ಮಣಿಪಾಲ: ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ; ಓರ್ವನ ಬಂಧನ

ಮಣಿಪಾಲ: ಲಾಡ್ಜ್ ನ ರೂಮ್ ಒಂದರಲ್ಲಿ ಅಕ್ರಮವಾಗಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಲ್ಲಿ ಓರ್ವನನ್ನು ಬಂಧಿಸಿರುವ ಘಟನೆ ಉಡುಪಿ ಜಿಲ್ಲೆಯ ಮಣಿಪಾಲದ ಬಡಗುಬೆಟ್ಟು ಗ್ರಾಮದ ದಶರಥನಗರದಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಚುಮಾನ್ ರಾಮ್ ಎಂದು ಗುರುತಿಸಲಾಗಿದೆ.
ಈ ಕುರಿತು ಬಂದ ಮಾಹಿತಿ ಮೇರೆಗೆ ಮಣಿಪಾಲ ಪೊಲೀಸ್ ಠಾಣಾ ಮಲ್ಪೆ ವೃತ್ತ ನಿರೀಕ್ಷಕ, ಪ್ರಭಾರ ಪಿಐ ರಾಮಚಂದ್ರ ನಾಯಕ್, ಲಾಡ್ಜ್ ರೂಮ್ ಗೆ ದಾಳಿ ನಡೆಸಿ, ಮಹಿಳೆಯನ್ನು ರಕ್ಷಿಸಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ಲಾಟ್ ಗಳಲ್ಲಿ ನಿರಂತರ ದಂಧೆ
ಮಣಿಪಾಲ ಆಸುಪಾಸಿನ ಕೆಲ ಪ್ಲಾಟ್ ಗಳಲ್ಲಿ ಇಂತಹದೇ ದಂಧೆ ನಡೆಯುತ್ತಾ ಬಂದಿದೆ.
ಸಮಾಜಮುಖಿ ಚಿಂತನೆಯುಳ್ಳ ಕೆಲವರು ಪ್ಲಾಟ್ ಗಳನ್ನು ಬಾಡಿಗೆಗೆ ಪಡೆದುಕೊಂಡು ಅದನ್ನು ದಿನ ಬಾಡಿಗೆ, ವಾರ ಬಾಡಿಗೆ ರೂಪದಲ್ಲಿ ನೀಡುತ್ತಿದ್ದಾರೆಂಬ ಮಾಹಿತಿ ಲಭಿಸಿದೆ.
ಸ್ಥಳೀಯರಿಗೆ ಇವರು ಬಾಡಿಗೆ ನೀಡದೇ ಉತ್ತರ ಭಾರತೀಯ ವಿದ್ಯಾರ್ಥಿಗಳನ್ನೇ ಗುರಿಯಾಗಿರಿಸಿ ದಿನದ ಬಾಡಿಗೆಯಲ್ಲಿ ಪ್ಲಾಟ್ ನೀಡುತ್ತಿದ್ದುದು ಬಹಿರಂಗಗೊಂಡಿದೆ. ಆನ್ ಲೈನ್ ಪೆಮೆಂಟ್ ವ್ಯವಹಾರ ಈ ದಂಧೆಕೋರರರು ಎಂಬ ಮಾಹಿತಿ ಲಭಿಸಿದೆ.





































