ಮರಣಮೃದಂಗ ಬಾರಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ!

Picture of RB NEWS

RB NEWS

Bureau Report


ಬೆಳುವಾಯಿ-ಕಾರ್ಕಳ ನಡುವೆ ಕಾಮಗಾರಿ ಕೈಗೆತ್ತಿಕೊಂಡು ಎರಡು ವರ್ಷಗಳೇ ಸಂದಿದೆ. ಕೇವಲ 17ಕಿ.ಮೀ ರಸ್ತೆ ನಿರ್ಮಾಣ ಇನ್ನೂ ಪೂರ್ತಿಯಾಗಿಲ್ಲ. ಆರಂಭದಿoದ ಇಂದಿನ ವರೆಗೂ ನಾನಾ ಸಂಕಷ್ಟಗಳನ್ನು ವಾಹನ ಚಾಲಕರು, ನಾಗರಿಕರು ಅನುಭವಿಸುತ್ತಾ ಬಂದಿದ್ದಾರೆ. ಇನ್ನೂ ಆನೇಕ ಸಮಸ್ಸೆಗಳು ಎದುರಾಗಿದೆ. ರಸ್ತೆಯ ಕೆಲವೆಡೆಗಳಲ್ಲಿ ಮೃತ್ಯು ಕೂಪ ತಲೆ ಎತ್ತಿದ್ದರೂ, ಅದನ್ನು ಮುಚ್ಚುವ ಕಾರ್ಯ ಇನ್ನೂ ಮುಂದುವರಿಸಿಲ್ಲ.
ಬೈಪಾಸ್‌ನಿಂದ ಸಾಣೂರು ಕಡೆಗೆ ಹೋಗುವ ಭಾಗದಲ್ಲಿ ಗ್ಯಾರೇಜ್‌ನ ಮುಂಭಾಗದಲ್ಲಿ ಬೃಹತ್ ಆಕಾರದ ಹೊಂಡವೇ ತಲೆ ಎತ್ತಿದೆ. ಪ್ರತಿದಿನ ದ್ವಿಚಕ್ರವಾಹನ ಸವಾರರು ಆಯ ತಪ್ಪಿ ಆ ಹೊಂಡಕ್ಕೆ ಬಿದ್ದು ಗಾಯಗೊಂಡವರು ಆನೇಕರು.
ಪರಿಸರದ ನಾಗರಿಕರು ಹೊಂಡಕ್ಕೆ ಮಣ್ಣು ತುಂಬಿಸುವ ಕಾರ್ಯ ನಡೆಸಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೊಸ ರಸ್ತೆ ಹಾಗೂ ಹಳೆ ರಸ್ತೆಯ ಸಂಪರ್ಕ ಪ್ರದೇಶವಾಗಿರ ಆ ಭಾಗದಲ್ಲಿ ವಾಹನ ಸಂಚಾರದಲ್ಲಿ ಒಂದಿಷ್ಟು ಮಾರ್ಪಡು ಮಾಡಿರುವುದರಿಂದ ಅದರಲ್ಲೂ ಘನ ವಾಹನಗಳು ಏಕಾಏಕಿಯಾಗಿ ಬ್ರೇಕ್ ಹಾಕುತ್ತಿರುವುದರಿಂದ ರಸ್ತೆಯಲ್ಲಿ ಒತ್ತಡ ಉಂಟಾಗಿ ಆ ಭಾಗದ ಮಣ್ಣು ಕಿತ್ತು ಹೋಗುತ್ತಿದೆ.

ಸಾಣೂರು ಅವಿನಾಶ್ ಕಂಪೌಂಡ್ ಎದುರುಗಡೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಸ್ಥಿತಿಗತಿ ಕೂಡಾ ಇದೇ ತರದಲ್ಲಿ ಇದೆ. ಜಲ್ಲಿಕಲ್ಲು ಮಿಶ್ರಣವೂ ಇಡೀ ರಸ್ತೆಯನ್ನೇ ಆವರಿಸಿಕೊಂಡಿದೆ. ಮತ್ತೊಂದೆಡೆಯಲ್ಲಿ ಭಾರೀ ಗಾತ್ರದ ಹೊಂಡಗಳು ತಲೆ ಎತ್ತಿದೆ. ಎದುರು ಬದುರಿನಿಂದ ಬರುವ ವಾಹನಗಳು ಹೊಂಡ ತಪ್ಪಿಸುವ ನಿಟ್ಟಿನಲ್ಲಿ ತಮ್ಮ ಪ್ರಯಾಣದ ದಿಕ್ಕುಗಳನ್ನೇ ತಪ್ಪಿ ಸಂಚರಿಸುತ್ತಿರುತ್ತದೆ. ಲಘುವಾಹನಗಳು ಈ ಪ್ರದೇಶವನ್ನು ಹಾದು ಹೋಗಲು ಪ್ರಯಾಸ ಪಡಬೇಕಾದ ಪ್ರಮೇಯಗಳು ಉಂಟಾದರೆ, ಘನ ವಾಹನಗಳು ಸಾಮಾಥ್ಯಕ್ಕೆ ಅನುಗುಣವಾಗಿ ನಾಗಲೋಟದಲ್ಲಿ ಮುನ್ನುಗುತ್ತಿರುವುದು ಕಂಡು ಬರುತ್ತಿದೆ.

