ಮಲಮಿಶ್ರಿತ ತ್ಯಾಜ್ಯ ನೀರಿಗೆ ಮುಕ್ತಿ‌: “ಆರ್.ಬಿ.ನ್ಯೂಸ್” ನ ಪರಿಣಾಮ ವರದಿಗೆ ತ್ವರಿತಗತಿಯಲ್ಲಿ ಸ್ಪಂದಿಸಿದ ನಲ್ಲೂರು ಗ್ರಾಮ ಪಂಚಾಯತ್

Picture of RB NEWS

RB NEWS

Bureau Report


ಕಾರ್ಕಳ : ಕಳೆದ ಕೆಲದಿನಗಳಿಂದ ನಲ್ಲೂರು ಗ್ರಾಮ ಪಂಚಾಯತ್ ನ ಕೂದಳೆಯ ದೂರದಲ್ಲಿ ಕಟ್ಟಡವೊಂದರ ತ್ಯಾಜ್ಯ‌ಗುಂಡಿಯಿಂದ ಪಿಟ್ ಮೂಲಕವಾಗಿ ಹೊರ ಹರಿದು ಬರುತ್ತಿದ್ದ ತ್ಯಾಜ್ಯ ಸಮಸ್ಸೆಯು ಆರ್.ಬಿ.ನ್ಯೂಸ್ ನ ಪರಿಣಾಮಕಾರಿ ವರದಿ ಡಿ.30ರಂದು ಪ್ರಕಟಗೊಂಡಿದೆ. ಇದಾದ 24 ಗಂಟೆಯೊಳಗಾಗಿ ಮುಕ್ತಿದೊರೆತ್ತಿದೆ. ನಲ್ಲೂರು ಗ್ರಾಮ ಪಂಚಾಯತ್ತಿನ ಆಡಳಿತ ವರ್ಗದವರು ತ್ವರಿತಗತಿಯಲ್ಲಿ ವರದಿಗೆ ಸ್ಪಂದನೆ ನೀಡಿದ್ದು, ದುರಸ್ಥಿ ಕಾಮಗಾರಿಯೂ ಡಿ.31ಕ್ಕೆ ಭರದಿಂದ ಸಾಗುತ್ತಿದೆ.

ಬಜಗೋಳಿಯಿಂದ ಹೊಸ್ಮಾರು ಕಡೆಗೆ ಹೋಗುವಾಗ ಬಲಭಾಗದಲ್ಲಿ ನಲ್ಲೂರು ಗ್ರಾಮ ಪಂಚಾಯತ್ ಕಚೇರಿ ಕಾಣಸಿಗುತ್ತದೆ.‌ ಇಲ್ಲಿಂದ ಸುಮಾರು 50 ಮೀಟರ್ ದೂರದಲ್ಲಿ ಈ ಸಮಸ್ಸೆ ಎದುರಾಗಿದೆ.‌

ವಾಣಿಜ್ಯ ಸಂಕೀರ್ಣವೆಂದು ಸ್ಥಳೀಯಾಡಳಿತವು‌ ಆರಂಭದಲ್ಲಿ ಈ ಸಂಕೀರ್ಣಕ್ಕೆ ಪರವಾನಿಗೆ ನೀಡಿದೆ. ನಾನಾ ಕಾರಣಗಳಿಂದ ಪ್ರಸಕ್ತ ದಿನಗಳಲ್ಲಿ ಒಂದಷ್ಟು‌ ಪರಿವರ್ತನೆಯೊಂದಿಗೆ ಜನವಸತಿ ಕೇಂದ್ರವನ್ನಾಗಿ ಮಾರ್ಪಡು ಮಾಡಿರುವ ಅಂಶ ಬಯಲಾಗಿದೆ.

