ಭೌತಿಕ ಶರೀರವಿಲ್ಲದಿದ್ದರೂ ಮನುಷ್ಯ ಚಿರಂಜೀವಿಯಾಗಿರಬಲ್ಲ

Picture of RB NEWS

RB NEWS

Bureau Report

ಕಾರ್ಕಳ: ಭೌತಿಕ ಶರೀರವಿಲ್ಲದಿದ್ದರೂ ಮನುಷ್ಯ ಚಿರಂಜೀವಿಯಾಗಿರಬಲ್ಲ ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಮಠದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ಇಲ್ಲಿನ ಸಾಹಿತ್ಯ ಸಂಘದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು
ಅಳಿಯುವುದು ಕಾಯ ಉಳಿಯುವುದು ಕೀರ್ತಿ ಎಂಬ ಕುರಿತು ಉಪನ್ಯಾಸ ನೀಡಿ ಬದುಕಿನ
ಸಾರ್ಥಕತೆಯನ್ನು ಜೀವಿತದ ಅವಧಿಯಲ್ಲಿ ಕಳೆದು ಸಾವಿನಿಂದ ಆಚೆಗೆ ಏನಾದರೂ ಇದೆಯೇ ಎಂದು
ಶೋಧಿಸುವ ವಿಸ್ತೃತ ಭಾವನೆ ಮನುಷ್ಯನಿಗೆ ಮಾತ್ರ ಸಾಧ್ಯ.
ರೋಗವನ್ನು ಗುಣಪಡಿಸಲು ನೀಡುವ ಮಾತ್ರೆಗೂ ಅಂತಿಮ ದಿನಾಂಕ ಎಂಬುದು ಇರುತ್ತದೆ. ನಂತರ ಅದಕ್ಕೆ ಯಾವ ಮೌಲ್ಯವೂ ಇರುವುದಿಲ್ಲ. ಆದರೆ ಮನುಷ್ಯನ ಬದುಕು ಹಾಗಲ್ಲ, ಭೌತಿಕ ಶರೀರವಿಲ್ಲದಿದ್ದರೂ ಅಜರಾಮರ ವ್ಯಕ್ತಿತ್ವ ಶಾಶ್ವತವಾಗಿರುತ್ತದೆ.
ಸಾಮಾನ್ಯ ಬದುಕಿನೊಂದಿಗೆ ಅಸಾಮಾನ್ಯವಾಗಿರುವುದು. ನಮ್ಮ ತಾಯಿ, ಸಮಾಜ, ಹಿತಚಿಂತಕರು ನಮಗಾಗಿ ಪಟ್ಟ ನೋವುಗಳನ್ನು ನಾವು ಮರೆಯಬಾರದು. ಜೀವನಕ್ಕೂ ಒಂದು ಅರ್ಥವಿದೆ.
ನಮ್ಮ ಪರಂಪರೆ ನೂರ್ಕಾಲ ಚಿರಂಜೀವಿ ಬದುಕಬೇಕು ಎನ್ನುತ್ತದೆ.
ನಮ್ಮ ಸಂಸ್ಕೃತಿ ಅನುಸರಿಸಿದ ಮೌಲ್ಯಗಳಿಗೆ ಬೆಲೆ ಬರುವಂತೆ ಉನ್ನತ ಹಾಗೂ ಉದಾತ್ತ ಬದುಕು ಶಾಶ್ವತವಾಗಿರುತ್ತದೆ ಎಂದರು.

ತುಮಕೂರು ರಾಮಕೃಷ್ಣ ವಿವೇಕಾನಂದ ಮಠದ ಪರಮಾನಂದ ಸ್ವಾಮೀಜಿ ಉಪಸ್ಥಿತರಿದ್ದರು.
ಸಾಹಿತ್ಯ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೊ.ಪದ್ಮನಾಭ ಗೌಡ
ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೋಶಾಧಿಕಾರಿ ಎಷ್ಟು ನಿತ್ಯಾನಂದ ಪೈ ಸ್ವಾಮೀಜಿಯವರನ್ನ ಸತ್ಕರಿಸಿದರುವಿದ್ವಾನ್ ವೈ.ಅನಂದಪದ್ಮನಾಭ ಭಟ್ ಹಾಡಿದರು. ನಿವೃತ್ತ ಪ್ರಾಂಶುಪಾಲ ಸಿದ್ಧಾಪುರ ವಾಸುದೇವ ಭಟ್ ವೇದಘೋಷ ಗೈದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ನಿರೂಪಿಸಿದರು. ಕಾರ್ಯದರ್ಶಿ ಬೇಬಿ ಈಶ್ವರಮಂಗಲ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top