ಕಾಂಕ್ರೀಟ್ ಮಿತ್ರಿಣದೊಂದಿಗೆ ಹೊಂಡ ಮುಚ್ಚುವ ಕಾರ್ಯ ನಡೆಸಬೇಕಾಗಿದೆ. ಅದರೊಂದಿಗೆ ಡಾಂಬರು ಹಾಕುವ ಕಾಮಗಾರಿ ನಡೆಸಲೇ ಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿ ನಿಗಾ ವಹಿಸದೇ ಹೋದಲ್ಲಿ ಜೀವಕ್ಕೂ ಕುತ್ತು ಬರುವ ಸಾಧ್ಯತೆಗಳು ಕಂಡುಬರುತ್ತಿದೆ.


ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯೊಂದರಲ್ಲಿ ರಾಷ್ಟ್ರೀಯ ಹೆದ್ದಾರಿ-169 ರ ಆಸುಪಾಸಿನಲ್ಲಿ 12 ಕೂಡು ರಸ್ತೆ ಇದೆ. ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಯ ಕಾಮಗಾರಿ ಆರಂಭಿಸಿದ ಸಂದರ್ಭದಲ್ಲಿ ಕೆಲವು ಭಾಗಗಳಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಏರಿಸಿರುವುದು ಕೆಲವು ಭಾಗಗಳಲ್ಲಿ ತಗ್ಗಿಸಲಾಗಿತ್ತು. ಇದರಿಂದ ಕೂಡು ರಸ್ತೆ ಸಂರ್ಪಕದ ಭಾಗದಲ್ಲಿ ಸಮಸ್ಸೆ ಎದುರಾಗಿದೆ. ಕೂಡು ರಸ್ತೆಯ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ. ಜಲ್ಲಿಕಲ್ಲು ಮಿಶ್ರಣ ಹಾಕಿರುವುದರಿಂದ ಪರಿಣಾಮವಾಗಿ ಪ್ರಸಕ್ತ ದಿನದಲ್ಲಿ ರಾಷ್ಟ್ರೀಯ ಹೆದ್ದಾರಿಯ ಅರ್ಧ ಭಾಗದಷ್ಟು ಆ ಜಲ್ಲಿಕಲ್ಲುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದು ಕೊಂಡಿವೆ. ವಾಹನಗಳು ಇದೇ ಭಾಗದಲ್ಲಿ ಪೈಪೋಟಿಯಾಗಿ ಸಂಚರಿಸಿದರೆ ಅಪಾಯ ಕಾದಿಟ್ಟ ಬುತ್ತಿಯಾಗಲಿದೆ.


ಸಾಣೂರು ಮುದ್ದಣ್ಣ ನಗರದಿಂದ ರಾಷ್ಟ್ರೀಯ ಹೆದ್ದಾರಿ ಕೂಡು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದ್ದ ದೊಡ್ಡ ಜಲ್ಲಿಯನ್ನು ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ಯುವರಾಜ್ ಜೈನ್ ಅವರು ಖುದ್ದಾಗಿ ಕಾಲಿನಿಂದ ಬದಿಗೆ ಸರಿಸುತ್ತಿದ್ದ ದೃಶ್ಯಾವಳ ಕೆಮರಾಕ್ಕೆ ಸೆರೆಯಾಗಿತ್ತು. ಈ ಕುರಿತು ಅವರು ಆರ್.ಬಿ.ನ್ಯೂಸ್ ಸುದ್ದಿಜಾಲ ದೊಂದಿಗೆ ಮಾತುಕತೆ ನಡೆಸಿದಾಗ…


