ಮರಳಿ ಬಾ….ಅರ್ಜುನ ….ಕೇರಳಕ್ಕೆ ಕೇರಳವೇ ಅತ್ತೂಗರೆದು ಪ್ರಾರ್ಥಿಸುತ್ತಿದೆ…!!

Picture of RB NEWS

RB NEWS

Bureau Report

ಮರಳಿ ಬಾ….ಅರ್ಜುನ ….ಕೇರಳಕ್ಕೆ ಕೇರಳವೇ ಅತ್ತೂಗರೆದು ಪ್ರಾರ್ಥಿಸುತ್ತಿದೆ..!!

ಈ ವಿದ್ಯಾಮಾನಗಳನ್ನೆಲ್ಲ ಕಂಡು ಕರ್ನಾಟಕ ಜನತೆ, ಅಧಿಕಾರಿಗಳೇ ದಂಗಾಗಿದ್ದಾರೆ.
ಕೇರಳ ತೋರುವ ಕಾಳಜಿ, ಮಾನ್ಯತೆ ಮತ್ತು ವಿಷಯದ ಗಂಭೀರತೆ , ಪರಿಗಣಿಸಿ ಕನ್ನಡಿಗರೇ ಬೆಕ್ಕಸಬೆರಗಾಗಿದ್ದಾರೆ…!

ಇಷ್ಟಕ್ಕೂ….
ಮಣ್ಣಿನಡಿ ಸಿಲುಕಿರೋದು ಯಾರು..?
ಪ್ರಭಾವಿ ರಾಜಕಾರಣಿಯೇ..? ಮುತ್ಸದ್ದಿಯೇ?
ವಿಐಪಿಯೇ…??- ಇದು ಪೊಲೀಸರೇ ಕೇಳಿದ ಮೊದಲ ಪ್ರಶ್ನೆ..!!
ಹೌದು..
ಕೇರಳದಲ್ಲಿ ಗುಡಿಸಲಿನಲ್ಲಿ ವಾಸಿಸುವ ಕಟ್ಟಕಡೆಯ ದರಿದ್ರನೂ ಸಂಕಷ್ಟ ದ ಸಮಯದಲ್ಲಿ ಇಡಿ ರಾಜ್ಯಕ್ಕೆ ವಿಐಪಿಯಾಗಿ ಬದಲಾಗುತ್ತಾನೆ..!
ಮನುಷ್ಯನೆಂಬ ಪರಿಗಣನೆ ಸಿಗುತ್ತದೆ. ಇದರಲ್ಲಿ ಜಾತಿ,ಮತ ಬೇಧಗಳ ರಾಜಕೀಯವೇ ಇಲ್ಲ..!
ಇಂಥ,ಮನೋಸ್ಥಿತಿಯನ್ನು ಇಲ್ಲಿ ಮಾಧ್ಯಮಗಳು, ರಾಜಕೀಯ ರೂಪಿಸಿದೆ ಎಂದರೆ ಉತ್ಪ್ರೇಕ್ಷೆಯಲ್ಲ!

ಇಂಥ ಮಾನುಷಿಕ ಪರಿಗಣನೆ ಕರ್ನಾಟಕದಲ್ಲಿ ಕಾಣೆಯಾದ ಕಾರಣವೇ ಶಿರೂರಿನ ಬೆಳವಣಿಗೆ ಪೋಲೀಸರಲ್ಲೇ ಅಚ್ಚರಿ ಹುಟ್ಟಿಸಿತು!
ಜತೆಗೆ ಕರ್ನಾಟಕಕ್ಕೆ ಕಳಂಕ ತರುವಂಥ ವರದಿಗಳೂ ಬಿತ್ತರವಾಯಿತು.!
ಶಿರೂರಿನಲ್ಲಿ ಗುಡ್ಡೆಯೇ ಯಮಸದೃಶವಾಗಿ ಕುಸಿದು ಎಷ್ಟು ಜೀವ ಬಲಿತೆಗೆಯಿತೋ…??
ಇನ್ನೂ ನಿಖರ ಲೆಕ್ಕವಿಲ್ಲ.
ಅದರಲ್ಲಿದ್ದವರು ಯಾವ್ಯಾವ ರಾಜ್ಯದವರೋ ಗೊತ್ತಿಲ್ಲ. ಆದರೆ ಎಲ್ಲರೂ ಜೀವ ಸದೃಶ ಮನುಷ್ಯರು ತಾನೇ??
ಅವರಿಗೂ ಮನೆ, ಮಡದಿ, ಕುಟುಂಬ ಸಂಸಾರಗಳಿವೆ ತಾನೇ??
ಅವರೂ ನಮ್ಮವರೇ ತಾನೇ..??

