ಕಾಸರಗೋಡು : ಕಾಸರಗೋಡು ಜಿಲ್ಲೆಯ ಅಂಬಲತ್ತರ ಗುರುಪುರಮ್ ಎಂಬಲ್ಲಿನ ಮನೆಯೊಂದರಲ್ಲಿ ಎರಡು ಸಾವಿರ ರೂ. ಮುಖಬೆಲೆಯ ಏಳು ಕೋಟಿ ರೂ. ನೋಟುಗಳು ಪತ್ತೆಯಾಗಿದ್ದು, ಪೊಲೀಸರು ಇದನ್ನು ವಶಕ್ಕೆ ಪಡೆದಿದ್ದಾರೆ.
ಗಲ್ಫ್ ಉದ್ಯೋಗಿ ಕೆ.ಪಿ.ಬಾಬುರಾಜ್ ಎಂಬವರ ಒಡೆತನದಲ್ಲಿ ಇದ್ದ ಮನೆಯನ್ನು ಅಬ್ದುಲ್ ರಜಾಕ್ ಎಂಬವರಿಗೆ ಬಾಡಿಗೆಗೆ ನೀಡಲಾಗಿತ್ತು .
ಪೊಲೀಸ್ ವರಷ್ಠಾಧಿಕಾರಿ ಪಿ.ಬಿ.ಜಾಯ್ ಅವರಿಗೆ ಬಂದ ಕರೆಯನ್ವಯ ಪೊಲೀಸರ ತಂಡ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಮೆ ನಡೆಸಿದಾಗ ಬಾಕ್ಸ್ ಗಳಲ್ಲಿ ಬಚ್ಚಿಟ್ಟಿ 2 ಸಾವಿರ ಮುಖಬೆಲೆಯ ನೋಟು ಅದಾಗಿತ್ತು.
ಈ ಬಗ್ಗೆ ತನಿಖೆ ಆರಂಭವಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.


























