ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಾಲಿ ಸಂಸದರನ್ನು ನಾಲ್ಕನೇ ಬಾರಿಗೆ ಮುಂದುವರಿಸಲು ಪಕ್ಷ ನಿರಾಕರಿಸಿರುವುದರಿಂದ ಹೊಸ ಅಭ್ಯರ್ಥಿಯ ಆಯ್ಕೆಯಲ್ಲಿ ಪಕ್ಷ ತೊಡಗಿದೆ.
ಕಾಂಗ್ರೆಸ್ ಪಕ್ಷವು ಮಾಜಿ ಸಂಸದ ವಿನಯ ಕುಮಾರ್ ಸೊರಕೆಯವರನ್ನು ಅಭ್ಯರ್ಥಿಯನ್ನಾಗಿಸಲು ಹೊರಟಿರುವದರಿಂದ ಬಿಜೆಪಿ ಗೊಂದಲಕ್ಕೊಳಗಾಗಿದೆ.ಬಿಲ್ಲವ ಯುವಕನೊಬ್ಬನ ಹುಡುಕಾಟದ ಅಣಿಯಲ್ಲಿ ಪಕ್ಷ ತೊಡಗಿದೆ,ನಾಜೂಕಾದ ಕಾರ್ಯಾಚರಣೆ ನಡೆಯುತ್ತಿದೆ. ಯಾವುದೇ ಪ್ರಚಾರ ಮಾಡಿಕೊಂಡಿರದ,ಆವೇಶಕ್ಕೆ ಮಾರಿಕೊಂಡಿರದ ಯುವ ಬಿಲ್ಲವ ವ್ಯಕ್ತಿಯನ್ನು ಪಕ್ಷ ತಲಾಷ್ ಮಾಡಿದರೂ ಅಚ್ಚರಿಯಲ್ಲ.
ರಾಮಚಂದ್ರ ಬೈಕಂಪಾಡಿ ಮತ್ತು ಬೃಜೇಶ್ ಚೌಟ ಇಬ್ಬರ ಹೆಸರು ಮಾತ್ರ ಪ್ರಚಾರದಲ್ಲಿದ್ದು, ರಾಜ್ಯ ಸಮಿತಿಯಲ್ಲಿದ್ದು ಅವರೊಳಗೆ ಒಬ್ಬನ ಆಯ್ಕೆಗೆ ಪಕ್ಷ ಯೋಚಿಸಿಕೊಂಡು ಆರಾಮವಾಗಿತ್ತು.
ಇನ್ನು ಕರ್ನಾಟಕ ಆಯ್ಕೆ ಸಮಿತಿಯ ಆರ್ ಎಸ್ ಎಸ್ ಪ್ರಮುಖರೊಬ್ಬರ ಬೆಂಬಲ ಬೈಕಂಪಾಡಿಯವರಿಗಿರುವುದರಿಂದ ಚೌಟರನ್ನು ಬಿಟ್ಟು ಮೊಗವೀರ ಸಮುದಾಯಕ್ಕೆ ಪ್ರಾಶಸ್ತ್ಯ ಕೊಡಲೂ ಸಾಧ್ಯವಿದೆ.
ರಾಮಚಂದ್ರ ಮತ್ತು ಬೃಜೇಶ್ ಚೌಟ ಇಬ್ಬರ ಹೆಸರನ್ನೂ ಪರಿಶೀಲನೆಗೆ ತೆಗೆದುಕೊಂಡ ಪಕ್ಷದ ನಿರ್ಧಾರ ಮಾತ್ರ ಶ್ಲಾಘನೀಯವೆನ್ನಬಹುದು.
