ಈ ಕಾಳಜಿಯಿಂದಲೇ ಕೇರಳ ಶಿರೂರಿನಲ್ಲಿ ಅರ್ಜುನನ್ನು ಮತ್ತು ಆತನ ಲಾರಿಯನ್ನು ಸಮರೋಪಾದಿಯಲ್ಲಿ ಶತಪ್ರಯತ್ನಗಳಿಂದ ಹುಡುಕುತ್ತಿದೆ. ಕಲ್ಲಿಕೋಟೆಯಲ್ಲಿರುವ ಚಾಲಕ ಅರ್ಜುನನ ಮನೆಗೆ ಪ್ರಮುಖ ನಾಯಕರೆಲ್ಲರೂ ತೆರಳಿ ಆ ಕುಟುಂಬಕ್ಕೆ ಧೈರ್ಯ ನೀಡಿ ಸಂತೈಸುತ್ತಿವೆ.
ಜಗತ್ತಿನ ಎಲ್ಲೇ ಕೇರಳೀಯರಿಗೆ ಈರೀತಿಯಲ್ಲಿ ಏನೇ ತೊಂದರೆಗಳಾದರೂ ಸರಕಾರ, ಮಾಧ್ಯಮ, ನಾಡಜನತೆ ಒಂದಾಗಿ ಸಕಾಲಿಕವಾಗಿ ಸ್ಪಂದಿಸುತ್ತಾರೆ.
ಇದರಲ್ಲಿ ಅಚ್ಚರಿಯೇನಿಲ್ಲ..
ಇದು ಮಾನುಷಿಕ ಪರಿಗಣನೆಯ ಧರ್ಮ..

ಆದರೆ ಇಂಥ ನಡತೆ ಅನ್ಯ ರಾಜ್ಯಗಳಲ್ಲಿ ಅಪರೂಪ.
ಸಿನಿಮಾ ನಟನಟಿಯರು ಸತ್ತಾಗಲೋ, ರಾಜಕೀಯ ಧುರೀಣ, ಸೆಲೆಬ್ರಿಟಿಗಳು ಇನ್ನಿಲ್ಲವಾದರಷ್ಟೇ ಗಂಟೆಗಟ್ಟಲೆ ಕೊರೆಯುವ ದೃಶ್ಯಮಾಧ್ಯಮಗಳು ಕೇರಳದ ಮಾಧ್ಯಮಗಳನ್ನು, ಅದರ ಸುದ್ದಿಸಂಸ್ಕಾರವನ್ನು ಕಂಡು ಕಲಿಯಬೇಕಾದುದು ಸಾಕಷ್ಟಿದೆ.
ಒಂದು ನಾಡಿನ ಜನತೆಯಲ್ಲಿ ಅಭಿರುಚಿ, ಭಾಷೆ, ಸಂಸ್ಕಾರ, ನೈತಿಕತೆ, ವ್ಯಕ್ತಿತ್ವ ರೂಪಿಸುವಲ್ಲಿ ಮಾಧ್ಯಮಗಳ ಪಾತ್ರ ನಿರ್ಣಾಯಕ. ಆದ್ದರಿಂದಲೇ ಇದು ನಾವೇ ನಿರ್ಮಿಸಿಕೊಂಡ
ಮನೋಸ್ಥಿತಿಗಳ ವ್ಯತ್ಯಾಸ ಅಷ್ಟೇ…

                                                                            * ಎಂ. ನಾ. ಚಂಬಲ್ತಿಮಾರ್

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top