ಮಂಗಳೂರು ಸುಬ್ರಹ್ಮಣ್ಯ ಸಹಕಾರ ಸಂಘದ ಮಹಾಸಭೆ

Picture of RB NEWS

RB NEWS

Bureau Report

ಮಂಗಳೂರು : ಬಿಜೈ ರಸ್ತೆಯಲ್ಲಿರುವ ಸುಬ್ರಮಣ್ಯ ಸಹಕಾರ ಸಂಘದ ಮಹಾಸಭೆ ಸೆಪ್ಟೆಂಬರ್ 15 ರಂದು ಕುಡ್ಪಿ ಪದ್ಮನಾಭಯ್ಯ ಗಾರ್ಡನ್ಸ್ ನಲ್ಲಿ ಜರುಗಿತು.

ಅಧ್ಯಕ್ಷ ಕರುಣ್ ರಾವ್ ಬೆಳ್ಳೆ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.

ಮಂಗಳೂರು ಶಾಖಾ ವ್ಯವಸ್ಥಾಪಕ ರಾಘವೇಂದ್ರ ಭಟ್ ಆಹ್ವಾನ ಪತ್ರವನ್ನು ಓದಿ ದಾಖಲಿಸಿದರು.

ಹಿರಿಯ ಶಾಖವ್ಯವಸ್ಥಾಪಕ ಪ್ರಕಾಶ್ ಚಂದ್ರ ರೈ ಮಹಾಸಭೆಯ ನಡಾವಳಿಗಳನ್ನು ಓದಿ ದಾಖಲಿಸಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಾಯಿಪ್ರಸಾದ್ ಮಂಡಳಿಯ ವರದಿ ಮಂಡಿಸಿದರು.

ಬೆಳ್ತಂಗಡಿ ಸಾಕಾ ವ್ಯವಸ್ಥಾಪಕಿ ರೇಖಾ ಎಸ್ ರಾವ್ ಲೆಕ್ಕ ಪರಿಶೋಧನಾ ವರದಿ ಮಂಡಿಸಿದರು.

ಕುತ್ತಾರ್ ಶಾಖಾ ವ್ಯವಸ್ಥಾಪಕ ಜಾಯಿಸ್ಟನ್ ಸಲ್ದಾನ ಬಜೆಟಿಗಿಂತ ಹೆಚ್ಚಾದ ಖರ್ಚಿನ ವಿವರ ಮಂಡಿಸಿದರು.

ಮಂಗಳೂರು ಶಾಖಾ ಹಿರಿಯ ವ್ಯವಸ್ಥಾಪಕ ಸುಮಿತ್ ನಿವ್ವಳ ಲಾಭ ವಿಂಗಡಿಸಿ ತಿಳಿಸಿದರು.

ಕಿನ್ನಿಗೋಳಿ ಶಾಖಾ ವ್ಯವಸ್ಥಾಪಕ ಕಾರ್ತಿಕ್ ಬೆಳಿರಾಯ ಅಂದಾಜು ಆಯವ್ಯಯ ಪಟ್ಟಿ ಮಂಡಿಸಿದರು.

ಸಭೆ ಸಿಎ ಹೆಚ್ ರಾಜರತ್ನಂ ಅವರನ್ನು ಶಾಸನಬದ್ಧ ಲೆಕ್ಕ ಪರಿಶೋಧಕರಾಗಿ ಮುಂದುವರಿಸಲು ಒಪ್ಪಿಕೊಂಡಿತು.

ನಿರ್ದೇಶಕ ಮೋಹನ್ ರಾವ್ ಧನ್ಯವಾದ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಕುಂದಾಪುರ ವಲಯ ಸಹಕಾರ ಸಂಘಗಳ ಉಪನಿಬಂಧಕರಾಗಿ ಪದವನ್ನತಿ ಹೊಂದಿದ ಸುಕನ್ಯಾ ಅವರನ್ನು ಸನ್ಮಾನಿಸಲಾಯಿತು.

ಮೂಡುಬಿದರೆ ಶಾಖಾ ವ್ಯವಸ್ಥಾಪಕ ಸಂದೀಪ್ ಕುಮಾರ್ ನಿರ್ವಹಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top