ಭೀಕರ ಅಪಘಾತ:ಗಾಯಾಳುವನ್ನು ಹೊರ ತೆಗೆದ ಅಗ್ನಿಶಾಮಕ ದಳ

Picture of RB NEWS

RB NEWS

Bureau Report

ಕಾರ್ಕಳ : ಕಾರ್ಕಳ ಬಜಗೋಳಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಕರಿಯಕಲ್ಲು – ದಾನಸಾಲೆ ಕೂಡು ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಸಿಲುಕಿಕೊಂಡಿದ್ದ ಗಾಯಾಳುವನ್ನು ಅಗ್ನಿಶಾಮಕ ದಳದವರು ಕಾರ್ಯಚರಣೆ ನಡೆಸಿ ಜೀವ ಉಳಿಸಿದ್ದಾರೆ.

ಬಜಗೋಳಿಯಿಂದ ಕರಿಯಕಲ್ಲು ಮಾರ್ಗವಾಗಿ ಕಾರ್ಕಳ ಪೇಟೆಯ ಕಡೆಗೆ ಬರುತ್ತಿ ಓಮ್ನಿ ಹಾಗೂ ಕಾರ್ಕಳದಿಂದ ಬಜಗೋಳಿ ಕಡೆಗೆ ಹೋಗುತ್ತಿದ್ದ ಕಾರು ಮುಖಾಮುಖಿಯಾಗಿ ಡಿಕ್ಕಿ ಹೊಡದಿತ್ತು.

ಅಪಘಾತದ ತೀವ್ರತೆಗೆ ಓಮ್ನಿ ಕಾರಿನ ಬಾಗಿಲು ತೆರೆಯಲಾಗದೇ ಅದರಲ್ಲಿ‌ ಗಾಯಾಳು ಸಿಲುಕಿಕೊಂಡಿದ್ದರು.

ಮೂಡುಬಿದಿರೆ ಒಂಟಿಕಟ್ಟೆಯ ಸಂದೇಶ್ (35) ಎಂದು ತಿಳಿದುಬಂದಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಘಟನಾ ಸ್ಥಳಕ್ಕೆ ಅಗಮಿ ಗಾಯಾಳುವನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ಸು ಆಗಿದ್ದಾರೆ.

ಕಾರ್ಯಾಚರಣೆಯಲ್ಲಿ ಅಗ್ನಿ ಶಾಮಕ ಠಾಣಾಧಿಕಾರಿ ಅಲ್ಟರ್ಟ್ ಮೋನಿಸ್, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಚಂದ್ರಶೇಖರ್, ಸಿಬಂದಿ ಜಯ ಮೂಲ್ಯ, ಸುರೇಶ್, ನಿತ್ಯಾಾನಂದ, ಉಮೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top