ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳ ಪಾತ್ರ ಮಹತ್ತರ
ಶಿರ್ತಾಡಿ(ಮೂಡುಬಿದಿರೆ) : ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳ ಪಾತ್ರ ಮಹತ್ತರವಾದದ್ದು ಎಂಬಂತೆ ಜೂನ್ 20ರಂದು ಶಿರ್ತಾಡಿ ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ ತರಬೇತುದಾರರನ್ನು ಶಾಲಾ ಮುಖ್ಯೋಪಾಧ್ಯಯಿನಿ ಬಿಂದು ಮ್ಯಾಕ್ಸಿo ಡಿಸೋಜಾರವರು ಗುಲಾಬಿ ನೀಡಿ ಸ್ವಾಗತಿಸಿದರು.
ಭರತನಾಟ್ಯದ ಗುರುಗಳಾಗಿ ಧನ್ಯ , ಕರಾಟೆ ತರಬೇತುದಾರರಾಗಿ ಭಾಸ್ಕರ್ , ಚಿತ್ರಕಲೆ ತರಬೇತುದಾರರಾಗಿ ರೆನಿಟಾ ಸೆಲ್ವಿಯಾ, ಕರಕುಶಲ ತರಬೇತುದಾರರಾಗಿ ಸುಕನ್ಯಾ ರಾಜೇಶ್, ಅಬಾಕಸ್ ಹಾಗೂ ವೇದ ಗಣಿತದ ತರಬೇತುದಾರರಾಗಿ ಸವಿತಾ , ಕುಮಾರಿ ಸುಮನಾ ಹಾಗೂ ಶ ವಾಸುದೇವ ರವರು, ಪಾಶ್ಚಿಮಾತ್ಯ ನೃತ್ಯದ ತರಬೇತುದಾರರಾಗಿ ಅನೀಶ್ ರವರ ಅನುಪಸ್ಥಿತಿಯಲ್ಲಿ ಮಧು ರವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಸಹ ಶಿಕ್ಷಕಿ ಸುಶ್ಮಿತಾ ನಿರೂಪಿಸಿದರು.