ಬಳಿಕ ಸ್ಥಳೀಯವಾಗಿ ನಾನಾ ಸಮಸ್ಸೆ ಎದುರುಗೊಂಡಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ವಾಣಿಜ್ಯ ಸಂಕೀರ್ಣಕ್ಕೆಂದು ಕಿರಿದಾದ ತ್ಯಾಜ್ಯ ಗುಂಡಿ‌ಯು ಈ ಕಟ್ಟಡದ ಸನ್ನಿಹದಲ್ಲಿ ಇದೆ. ತ್ಯಾಜ್ಯ ‌ಪಿಟ್‌ ಸಾರ್ವನಿಕ ರಸ್ತೆ ಸನ್ನಿಹದಲ್ಲಿ‌ ರಚಿಸಲಾಗಿದ್ದು, ಪರಿಣಾಮವಾಗಿ ಕಳೆದ ಕೆಲ ತಿಂಗಳುಗಳಿಂದ ಮಳೆಗಾಲ‌ ಕಡಿಮೆಯಾಗುತ್ತಿದ್ದಂತೆ ಗಬ್ಬುವಾಸನೆ ಬೀರುತ್ತಿದೆ.

ಎದುರುಗಡೆ ಹಾದೂ ಹೋಗಿರುವ ಲೋಕೋಪಯೋಗಿ ಇಲಾಖೆಯ ಅಧೀನಕ್ಕೊಳಪಟ್ಟ ರಸ್ತೆ ಮಾರ್ಜಿನ್ ಗೆ ತ್ಯಾಜ್ಯ ನೀರು ಲೀನವಾಗುತ್ತಿದೆ. ಅದೇ ರಸ್ತೆಯ ಇನ್ನೊಂದು ಪಾಶ್ವ ೯ದಲ್ಲಿ ಬಜಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ.‌

ಜಿಲ್ಲಾಡಳಿತ ಮಧ್ಯಪ್ರವೇಶಿಸಲಿ….
ಕಳೆದ ಕೆಲ ವರ್ಷಗಳ ಹಿಂದೆ ಬಜಗೋಳಿ ಪೇಟೆಯಲ್ಲಿ ಕಾರ್ಯಚರಿಸುತ್ತಿದ್ದ ಹೋಟೆಲ್ ಗಳ ತ್ಯಾಜ್ಯ ನೀರು ನಲ್ಲೂರು ಗ್ರಾಮ ಪಂಚಾಯತ್ ಗೆ ಹರಿಬಿಡಲಾಗುತ್ತಿತ್ತು. "ಆದಾಯ ಮುಡಾರಿಗೆ ತ್ಯಾಜ್ಯ ನಲ್ಲೂರಿಗೆ" ಎಂಬ ವಿಶೇಷ ವರದಿ ಮಾಧ್ಯಮದಲ್ಲಿ ಪ್ರಕಟವಾಗುತ್ತಿದ್ದಂತೆ ಉಡುಪಿ ಜಿಲ್ಲಾಡಳಿತವು ಸಕಾರತ್ಕಕ ಸ್ಪಂದನೆ ನೀಡಿತ್ತೆಂಬುವುದನ್ನು ಸ್ಮರಿಸಬಹುದು. ಆಗಿನ ಜಿಲ್ಲಾಧಿಕಾರಿ ಅವರು ಖುದ್ದಾಗಿ ನಲ್ಲೂರು ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ ಸಮಸ್ಸೆಗೆ ಶಾಶ್ವತ ಪರಿಹಾರ ನೀಡಿದ್ದರು.


ಸಮಸ್ಸೆ ಗಂಭೀರ ಸ್ವರೂಪದಾಗಿದ್ದು, ಡಿ.26ರಂದು ಕಟ್ಟಡದ ಮಾಲಕರಿಗೆ ನಲ್ಲೂರು ಗ್ರಾಮ ಪಂಚಾಯತ್ ತಿಳುವಳಿಕೆ ಪತ್ರ ನೀಡಿರುವ ಮಾಹಿತಿ ಲಭಿಸಿದೆ.
ಅದೇ ಸಂದರ್ಭದಲ್ಲಿ ನಲ್ಲೂರು ಗ್ರಾಮ ಪಂಚಾಯತ್ ನಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಓ, ಬಜಗೋಳಿ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top