ಮಗನ ಮೇಲೆ ತಂದೆಯಿಂದ ಕತ್ತಿ ದಾಳಿ

Picture of RB NEWS

RB NEWS

Bureau Report

ಮಗನ ಮೇಲೆ ತಂದೆಯಿಂದ ಕತ್ತಿ ದಾಳಿ


ಕಾರ್ಕಳ: ಮನೆ ವಿಚಾರವಾಗಿ ತಂದೆ–ಮಗನ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ, ತಂದೆಯೇ ಮಗನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಕಾರ್ಕಳ ತಾಲೂಕಿನ ತೆಳ್ಳಾರ್ ದುರ್ಗಾ ಗ್ರಾಮದ ಪುಲ್ಲಾಟ್‌ನಲ್ಲಿ ಸೆ.28ರ ರಾತ್ರಿ ನಡೆದಿದೆ.
ದೂರಿನ ಪ್ರಕಾರ, ಚಾಲ್ಸ್ ಮದ್ಯಪಾನದ ಚಟ ಹೊಂದಿದ್ದು, ಹೊಸದಾಗಿ ನಿರ್ಮಿಸಲಾಗುತ್ತಿರುವ ಮನೆಯನ್ನು ತನಗೆ ಬಿಟ್ಟುಕೊಡುವಂತೆ ಕುಟುಂಬದವರೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಜಗಳ ಬಿಡಿಸಲು ಬಂದ ತಂದೆ ಮಥಾಯ್ ಅವರನ್ನು ಚಾಲ್ಸ್ ತಳ್ಳಿದ್ದು, ಅವರು ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಬಳಿಕ ಮನೆಯ ಶೆಡ್‌ ಬಳಿ ಕುಳಿತಿದ್ದ ಮಥಾಯ್ ಅವರೊಂದಿಗೆ ಚಾಲ್ಸ್ ಮತ್ತೆ ಜಗಳವಾಡಿದ್ದಾರೆ. ಇದರಿಂದ ಕೋಪಗೊಂಡ ಮಥಾಯ್ ತೋಟದ ಕೆಲಸಕ್ಕೆ ಬಳಸುವ ಕತ್ತಿಯನ್ನು ತೆಗೆದುಕೊಂಡು ಚಾಲ್ಸ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆಯಿಂದ ಚಾಲ್ಸ್ ಅವರ ಕುತ್ತಿಗೆ ಹಾಗೂ ಎದೆ ಭಾಗಕ್ಕೆ ಗಂಭೀರ ರಕ್ತಗಾಯವಾಗಿದ್ದು, ತೀವ್ರವಾಗಿ ಗಾಯಗೊಂಡ ಅವರನ್ನು ಸಂಬಂಧಿ ವಿಬಿನ್ ಅವರು ಆಂಬುಲೆನ್ಸ್ ಮೂಲಕ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top