ಮಂಗಳೂರು ಬಿಕರ್ನಕಟ್ಟೆ- ಕಾರ್ಕಳ ಬೈಪಾಸ್‌ನ ತನಕ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಬೃಹತ್ ಕಾಮಗಾರಿ ಆರಂಭರ್ಗಂಡು ಎರಡು ವರ್ಷ ಸಂದತ್ತಾ ಬಂದಿದೆ. ನಾಗರಿಕರು ನಾನಾ ಸಮಸ್ಸೆಗಳನ್ನು ಎದುರಿಸುತ್ತಾ ಬಂದಿದ್ದು, ಹಲವು ಬಾರೀ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಡಳಿತ ಸ್ಥಳಕ್ಕೆ ಭೇಟಿ ನೀಡಿ ಕಾಮಾಗಾರಿ ವೀಕ್ಷಣೆ ಮಾಡಿದೆ. ಅಗತ್ಯ ಕಾಮಗಾರಿ ನಡೆಸುವಂತೆ ನಿರ್ದೇಶನ ನೀಡಿದೆ. ಆದರೆ ಇದುವರೆಗೆ ಯಾವುದೇ ಬದಲಾವಣೆ ಕಂಡು ಬರುತ್ತಿಲ್ಲ. ಅಷ್ಟೊಂದು ದೊಡ್ಡ ಕಾಮಗಾರಿಗೆ ಬೆರೆಳೆಣಿಯಲ್ಲಿ ಕಾರ್ಮಿಕರು ದುಡಿಯುತ್ತಿದ್ದಾರೆ.


ಬೈಪಾಸ್ ಹಾಗೂ ಅವಿನಾಶ್ ಕಂಪೌಂಡ್ ಎದುರಿನ ರಸ್ತೆಯಲ್ಲಿ ಬೃಹತ್ ಆಕಾರದ ಹೊಂಡ ತೆರದುಕೊಂಡಿದೆ. ಅದನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಿಲ್ಲ.
ಕೂಡು ರಸ್ತೆಗೆ ಇನ್ನೂ ಡಾಂಬರೀಕೆರಣ ಮಾಡಿಲ್ಲ. ಕೂಡು ರಸ್ತೆಯ ಹಾಕಲಾಗಿದ್ದ ಜಲ್ಲಿಕಲ್ಲುಗಳು ರಾಷ್ಟ್ರೀಯ ಹೆದ್ದಾರಿಯ ಅರ್ಧ ಭಾಗದಷ್ಟು ಚೆದುರಿಕೊಂಡಿದೆ. ಗ್ರಾಮ ಪಂಚಾಯತ್ ಅಧ್ಯಕ್ಷನ ನೆಲೆಯಲ್ಲಿ ಈ ಬಗ್ಗೆ ಪೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಕವಡೆಕಾಸನ ಬೆಲೆ ನೀಡುತ್ತಿಲ್ಲ. ಕಾರ್ಮಿಕರಲ್ಲಿ ಮಾತನಾಡಲು ಹೋದರೆ ಸೂಪರ್‌ವೈಸರ್ ಬಾಲಾಜಿಯವರ ಸೂಚನೆ ಬೇಕು ಎನ್ನುತ್ತಿದ್ದಾರೆ. ಮತ್ತೊಮ್ಮೆ ಗ್ರಾಮಸ್ಥರು ಬೀದಿಗೆ ಇಳಿಯಬೇಕಾದ ದಿನಗಳು ಎದುರಾಗಿದೆ ಎಂದರು.


ಬೈಪಾಸ್ ನಿಂದ ಸಾಣೂರು ಕಡೆಗೆ ಹೋಗುವಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಹೊಂಡ ನಿರ್ಮಾಣಗೊಂಡಿದೆ. ಇದೇ ರಸ್ತೆಯಾಗಿ ಬರುವ ವಾಹನಗಳ ಚಾಲಕರಿಗೆ ಹಾಗೂ ಸವಾರರಿಗೆ ಹೊಂಡದ ಅರಿವು ಗಮನಕ್ಕೆ ಬಾರದೇ ಕೆಲವೊಮ್ಮ ಅಪಘಾತಕ್ಕೀಡಾದ ಪ್ರಸಂಗ ಪ್ರತಿದಿನ ನಡೆಯುತ್ತಿರುತ್ತದೆ. ಅಂತಹ ಸಂದರ್ಭದಲ್ಲಿ ಘಟನಾ ಸ್ಥಳಕ್ಕೆ ಓಡಿಬಂದು ಗಾಯಾಳುಗಳಿಗೆ ಉಪಚರಿಸುತ್ತೇನೆ. ಇಲಾಖೆ ಎಚ್ಚೆತ್ತುಕೊಂಡು ಹೊಂಡ ಮುಚ್ಚುವ ಕಾರ್ಯ ಮಾಡಲೇ ಬೇಕು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top