ಮನೆಯೊಂದರಲ್ಲಿ ಅನೈತಿಕ ದಂಧೆ; ಪೊಲೀಸರ ಬಲೆಗೆ ಇಬ್ಬರು ಆರೋಪಿಗಳು

Picture of RB NEWS

RB NEWS

Bureau Report

ಕಾರ್ಕಳ : ಸಾಣೂರು ಗ್ರಾಮದ ಮನೆಯೊಂದರಲ್ಲಿ ಅನೈತಿಕ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಕಾರ್ಕಳ ನಗರ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕರು ಜಯಶ್ರೀ ಎಸ್. ಮಾನೆಯವರಿಗೆ ದೊರೆತ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆದಿದೆ.‌

ಸಾಣೂರು ಗ್ರಾಮದ ಅವಿನಾಶ್ ಕಂಪೌಂಡ್ ಬಳಿ ಇರುವ ಪ್ರಮೀಳಾ ವಿಜಯ್ ಕುಮಾರ್ ಎಂಬವರ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಮಾಹಿತಿಯಿದ್ದ ಕಾರಣ, ಪೊಲೀಸರು ದಾಳಿ ನಡೆಸಿದ್ದಾರೆ.

ಮನೆಯಲ್ಲಿದ್ದ ಭರತ್ ಎಂಬಾತನನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಿಕೊಳ್ಳಲಾಗುತ್ತಿದ್ದ ವಸ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಒಬ್ಬ ಸಂತ್ರಸ್ತೆ ಮಹಿಖೆಯನ್ನು ರಕ್ಷಿಸಲಾಗಿದೆ. ಆಪಾದಿತರಾದ ಭರತ್ ಕುಮಾರ್, ಮನೆಯ ಮಾಲೀಕಿ ಪ್ರಮೀಳಾ ವಿಜಯ್ ಕುಮಾರ್ ಸೇರಿ ವೇಶ್ಯಾವಾಟಿಕೆ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top