Skip to content
Address:
Sudheendra Complex
,
2nd Floor, Anantashayana Road,
Karkala - 574104, Udupi.
Home Page
Address:
Sudheendra Complex
,
2nd Floor, Anantashayana Road,
Karkala - 574104, Udupi.
ಮಂಗಳೂರು ರಥೋತ್ಸವ
RB NEWS
Bureau Report
ಮಂಗಳೂರು ರಥೋತ್ಸವ
(ಕೊಡಿಯಾಲ್ ತೇರು)
ಗೋವಿಂದ ಹರಿ! ಗೋವಿಂದ ಹರಿ!
ಗೋವಿಂದ! ನಾರಾಯಣ!
ಗೋವಿಂದ ಹರಿ! ಗೋವಿಂದ ಹರಿ!
ಗೋವಿಂದ! ಭೂ ಶ್ರೀರಮಣ!! ಪಲ್ಲವಿ!!
ಜಟ್ಟಿ ಪುರುಷ ಇವ! ಪಟ್ಟದ ದೊರೆ!
ಪಟ್ಟೆ ಬಟ್ಟೆಯ ಧರಿಸುತ! ಬಂದ
ಗಟ್ಟಿ ಭಕುತರ! ಹೆಗಲ ಏರಿದ!
ಸ್ವರ್ಣ ಲಾಲಕಿಯೊಳು!
ವಿರಾಜಿಸುತ!! ೧!!
ಮಾಘ ಮಾಸದ! ಶ್ರೇಷ್ಠ ದಿನವಿದು!
ಸಪ್ತಮಿ! ರಥ ಸಪ್ತಮಿ!
ಜಾಗವಿದು ಶಕ್ತಿ! ಭಕ್ತಿಯ ಕೇಂದ್ರವು!
ವೀರ ವೆಂಕಟೇಶನ! ನೆಲೆಯಿದು!! ೨!!
ಭಕುತ ವೃಂದದ! ನಡುವಿನಿಂದಲಿ!
ಬಂದನು ಕಲಿ! ಯುಗದ ದೇವನು!
ಬಿರುದು ಬಾವಲಿ! ಮಂತ್ರಘೋಷಂಗಳ!
ಲಾಲಿಸುತ ! ಹರುಷದಿ ಬಂದನು!! ೨!!
ಸುತ್ತು ಪೌಳಿಯ! ಸುತ್ತಿ ಬಂದನು!
ಗಣಗಳಿಗೆ! ಬಲಿಯನು ನೀಡುತ!
ಶಂಖ ಜಗಾಟೆ! ಕೊಂಬು ಕಹಳೆಯು!
ವಾದ್ಯಘೋಷಂಗಳ ಮೊಳಗಿಸುತ!! ೩!!
ರಥವ ಸುತ್ತುತ! ಬಂದ ಲಾಲಕಿ!
ರಥದ ಮಂದೆ ತಾ! ನಿಂತಿತು!
ಜತೆ ಜತೆಯ! ನೂರಾರು ಯುವಜನತೆ ! ಸೇರಿ
ಎತ್ತಿತು ! ಲಾಲಕಿಯ !! ೪!!
ರಥವನೇರಿದ ! ವೀರ ವೆಂಕಟೇಶ !
ಭಕ್ತರ ಜಯಕಾರದ! ನಡುವಲಿ!
ವರುಷಾವದಿಯ! ಜಾತ್ರೇಲಿ ಸೇರಿದ!
ಭಕುತರ ಸೇವೆಗೆ! ಹರಸಿದನು !! ೫!!
ಸಾನುರಾಗದಿ! ಸೇವೆ ನಡೆಯಿತು! ಬಾನುಕೋಟಿ ತೇಜನಿಗೆ!
ಭೂರಿ ಸಮರಾಧನೆಯ! ಅಭಯ ಪ್ರಸಾದವು!
ಲಭಿಸಿತು ಸೇರಿದ! ಭಕುತರಿಗೆ!! ೬!!
ವರುಷ ವರುಷವು! ಬರುವ ಸುದಿನವಿದು!
ಹರುಷ ತುಂಬಿದ ಸಂಭ್ರಮವು!
ಪರಿಶುದ್ಧ ಮನಸಿನ! ಭಕುತರಿಗಿದುವು!
ಭೂ ವೈಕುಂಠದ! ನೈಜ ದರುಶನವು!! ೭!!
ನಮ್ಮ ಹೆಮ್ಮೆಯ ಕೊಡಿಯಾಲ್ ತೇರಿಗೆ ಆಗಮಿಸಿದ ಭಕ್ತ ಬಾಂಧವರಿಗೆ ಹೃತ್ಪೂರ್ವಕ ಶುಭಾಶಯಗಳು
ಭಕ್ತಿ ಪೂರ್ವಕ ರಚನೆ
ಕಾಂತಾವರ ಶಿವಾನಂದ ಶೆಣೈ, ಕಾರ್ಕಳ.
ಮೊ. 9845503700.
ಪ್ರತಿ ಕ್ಷಣದ ಸುದ್ದಿಗಾಗಿ WhatsApp ಲಿಂಕ್ ಕ್ಲಿಕ್ ಮಾಡಿ
ಈ ರೀತಿಯ ಇನ್ನಷ್ಟು ಸುದ್ದಿಗಳು
ನಿಟ್ಟೆ ವಿವಿಯ 16ನೇ ಘಟಿಕೋತ್ಸವದ 2ನೇ ಅಧಿವೇಶನ: 1,148 ವಿದ್ಯಾರ್ಥಿಗಳಿಗೆ ಬಿಟೆಕ್ ಪದವಿ ಪ್ರದಾನ
ಗೂಡುದೀಪದಲ್ಲಿ ಮತಗಳ್ಳತನ ಬಗ್ಗೆ ಜಾಗೃತಿ ಸಂದೇಶ
« Previous
Next »
« Previous
Next »
error:
Content is protected !!
Scroll to Top