ಕಾರ್ಕಳ : ರೋಟರಿ ಸಂಸ್ಥೆಯ 60ನೇ ವರ್ಷದ ಸನದು ಪ್ರಧಾನ ಸಂಭ್ರಮದ ನೆನಪಿಗೆ ಫಲಾನುಭವಿ ಕುಟುಂಬಕ್ಕೆ ರೋಟರಿ ಮನೆಯನ್ನು ನಿರ್ಮಾಣ ಮಾಡಿಕೊಡಲಾಯಿತು.
ರೋಟರಿ ಕ್ಲಬ್ ಸದಸ್ಯರು ರೂ. 4,50,000 ಹಾಗೂ ಕುಸುಮ ರೂ. 1,00,000 ಸೇರಿದಂತೆ ಒಟ್ಟು ರೂ.5,50,000 ವೆಚ್ಚ ಭರಿಸಿ ನೂತನ ಮನೆ ನಿರ್ಮಾಣ ಮಾಡಿ ಆರ್ಹ ಫಲಾನುಭವಿಯೋರ್ವರಿಗೆ ಹಸ್ತಾಂತರಿಸಲಾಯಿತು.
ರೋಟರಿ ಜಿಲ್ಲಾ ಗವರ್ನರ್ ಬಿ.ಸಿ. ಗೀತಾ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಮಾಜಿ ಗವರ್ನರ್ ಡಾ. ಭರತೇಶ್ ಅಧಿರಾಜ್, ಸಹಾಯಕ ಗವರ್ನರ್ ಶೈಲೇಂದ್ರ ರಾವ್, ನಿಯೋಜಿತ ಸಹಾಯಕ ಗವರ್ನರ್ ರೊಟೇರಿಯನ್ ಅನಿಲ್ ಡೆಸ ಮಾಜಿ ಸಹಾಯಕ ಗವರ್ನರ್ ಹರಿಪ್ರಕಾಶ್ ಶೆಟ್ಟಿ, ವೃಂದ ಹರಿಪ್ರಕಾಶ್, ಮೇಜರ್ ಡೋನರ್ ಲೆವೆಲ್ 3 ತುಕಾರಾಂ ನಾಯಕ್ ಹಾಗೂ ಸುವರ್ಣ ನಾಯಕ್ ದಂಪತಿಗಳು, ನಿರೋಜಿತ್ ಅಧ್ಯಕ್ಷ ಇಕ್ಬಾಲ್ ಅಹಮದ್, ವಲಯ ಸೇನಾನೀ ಸುರೇಶ ನಾಯಕ್, ಬಾಲಕೃಷ್ಣ ದೇವಾಡಿಗ ವಸಂತ ಎಂ ಹಾಗು ಹೆಚ್ಚಿನ ರೋಟರಿ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರೋಟರಿ ಅಧ್ಯಕ್ಷ ಜಾನ್ ಆರ್ ಡಿಸಿಲ್ವ ಸ್ವಾಗತಿಸಿದರು ಕಾರ್ಯದರ್ಶಿ ಮಧುಕರ್ ಹೆಗ್ಡೆ ಧನ್ಯವಾದ ನೀಡಿದರು.