ಮನೋಜ್ ಕೋಡಿಕಲ್ ಮೇಯರ್ ಆಗಿರುವುದಕ್ಕೆ ಮೂಡುಬಿದಿರೆಯಲ್ಲಿ ಏಕೆ ಹರ್ಷ?
RB NEWS
Bureau Report
ಮನೋಜ್ ಕೋಡಿಕಲ್ ಮೇಯರ್ ಆಗಿರುವುದಕ್ಕೆ ಮೂಡುಬಿದಿರೆಯಲ್ಲಿ ಏಕೆ ಹರ್ಷ?
ವರದಿ: ರಾಯಿ ರಾಜಕುಮಾರ್ ಮೂಡುಬಿದಿರೆ
ಮೂಡುಬಿದಿರೆ:ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆಗಿ ಮನೋಜ್ ಕೋಡಿಕಲ್ ಆಯ್ಕೆಯಾಗಿರುವುದಕ್ಕೆ ಮೂಡುಬಿದಿರೆಯಲ್ಲಿ ಭಾರೀ ಹರ್ಷ ವ್ಯಕ್ತವಾಗಿದೆ.
ಇದಕ್ಕೆ ಕಾರಣವೂ ಇದೆ. ಮೂಡುಬಿದಿರೆ ಬಾಬು ರಾಜೇಂದ್ರ ಪ್ರೌಢ ಶಾಲೆಯಲ್ಲಿ ಮನೋಜ್ ಕೋಡಿಕಲ್ ವಿದ್ಯಾಭ್ಯಾಸ ಪೊರೈಸಿದ್ದರು. ಹಳೆ ವಿದ್ಯಾರ್ಥಿಯಾಗಿರುವ ಮನೋಜ್ ಕೋಡಿಕಲ್ ಅವರ ಕಾರ್ಯಸಾಧನೆಯ ಬಗ್ಗೆ ಪಕ್ಷಾತೀತ ನೆಲೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಆಡಳಿತ ಮಂಡಳಿ ಸಂತಸವನ್ನು ವ್ಯಕ್ತಪಡಿಸಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ.