ಮಣಿಪಾಲ ಜ್ಞಾನಸುಧಾ : ಉಪನ್ಯಾಸಕರ ಪುನಶ್ಚೇತನಾ ಕಾರ್ಯಾಗಾರಸಮರ್ಥ ಉಪನ್ಯಾಸಕ ಸಮಾಜದ ಆಸ್ತಿ : ಡಾ. ಸುಧಾಕರ ಶೆಟ್ಟಿ

Picture of RB NEWS

RB NEWS

Bureau Report

ಮಣಿಪಾಲ : ಸಮರ್ಥ ಉಪನ್ಯಾಸಕ ವಿದ್ಯಾರ್ಥಿಯ ಜೀವನಕ್ಕೆ ಹೊಸ ಸ್ಪೂರ್ತಿ ತುಂಬುವುದರ ಜೊತೆಗೆ ಸಾಮಾನ್ಯ ವಿದ್ಯಾರ್ಥಿಯನ್ನು ಅಸಾಮಾನ್ಯ ಸಾಧನೆ ಮಾಡುವತ್ತ ಪ್ರೇರೇಪಿಸುತ್ತಾನೆ. ಅಂತಹ ಶಿಕ್ಷಕರು ಸಮಾಜದ ಆಸ್ತಿ ಎಂದು ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿಯವರು ಅಭಿಮತ ವ್ಯಕ್ತಪಡಿಸಿದರು.

ಶಾಲಾಶಿಕ್ಷಣ ಇಲಾಖೆ (ಪದವಿ ಪೂರ್ವ) ವತಿಯಿಂದ ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾ ನಗರದಲ್ಲಿ ಆಯೋಜಿಸಿದ ವಿಷಯಾಧಾರಿತ ಉಪನ್ಯಾಸಕರ (ಇತಿಹಾಸ, ವಾಣಿಜ್ಯ ಶಾಸ್ತç, ರಾಜ್ಯಶಾಸ್ತç, ಕನ್ನಡ) 2 ದಿನಗಳ ಪುನಶ್ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಉಡುಪಿ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ)ಯ ಉಪನಿರ್ದೇಶಕ ಮಾರುತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಾಗಾರಕ್ಕೆ ಶುಭ ಹಾರೈಸಿದರು.
ಉಡುಪಿ ಜಿಲ್ಲಾ ಸರಕಾರಿ ಪ.ಪೂ. ಉಡುಪಿ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಡಿ.ಕೆ. ಮೊಗೇರ, ಜಿಲ್ಲಾ ಸಂಯೋಜಕ ವರ್ಗೀಸ್, ವಾಣಿಜ್ಯ ಶಾಸ್ತç ಜಿಲ್ಲಾ ಸಂಯೋಜಕಿ ಚಂದ್ರಕಲಾ, ರಾಜ್ಯಶಾಸ್ತç ಜಿಲ್ಲಾ ಸಂಯೋಜಕ ವಾಸು ಮೊಗೇರ, ಇತಿಹಾಸ ವಿಭಾಗದ ಜಿಲ್ಲಾ ಸಂಯೋಜಕಿ ಗ್ರೇಸಿ, ಕನ್ನಡ ವಿಭಾಗದ ಜಿಲ್ಲಾ ಸಂಯೋಜಕ ಉದಯ ಕುಮಾರ್ ಶೆಟ್ಟಿ, ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು.


ಉಡುಪಿ ಜಿಲ್ಲಾ ಅನುದಾನಿತ ಹಾಗೂ ಅನುದಾನರಹಿತ ಪ.ಪೂ. ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ದಿನೇಶ್ ಎಂ ಕೊಡವೂರು ಸ್ವಾಗತಿಸಿದರು. ಆಂಗ್ಲಭಾಷಾ ಉಪನ್ಯಾಸಕಿ ಶಮಿತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top