[t4b-ticker]

ಮನದಾಳದ ಮಾತು… ಆರ್.ಬಿ.ಜಗದೀಶ್ ಆರ್.ಬಿ.ನ್ಯೂಸ್ 2ನೇ ವರ್ಷಕ್ಕೆ ಪಾದರ್ಪಣೆ

Picture of RB NEWS

RB NEWS

Bureau Report

ಆರ್.ಬಿ ನ್ಯೂಸ್ ಈಗ ಒಂದು ವರ್ಷ ಪೊರೈಸಿದೆ. ಎರಡನೇಯ ವರ್ಷಕ್ಕೆ ಕಾಲಿಟ್ಟಿದೆ. ಆರ್. ಬಿ.ನ್ಯೂಸ್ ಹುಟ್ಟಿಕೊಂಡಿರುವುದೇ ಸವಾಲಿನ ಸಂದರ್ಭದಲ್ಲಿ.

2023 ರಲ್ಲಿ ವರ್ಷಂಪ್ರತಿಯಂತೆ ಅಯ್ಯಪ್ಪ ದರ್ಶನ ಪಡೆಯಲೆಂದು ಜನವರಿ ತಿಂಗಳ ಎರಡನೇಯ ವಾರದಂದು 19 ನೇ ವರ್ಷದ ಶಬರಿಮಲೆ ಯಾತ್ರೆ ಕೈಗೊಂಡಿದೆ.

ಶಬರಿಮಲೆಯ ಹರವಣ ಪಾಯಸಂ ಹಾಗೂ ಅಪ್ಪಂ ಪ್ರಸಾದವನ್ನು ಆತ್ಮೀಯರಿಗೆ ನೀಡುವ ಪರಿಪಾಠವನ್ನು ಬೆಳೆಸಿಕೊಂಡಿದೆ. ಅದರಂತೆ ಜನವರಿ 15ರಂದು ನಾನು ದುಡಿಯುತ್ತಿದ್ದ ನಂಬ್ರ 1 ಕನ್ನಡ ದೈನಿಕ ಪತ್ರಿಕಾ ಕಚೇರಿಗೂ ತೆರಳಿ ಪ್ರಸಾದವನ್ನು ನೀಡಿ ಮತ್ತೆ ವರದಿಗಾರನ ಜವಾಬ್ದಾರಿ ನಿರ್ವಹಿಸಲು ಜ.16ರಂದು ಕಾರ್ಕಳಕ್ಕೆ ಅಗಮಿಸಿದೆ.

ಅಂದು ಸಂಜೆಯ ಸಮಯ. ಇನ್ನೆನ್ನೂ ಸೂರ್ಯ ಮುಳುಗುವ ಹೊತ್ತು ಆಗಿತ್ತು. ಅದಾಗಲೇ ವಾಟ್ಸಪ್ ಗೆ ಮೆಸೇಜ್ ವೊಂದು ಬಂದಿತ್ತು.
ಅದು ಪತ್ರಿಕಾ ಮುಖ್ಯಸ್ಥರಿಂದ. ಜ.17ರ ಸಂಜೆ ವೇಳೆಗೆ ಕೂಡಲೇ ಕಚೇರಿ ಬರಬೇಕೆಂಬ ತಾಕೀತು ಇತ್ತು. ಹೆಚ್ಚಿನ ವಿವರ ಆ ಮೆಸೇಜ್ ನಲ್ಲಿ ಇರಲಿಲ್ಲ. ಹಾಗಾಗಿ ಮೆಸೇಜ್ ಕಳುಹಿಸಿದ ಪತ್ರಿಕಾ ಮುಖ್ಯಸ್ಥರಿಗೆ ಫೋನ್ ಮೂಲಕ ಸಂಪರ್ಕಿಸಿದಾಗ ಅವರಿಂದ ಅದೇ ತರದಲ್ಲಿ ಪ್ರತಿಕ್ರಿಯೆ ವ್ಯಕ್ತಗೊಂಡಿತು.

ಜ.17ರಂದು ಕಾರ್ಕಳ ಪರಶುರಾಮ ಥೀಂ ಪಾಕ್ ೯ ಕಚೇರಿಯ ಉದ್ಘಾಟನೆ ಕಾರ್ಯಕ್ರಮವೂ ಇತ್ತು. ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪತ್ರಕರ್ತರೆಲ್ಲರನ್ನು ಸಭೆಗೆ ವಾಹನದಲ್ಲಿ ಕರೆದುಕೊಂಡು ಬರುವಂತೆ ಅದರ ಜವಾಬ್ದಾರಿಯನ್ನು ಅಂದು ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಹಾಗೂ ಇಂದು ಶಾಸಕರಾಗಿರುವ ವಿ.ಸುನೀಲ್ ಕುಮಾರ್ ಅವರ ಅಪ್ತ ಕಾರ್ಯದರ್ಶಿ ಹರೀಶ್ ಅಂಚನ್ ಅವರು ನನಗೆ ವಹಿಸಿಕೊಟ್ಟಿದ್ದರು.

