



ಮರಿಗಳಿಗೆ ಜನ್ಮ ನೀಡಿದ ಸಂತಾನ ಹರಣ ಶಸ್ತ್ರಚಿಕಿತ್ಸೆ ಗೊಳಗಾದ ನಾಯಿಗಳು?!
ಕಾರ್ಕಳ: ಸಂತಾನ ಹರಣ ಶಸ್ತ್ರ ಚಿಕಿತ್ಸೆಗೊಳಗಾದ ನಾಯಿಗಳು ಮರಿಗಳಿಗೆ ಜನ್ಮನೀಡಿದ ವಿದ್ಯಾಮಾನ ಕಾರ್ಕಳದಲ್ಲಿ ನಡೆದಿದೆ.
-ಕಾರ್ಕಳ ಪುರಸಭೆಯಲ್ಲಿ ಹಿರಿಯ ಸದಸ್ಯ ಅಶ್ಪಕ್ ಅಹಮ್ಮದ್ ಸಾಮಾನ್ಯ ಸಭೆಯಲ್ಲಿ ಮೇಲಿನ ವಿಚಾರದ ಕುರಿತು ಪ್ರಸ್ತಾಪಿಸಿದರು.
ಮೂರು ಲಕ್ಷ ಭರಿಸಿ ಸುಮಾರು 3೦೦ ನಾಯಿಗಳಿಗೆ ಸಂತಾನ ಹರಣ ಶಸ್ತçಚಿಕಿತ್ಸೆ ಕಾರ್ಯ ನಡೆಸಿದ ಬಳಿಕ ಸ್ಥಳೀಯ ನಾಗರಿಕರಲ್ಲಿ ಒಂದಿಷ್ಟು ನೆಮ್ಮದಿ ಕಂಡಿತು. ಆದರೆ ತಿಂಗಳು ಕಳೆಯುತ್ತಿದ್ದಂತೆ ನಾಯಿಗಳ ಸಂಖ್ಯೆ ವೃದ್ಧಿಸತೊಡಗಿದೆ. ಸಂತಾನ ಹರಣ ಶಸ್ತ್ರ ಚಿಕಿತ್ಸೆಗೊಳಪಟ್ಟ ಹಲವು ನಾಯಿಗಳು ಮರಿಗೆ ಜನ್ಮನೀಡಿದೆ ಎಂಬ ಗಂಭೀರ ಆರೋಪ ಗೈದಿರು.
ಹಾಗಾದರೆ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತೋ ಅಥವಾ ಅಂತಾನ ಅಭಿವೃದ್ಧಿಗೆ ಶಸ್ತ್ತ ಚಿಕಿತ್ಸೆ ನಡೆಸಲಾಯಿತ್ತೋ ಎಂದು ಪ್ರಶ್ನೆಯನ್ನು ಸಭೆಯ ಮುಂದಿಡುತ್ತಿದ್ದಂತೆ ಭಾರೀ ನಗೆ ಅಲೆ ಕಂಡು ಬಂತು.
ಅವರ ಪ್ರಶ್ನೆ ಉತ್ತರಿಸಿದ ಅಧಿಕಾರಿ, ಆ ಸಂದರ್ಭದಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ಸುಮಾರು 7೦೦ ಬೀದಿನಾಯಿಗಳು ಇದ್ದವು ಎಂದು ಅಂದಾಜಿಸಲಾಗಿತ್ತು. ಅದರಲ್ಲಿ ಸುಮಾರು 3೦೦ರಷ್ಟು ನಾಯಿಗಳೀಗೆ ಮಾತ್ರ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಉಳಿದವುಗಳಿಗೆ ಸಾಧ್ಯವಾಗಲಿಲ್ಲ. ಅವುಗಳಿಂದ ಬೀದಿ ನಾಯಿಗಳ ಸಂಖ್ಯೆ ವೃದ್ಧಿಯಾಗಿರಬಹುದೆಂಬ ಸಲಹೆ ನೀಡಿದರು.
ಬೀದಿನಾಯಿಗಳ ಸಂಖ್ಯೆ ವೃದ್ಧಿಸಿರುವುದರಿಂದ ನಾಗರಿಕರು ಮನೆಯಿಂದ ಹೊರಬಾರದಷ್ಟು ಭಯಭೀತರಾಗಿದ್ದಾರೆ. ಕೂಡಲೇ ಉಳಿದ ನಾಯಿಗಳಿಗೂ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡುವಂತೆ ತಿಳಿಸಿದ್ದರು.
ಬೆಂಕಿ ನಂದಿಸಿದಕ್ಕೆ ರೂ.24 ಲಕ್ಷ ವೆಚ್ಚ
ಬೇಸಿಗೆ ಕಾಲ ಆರಂಭವಾಗುತ್ತಿದೆ. ಕರಿಯಕಲ್ಲು ತ್ಯಾಜ್ಯ ವಿಲೇವಾರಿ ಘಟಕದ ಬಗ್ಗೆ ಯಾವ ರೀತಿಯಲ್ಲಿ ಮುನ್ನೆಚ್ಚರಿಕೆ ವಹಿಸಿದ್ದೀರಿ ಎಂದು ಸದಸ್ಯ ಸೋಮನಾಥ ನಾಯ್ಕ ಪ್ರಶ್ನಿಸಿದರು.
