ಮಂಗಗಳ ದರ್ಬಾರು : ಗ್ರಾಮಸ್ಥರು ಕಂಗಾಲು
ಕಾರ್ಕಳ: ಮಂಗಗಳ ವಿಪರೀತ ಹಾವಳಿಗೆ ಬೆಳೆನಾಶವಾಗುತ್ತಿರುವ ಕುರಿತು ನಿಟ್ಟೆ ಕೆಮ್ಮಣ್ಣು ಭಾಗದ ಗ್ರಾವiಸ್ಥರು ಅರಣ್ಯ ಇಲಾಖೆಗೆ ಮೊರೆ ಹೋಗಿದ್ದಾರೆ.
ಇತ್ತೀತಿನ ದಿನಗಳಲ್ಲಿ ಮಂಗಗಳ ಹಾವಳಿ ಎಲ್ಲೇ ಮೀರಿದೆ. ಪರಿಣಾಮವಾಗಿ ಕೆಮ್ಮಣ್ಣು ಹಾಸುಪಾಸಿನಲ್ಲಿ ಬೆಳೆಸಿರುವ ತೆಂಗು, ಕಂಗು, ಬಾಳೆ,ಮಾವು, ಹಲಸು ಸೇರಿದಂತೆ ಇತರ ಹಣ್ಣುಗಳು ಹಾಗೂ ತರಕಾರಿಗಳು ಮಂಗಗಳ ಹಾವಳಿಗೆ ತುತ್ತಾಗಿ ನಾಶವಾಗಿದೆ ಎಂಬ ದೂರುಗಳು ಗ್ರಾಮಸ್ಥರದಾಗಿದೆ.
ಮಳೆಗಾಲದಲ್ಲಿ ಭತ್ತದ ಕೃಷಿಯಲ್ಲಿ ಕೆಲವರು ತೊಡಗಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಭತ್ತದ ತೆನೆಗಳನ್ನು ಹಾಳುಮಾಡುವ ಭೀತಿಯು ಗ್ರಾಮಸ್ಥರಲ್ಲಿ ಕಾಡುತ್ತಿದೆ.
ಅರಣ್ಯ ಇಲಾಖೆಯೂ ಇದರ ಕುರಿತು ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಶಾಲಾ ವಿದ್ಯಾರ್ಥಿಗಳ ಮೇಲೆ ದಾಳಿ ಭೀತಿ

ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಿ ಬರುತ್ತಿದ್ದು, ಕೆಲ ವಿದ್ಯಾರ್ಥಿಗಳು ಸಿದ್ಧಪಡಿಸಿದ ಆಹಾರ ಪೊಟ್ಟಣಗಳನ್ನು ಕೈಯಲ್ಲಿ ಹಿಡಿದು ಸೇವಿಸುತ್ತಾ ಹೆಜ್ಜೆ ಹಾಕುವ ಸಂದಭಗಳಲ್ಲಿ ಆಹಾರಕ್ಕಾಗಿ ಹಾತೊರೆಯುವ ಮಂಗಗಳು ವಿದ್ಯಾರ್ಥಿಗಳ ಮೇಲೂ ದಾಳಿ ನಡೆಸಿದ್ದರೂ ಅಶ್ವರ್ಯವಿಲ್ಲ. ಇಂತಹ ಭಯದ ಕರಿನೆರಳಿನಲ್ಲಿ ನಿಟ್ಟೆ ಗ್ರಾಮದ ಕೆಮ್ಮಣ್ಣು ನಾಗರಿಕರು ಬದುಕು ಸಾಗುತ್ತಿದ್ದಾರೆ.