ಕಾರ್ಯಕ್ರಮ ಮುಗಿಸಿ ಪತ್ರಕರ್ತರ ತಂಡವು ಪ್ರಯಾಣಿಸುತ್ತಿದ್ದ ಕಾರು ಕಾರ್ಕಳ ಜೋಡುರಸ್ತೆಗೆ ತಲುಪುತ್ತಿದ್ದಂತೆ ಪತ್ರಿಕೆ ಮುಖ್ಯಸ್ಥರಿಂದ ಮತ್ತೆ ಅದೇ ಪೋನ್ ಕರೆ ಬಂದಿತ್ತು. “ನಿಮಗೆ ಕಚೇರಿಗೆ ಬರಲು ಹೇಳಿದೆ. ಕಾರ್ಯಕ್ರಮಕ್ಕೆ ಹೋಗಲು ತಿಳಿಸಿದವರು ಯಾರು?” ಎಂಬ ಪ್ರಶ್ನೆ ಅವರದಾಗಿತ್ತು.

ಕಾರ್ಯಕ್ರಮದ ಸುದ್ದಿ ಕಳುಹಿಸಿ ತರಾತುರಿಯಲ್ಲಿ ಮಂಗಳೂರಿನತ್ತ ಪ್ರಯಾಣಿಸಿ ಪತ್ರಿಕಾ ಕಚೇರಿ ತಲುಪಿದೆ‌. ಪತ್ರಿಕಾ ಕಚೇರಿಯ ಮುಖ್ಯಸ್ಥರು ಬೇರೆ ಏನು ಮಾತನಾಡದೇ “ನಿಮ್ಮನ್ನು ಸಂಸ್ಥೆಯಿಂದ ಕೈಬಿಡಲು ಚೇರ್ಮನ್ ತಿಳಿಸಿದ್ದಾರೆ” ಎಂದರು.
ಕಾರಣವೇನೆಂದು ನಾನು ಪ್ರಶ್ನಿಸಿದರೂ ಇದು ವರೆಗೆ ಉತ್ತರ ದೊರೆತ್ತಿಲ್ಲ.

ನಾನು ಸಮರ್ಪಣ ಭಾವನೆಯಿಂದ ದುಡಿಯುತ್ತಿದ್ದ ಪತ್ರಿಕೆಯವರೇ ನನ್ನನ್ನು ಕಾರಣ ನೀಡಿದೇ ಕೆಲಸದಿಂದ ವಜಾಗೊಳಿಸಿರುವ ಕ್ರಮದಿಂದ ಅಂದು ಅತೀವ ವೇದನೆಯಾಯಿತು. .

ಪತ್ರಿಕಾ ರಂಗದಲ್ಲಿ ದುಡಿಯುವುದು ವೃತ್ತಿಯೂ ಹೌದು. ಪ್ರವೃತ್ತಿಯೂ ಹೌದು. ಇದನ್ನು ಬಿಟ್ಟು ಬೇರೆ ಯಾವುದೇ ಕೆಲಸದಲ್ಲಿ ತೊಡಗಿಸಿ ಕೊಂಡ ಅನುಭವ ಇರಲಿಲ್ಲ. ಈಗ ಕೆಲಸ ಕಳೆದುಕೊಂಡಿದ್ದ ನನಗೆ ಅಸ್ಥಿರತೆ ಕಾಣಿಸಿತು. ಮುಂದೇನೆಂಬ ಚಿಂತೆಯೂ ಮನ ಕರಗತೊಡಗಿತು.

ವಿಜಯಪುರದಲ್ಲಿ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ಜರುಗಿದ್ದು ಕೆಲ ಪತ್ರಕರ್ತರೊಂದಿಗೆ ಅಲ್ಲಿಗೆ ತೆರಳಿದ್ದರೂ ವೃತ್ತಿಯ ಬಗ್ಗೆ ಚಿಂತೆ ಎದುರಾಗಿತ್ತು.

ಆ ಸಂದರ್ಭದಲ್ಲಿ ಸಹೋದ್ಯೋಗಿಗಳ ಸಲಹೆಯಂತೆ ಆರ್. ಬಿ .ನ್ಯೂಸ್ ಸಾಮಾಜಿಕ ಜಾಲತಾಣ ವನ್ನು ಆರಂಭಿಸಲು ಯೋಚನೆ ಯೋಜನೆ ಹಾಕಿಕೊಂಡೆ.

