೆ ಬಂದರಿನಲ್ಲಿ ಮೀನು ಇಳಿಸುವಾಗ ಮೀನುಗಾರ ಮಹಿಳೆಯೊಬ್ಬರು ಇನ್ನೊಬ್ಬ ಮಹಿಳೆಯನ್ನು ಹೊಡೆಯುತ್ತಾ ದೋಣಿಗಳಿಂದ ಮೀನು ಕದ್ದಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಸೀಗಡಿ ಕಳ್ಳತನದ ಆರೋಪದ ಮೇಲೆ ದೋಣಿ ಸಿಬ್ಬಂದಿ ಮಹಿಳೆಯನ್ನು ಪ್ರಶ್ನಿಸಿದಾಗ ಅವರು ಆರಂಭದಲ್ಲಿ ಆರೋಪಗಳನ್ನು ನಿರಾಕರಿಸಿದರು ಎಂದು ಮೂಲಗಳಿಂದ ತಿಳಿದು ಬಂದಿದೆ.


ಆದರೆ, ನಂತರ ಈ ವಿಷಯವನ್ನು ಮಲ್ಪೆ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಕಳ್ಳತನವನ್ನು ಒಪ್ಪಿಕೊಂಡಿದ್ದಾಳೆ ಎಂದು ವರದಿಯಾಗಿದೆ.
ಕಾನೂನಿಗೆ ಪ್ರತಿಯೊಬ್ಬರು ಗೌರವಿಸಲೇ ಬೇಕು. ಮೀನು ಕಳವು ಆರೋಪದ ಹಿನ್ನಲ್ಲೆಯಲ್ಲಿ ಆರೋಪಕ್ಕೆ ಗುರಿಯಾದ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಸಾರ್ವಜನಿಕವಾಗಿ ಥಳಿಸಿದ ಅವಮಾನಿಯ ಘಟನೆ ನಡೆದಿರುವುದು ಗಮನಾರ್ಹವಾಗಿದೆ.






