ಕಳೆದ ಎರಡು ವರ್ಷಗಳ ಹಿಂದೆ ಆ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿಯ ಜ್ವಾಲೆ ಇಡೀ ಪ್ರದೇಶಕ್ಕೆ ವ್ಯಾಪಿಸಿ ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು. ಅದಕ್ಕಾಗಿ ಪುರಸಭಾ ವಿನಿಯೋಗಿಸಿದ ಮೊತ್ತ ಬರೋಬರಿ ರೂ.24 ಲಕ್ಷ ಎಂಬುವುದನ್ನು ಮರೆಯಬೇಡಿ. ಆ ಮೊತ್ತ ನಾಗರಿಕರು ಪಾವತಿಸಿದ ತೆರೆಗೆಯದೇ ಆಗಿದೆ ಎಂದರು.
ಕಮಾನು ನಿರ್ಮಾಣಕ್ಕೆ ರೂ.2೦ ಲಕ್ಷ
ಕಳೆದ ಬಾಹುಬಲಿ ಮಹಾಮಸ್ತಕಾಭಿಷೇಕದ ಸಂದರ್ಬದಲ್ಲಿ ಜೋಡುರಸ್ತೆ ಪರಿಸರದಲ್ಲಿ ಅಳವಡಿಸಿದ ಕಮಾನು ಗುಜುರಿಗೆ ಸೇರಿತ್ತಿದೆ. ಜೋಡುರಸ್ತೆ ಪರಿಸರದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಸಂದರ್ಭದಲ್ಲಿ ಕಮಾನು ತೆರವುಗೊಳಿಸಲಾಗಿತ್ತು. ಇದೀಗ ಅದಕ್ಕೆ ದಿಕ್ಕು ದೆಸೆ ಇಲ್ಲ. ರಸ್ತೆ ವಿಸ್ತರಣೆಯಾಗಿದೆ. ಕಮಾನು ವಿಸ್ತರಣೆ ಮಾಡಿ ಅಳವಡಿಸುವ ಕಾರ್ಯ ಪುರಸಭೆಯಿಂದ ಆಗಬೇಕಾಗಿದೆ. ಈ ವಿಚಾರವನ್ನು ಕಳೆದ ಕೆಲ ಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು ಎಂದು ಹಿರಿಯ ಸದಸ್ಯ ಅಶ್ಪಕ್ ಅಹಮ್ಮದ್ ಸಭೆಯ ಗಮನಕ್ಕೆ ತಂದರು.
ಅಕ್ಕೆ ಉತ್ತರಿಸಿದ ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ, ವಿಸ್ತರಣೆಗೊಂಡ ರಸ್ತೆಗೆ ಹಳೆ ಕಮಾನು ಜೋಡಣೆ ಮಾಡಿ ಅಳವಡಿಸಲು ರೂ. 2೦ ಲಕ್ಷ ಅಂದಾಜು ವೆಚ್ಚ ತಗಲಬಹುದು ಎಂದರು.
ಉಚ್ಚಂಗಿ ಕಾಲನಿ ನಿಮಾಸಿಗಳಿಗೆ ಆರ್ಟಿಸಿ
ನಗರದ ಹೃದಯಭಾಗದಲ್ಲಿ ತಲತಲಾಂತರಗಳಿAದ ಜೀವನ ಸಾಗಿಸುತ್ತಾ ಬಂದಿರುವ ರಾಣೆಯಾರ್ ಯಾ ರಣವೀರರಿಗೆ ಸೇರಿದ 6೦ ಮನೆಗಳಿವೆ. ಈ ಹಿಂದೆ ತನ್ನ ಅವಧಿಯಲ್ಲಿ 27 ಮನೆಗಳಿಗೆ ಆರ್.ಟಿ.ಸಿ ನೀಡುವಲ್ಲಿ ಸಫಲನಾಗಿದ್ದೇನೆ ಎಂದು ಮಾಜಿ ಅಧ್ಯಕ್ಷೆ ಪ್ರತಿಮಾ ರಾಣೆ ಸಭೆಗೆ ತಿಳಿಸಿದ್ದರು.
ಉಳಿದ 33 ಮನೆ ಮಂದಿಗೆ ಆರ್ ಟಿ ಸಿ ನೀಡುವ ಪ್ರಯತ್ನ ನಡೆಸಿದ್ದೇನೆ. ಅದಕ್ಕೆ ಪುರಸಭಾ ಸದಸ್ಯರಾದ ಶುಭದ ರಾವ್ ಹಾಗು ಪ್ರದೀಪ್ ರಾಣೆ ಸಹಕರಿಸಿದ್ದಾರೆ.
ತಾಲೂಕು ಆಡಳಿತದಿಂದ ನಡೆದ ಎಸ್ಸಿ ಹಾಗೂ ಎಸ್ಟಿ ಕುಂದುಕೊರತೆ ಸಭೆಯಲ್ಲಿ ಹಾಗೂ ಜಿಲ್ಲಾಧಿಕಾರಿಗೆ ಮನವಿ ನೀಡಿದ ಸಂದರ್ಭದಲ್ಲಿ ಈ ಕುರಿತು ಪ್ರಸ್ತಾಪಿಸಿ ಸರಕಾರಿ ಮಟ್ಟದಲ್ಲಿ ಪತ್ರ ವ್ಯವಹಾರ ನಡೆಸಿದ್ದೇನೆ ಎಂದರು.





