ರಾಷ್ಟ್ರೀಯ ಭಾವೈಕ್ಯತೆ ಯೊಂದಿಗೆ ಫೆ.17ರಂದು ಆರ್.ಬಿ.ನ್ಯೂಸ್ ಆರಂಭದ ಸುಸಂದರ್ಭದಲ್ಲಿ ಮನೆಯಿಂದ ಕಾರ್ಕಳ ಕಡೆಗೆ ಬರುವ ಮಾರ್ಗದ ಮಧ್ಯೆ ದಿವ್ಯ ದರ್ಶನವಾಗಿತ್ತು.
ಪರಮಪೂಜ್ಯ ಮುನಿಶ್ರೀ ೧೦೮ ಅರ್ಪಣ್ ಸಾಗರ ಮುನಿಮಹಾರಾಜರು ಅವರು ಕಾರ್ಕಳ ಬಾಹುಬಲಿ ಸ್ವಾಮಿಯ ದರುಶನ ಪಡೆಯಲು ಮೂಡುಬಿದ್ರಿ ಮಾರ್ಗವಾಗಿ ಕಾರ್ಕಳಕ್ಕೆ ಕಾರ್ಕಳಕ್ಕೆ ಪಾದಸ್ಪರ್ಶ ಗೈಯುತ್ತಿದ್ದರು. ಅವರ ಅಶೀರ್ವಾದ ನನ್ನ ಪಾಲಿಗೆ ದೊರೆತ ಸುಯೋಗ ಫೆ.17 ಆಗಿತ್ತು.
ಕಾರ್ಕಳ ಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ಜೀಣೋದ್ದಾರದ ಸಿದ್ಧತೆಗಳು ನಡೆಯುತ್ತಿತ್ತು. ಶ್ರೀ ಮಾರಿಯಮ್ಮನ ದಿವ್ಯ ಸನ್ನಿದ್ಧಿಯಲ್ಲಿ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ರಘರಾಮ ಆಚಾರ್ಯ ಅವರು ಧಾರ್ಮಿಕ ವಿಧಿವಿಧಾನ ನಡೆಸಿದ್ದರು. ಪತ್ರಿಕಾ ವಿತರಕರಾಗಿದ್ದ ಪ್ರಸ್ತುತ ಉದ್ಯಮಿಯಾಗಿರುವ ಜಗದೀಶ್ ಮಲ್ಯ ಅವರ ಅಭಯಹಸ್ತದಲ್ಲಿ ಆರ್.ಬಿ.ನ್ಯೂಸ್ ಲೋಕಾರ್ಪಣೆಗೊಳಿಸಲಾಯಿತು.

ಆರ್.ಬಿ.ನ್ಯೂಸ್ ಗೆ ಒಂದು ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ 2024 ಫೆ. 17ರಂದು ಶಬರಿಮಲೆ ಶ್ರೀ ಅಯ್ಯಪ್ಪನ ಸನ್ನಿಧಾನದಲ್ಲಿ ಇದ್ದೇನೆ.

ವೃತ್ತಿ ಸ್ನೇಹಿತರಾಗಿರುವ ಕೃಷಿಬಿಂಬ ಪತ್ರಿಕೆಯ ಸಂಪಾದಕ ರಾಧಾಕೃಷ್ಣ ತೋಡಿಕಾನ ಪತ್ರಕರ್ತರಾದ ರಾಂ ಅಜೆಕಾರು, ಕೆ.ಎಂ.ಖಲೀಲ್ ಅವರು ಉಪಸ್ಥಿತರಿದ್ದರು.

ಈ ಜಾಲತಾಣವು ಉಳಿದವುಗಳಿಗಿಂತ ಭಿನ್ನವಾಗಿರಬೇಕೆಂಬ ತುಡಿತ ನನ್ನದಾಗಿದೆ. ಅದರ
೦ತೆ ನಿಷ್ಪಕ್ಷಪಾತದಿಂದ ಕಾರ್ಯನಿರ್ವಹಿಸಬೇಕು. ಇದೊಂದು ರಾಷ್ಟ್ರೀಯ ಭಾವೈಕ್ಯತೆಯ ವೇದಿಕೆಯಾಗಬೇಕು ಎಂಬ ಹಂಬಲವಿತ್ತು.

