ಮಂಗಳೂರಿನಲ್ಲಿ ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ; ನರಸತ್ತ ಸರಕಾರ- ಮುನೀರ್ ಕಾಟಿಪಳ್ಳ

Picture of RB NEWS

RB NEWS

Bureau Report

ಮಂಗಳೂರು : ಮಂಗಳೂರಿನ ಮಿನಿ ವಿಧಾನ ಸೌಧದ ಮುಂಭಾಗ ಸಂಘಪರಿವಾರ ದೊಡ್ಡ ಸ್ಟೇಜ್ ಹಾಕಿ ಇಡೀ ರಸ್ತೆ ಬಂದ್ ಮಾಡಿ (ಬಾಂಗ್ಲಾ ದೇಶದ ವಿಷಯ) ಪ್ರತಿಭಟನೆ ನಡೆಸುತ್ತಿದೆ.

ಪೊಲೀಸ್ ಕಮೀಷನರ್ ಅಗ್ರವಾಲ್ ರಿಗೆ ಈ ರೀತಿ ಅಷ್ಟು ಅಗಲದ, ನಗರದ ಅತ್ಯಂತ ಪ್ರಮುಖ ರಸ್ತೆಯನ್ನು ಪೂರ್ತಿ ಮುಚ್ಚಿ ಧರಣಿ ನಡೆಸುವುದರಲ್ಲಿ ಯಾವುದೇ ಸಮಸ್ಯೆ ಕಂಡಿಲ್ಲ.

ಅನುಮತಿ, ರಕ್ಷಣೆ ಎರಡೂ ಒದಗಿಸಲಾಗಿದೆ. ರಸ್ತೆ ಗುಂಡಿ ಮುಚ್ಚಿ ಎಂದು ಆಗ್ರಹಿಸಿ ರಸ್ತೆಗೆ ಇಳಿಯದೆ ಮೂಲೆಯಲ್ಲಿ ಕೂತು ಜನಪರ ಸಂಘಟನೆಗಳು ಧರಣಿ ಮಾಡುವುದು ಮಾತ್ರ ಮಂಗಳೂರಿನಲ್ಲಿ ಅಪರಾಧ.

ಪ್ಯಾಲೆಸ್ತೀನ್ ನಲ್ಲಿ ಶಾಂತಿ ನೆಲೆಸಲಿ, ನರಮೇಧ ನಿಲ್ಲಲಿ ಎಂದು ಒತ್ತಾಯಿಸಿ ಎಡಪಕ್ಷಗಳ ಐವತ್ತು, ಅರವತ್ತು ಜನ ಮಿನಿ ವಿಧಾನ ಸೌಧದ ಬಳಿಯ ಫುಟ್ ಪಾತ್ ನಲ್ಲಿ ಪ್ರದರ್ಶನ ಮಾಡುವುದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುತ್ತದೆ. ಅನುಮತಿ ನಿರಾಕರಿಸಿ ಎಫ್ ಆರ್ ಐ ಹಾಕಲಾಗುತ್ತದೆ. ಸಂಘಪರಿವಾರ ಬಾಂಗ್ಲಾ ದೇಶದ ಬೆಳವಣಿಗೆಗಳನ್ನು ಇಟ್ಟುಕೊಂಡು ಉದ್ರೇಕಕಾರಿ ಘೋಷಣೆ, ಭಾಷಣಗಳನ್ನು ಇಡೀ ರಸ್ತೆ ಬಂದ್ ಮಾಡಿ ನಡೆಸಿದರೂ ಕಾನೂನು ಸುವ್ಯವಸ್ಥೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ, ಸಂಚಾರಕ್ಕೂ ಸಮಸ್ಯೆ ಆಗುವುದಿಲ್ಲ.

ಇದು ಕಮೀಷನರ್ ಅಗ್ರವಾಲ್ ನ್ಯಾಯ. ಇದು ಪೊಲೀಸ್ ರಾಜ್ ಅಲ್ಲದೆ ಮತ್ತೇನು ? ಸ್ಪೀಕರ್ ಖಾದರ್ ರಿಗೆ ಪಾಪ ಇದೆಲ್ಲಾ ಕಾಣುವುದೂ ಇಲ್ಲ, ಅವರು ಪ್ರತಿಕ್ರಿಯಿಸುವುದೂ ಇಲ್ಲ. ಅವರಿಗೆ “ಪಕ್ಷ” ಇಲ್ಲ. ಅವರು ಎಲ್ಲರ “ಸ್ಪೀಕರ್” ಎಂದು ಸಿಪಿಐ(ಎಂ) ಜಿಲ್ಲಾ ಮುಖಂಡ ಮುನೀರ್ ಕಾಟಿಪಳ್ಳ ತಿರುಗೇಟು ನೀಡಿದ್ದಾರೆ.

ಮಂಗಳೂರು: ವರದಿಗಾರಿಕೆಗೆ ತೆರಳಿದ್ದ ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನಿಸಿದ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ಪುಂಡಾಟಿಕೆ ಮೆರೆದ ಘಟನೆ ಇಂದು ನಗರದಲ್ಲಿ ನಡೆದಿದೆ.

ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಆಗ್ರಹಿಸಿ ದ.ಕ. ಜಿಲ್ಲಾ ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಇಂದು ಬೆಳಗ್ಗೆ ಮಂಗಳೂರಿನಲ್ಲಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಧರಣಿನಿರತರು ಕ್ಲಾಕ್ ಟವರ್ ಬಳಿ ಪೊಲೀಸ್‌ ಬ್ಯಾರಿಕೇಡ್ ಗಳನ್ನು ಬದಿಗೊತ್ತಿ ರಸ್ತೆ ತಡೆಗೆ ಮುಂದಾಗಿದ್ದಾರೆ. ಆಗ ಮಧ್ಯಪ್ರವೇಶಿಸಿದ ಪೊಲೀಸರು ರಸ್ತೆ ತಡೆ ಮಾಡಲು ಯತ್ನಿಸಿದವರನ್ನು ತಡೆಯಲೆತ್ನಿಸಿದರು. ಇದು ಪೊಲೀಸರು ಮತ್ತು ಹಿಂದುತ್ವ ಸಂಘಟನೆಗಳ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿಗೆ ಕಾರಣವಾಯಿತು. ಈ ವೇಳೆ ವರದಿಗಾರಿಕೆಗೆ ತೆರಳಿದ್ದ ಮಾಧ್ಯಮದವರ ಮೇಲೆ ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿ ವರದಿಗಾರಿಕೆಗೆ ಅಡ್ಡಿಪಡಿಸಿದ್ದಾರೆ. ಖಾಸಗಿ ಸುದ್ದಿವಾಹಿನಿಗಳ ವಿಡಿಯೋ ಜರ್ನಲಿಸ್ಟ್ ಮೇಲೆ ಮುಗಿಬಿದ್ದ ಹಿಂದುತ್ವ ಸಂಘಟನೆಯ ಕಾರ್ಯಕರ್ತರು ತಳ್ಳಾಡಿದ್ದಲ್ಲದೆ, ಹಲ್ಲೆಗೆ ಯತ್ನಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top