ಆರಂಭದಲ್ಲಿ ಓದುಗರು ಇದನ್ನು ಸ್ವೀಕರಿಸುತ್ತಾರೆಯೋ ? ಇಲ್ಲವೋ ?ಎಂಬ ಅಳುಕು ಇತ್ತು. ಸೋತಾಗ ಋಣಾತ್ಮಕ ಚಿಂತನೆಗೆ ವಿರಾಮ ನೀಡಿ ಧನಾತ್ಮಕ ಚಿಂತನೆ ಮೈಗೂಡಿಸಿಕೊಂಡಾಗ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬ ಚಿಂತನೆಯೊಂದಿಗೆ ಮುಂದಾದೆ. ಆಗ ನಿರೀಕ್ಷೆಗೂ ಮೀರಿ ಇಡೀ ಸಮಾಜದಿಂದ ಪ್ರೋತ್ಸಾಹ ದೊರೆಕಿದೆ.

ಹಿತೈಷಿಗಳು ಜಾಹೀರಾತು ನೀಡಿರುದರಿಂದ ಆರ್.ಬಿ. ನ್ಯೂಸ್ ಸಾಮಾಜಿಕ ಜಾಲತಾಣ ಉಳಿಯಲು ಬೆಳೆಯಲು ಸಾಧ್ಯವಾಗಿ ವರ್ಷ ಪೊರೈಸಿದೆ.

ದೆಹಲಿಯಲ್ಲಿ ಸಂಭವಿಸಿದ ಲಘಭೂಕಂಪನ ಸಂದರ್ಭದಲ್ಲಿ ಅದೇ ಪರಿಸದಲ್ಲಿ ಇದ್ದ ಮೂಲತ: ನೆಲ್ಲಿಕಾರಿನವರಾಗದ್ದು, ಪ್ರಸ್ತುತ ಮೂಡುಬಿದಿರೆಯ ನಿವಾಸಿಯಾಗಿರುವ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಫೋಟೋ ಗ್ರಾಫರ್ ಜಿನೇಶ್ ಪ್ರಸಾದ್ (ಪೊರ್ಲು) ಅವರು ಆ ಕ್ಷಣದಲ್ಲಿಯೇ ಅಲ್ಲಿಂದಲೇ ವರದಿ ಮಾಡಿದ್ದರು. ಅದು ಇತರ ಮಾಧ್ಯಮಗಳಿಂದ ಮುಂಚಿತವಾಗಿ ಆರ್.ಬಿ.ನ್ಯೂಸ್ ನಲ್ಲಿ ಪ್ರಕಟಗೊಂಡಿತು. ಅವರಿಗೆ ಕೃತಜ್ಞತೆ ಗಳನ್ನು ಸಲ್ಲಿಸುತ್ತೇನೆ

ಸ್ಥಳೀಯ ಸುದ್ದಿಗಳು, ಪರವೂರ ಸುದ್ದಿಗಳು ಹಾಗೂ ಅರ್ಥಪೂರ್ಣವಾದ ಲೇಖನಗಳನ್ನು ಹಿರಿಯ ಪತ್ರಕರ್ತರಾದ ಮೋಹನ್ ಬೋಳಂಗಡಿ, ವಿ.ಕೆ.ವಾಲ್ಪಾಡಿ, ಬಿಪಿನ್ ಚಂದ್ರಪಾಲ್ ನಕ್ರೆ, ರಾಧಾಕೃಷ್ಣ ತೋಡಿಕಾನ, ಎಂ.ಜಿ.ಹೆಗಡೆ, ಗಣೇಶ್ ಪಾಂಡೇಲು, ಶ್ರೀ ಕಾಂತ ಶೆಟ್ಟಿ, ಗಣೇಶ್ ನಾಯಕ್, ಯಶೋಧರಾ ಬಂಗೇರಾ, ಸುಕುಮಾರ್ ಮುನಿಯಾಲು,ಜನಾರ್ಧನ ಕೊಡವೂರು, ನಕ್ರೆ ಜೋಜ್೯ ಮಾಸ್ಟರ್, ಸತೀಶ್ ಕಾತ್ಯಾಯಿನಿ, ಶಾಂತರಾಮ ಕುಡ್ವ, ಶಿವಾನಂದ ಶೆಣೈ ಕಾಂತಾವರ, ಡಾ. ಮಾಲತಿ ಪೈ, ಮಿತ್ರಪ್ರಭ ಹೆಗ್ಡೆ, ರದ ಭವಿಷ್ಯವನ್ನು ನೀಡುತ್ತಿರುವ ಕೆ.ಸುಬ್ರಹ್ಮಣ್ಯ ಆಚಾರ್, ಆರ್.ಬಿ.ನ್ಯೂಸ್ ನ ವಿನ್ಯಾಸಗಾರರಾದ ಚಂದ್ರನಾಥ ಬಜಗೋಳಿ, ಬಾಲರಾಜ್, ವಿಕ್ರಂ ಪೈ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top