ಭಾವ ಬರುವರು…!
- ‘ಒಂದು ಮೊಟ್ಟೆಯ ಕತೆ ‘ಸಿನೆಮಾದಿಂದ ‘ಸು. ಫ್ರಮ್ ಸೋಮೇಶ್ವರ ‘ಸಿನೆಮಾ ತನಕ ಜನಪ್ರಿಯತೆ ಪಡೆದ ,ಸಾಮಾನ್ಯ ಚಲನಚಿತ್ರದ ಅಸಾಮಾನ್ಯ ಕಲಾವಿದ, ನಿರ್ದೇಶಕ, ನಿರ್ಮಾಪಕ ರಾಜು ಬಿ. ಶೆಟ್ಟಿಯವರು ಸುಪ್ರಸಿದ್ದ ತುಳುನಾಡಿಗ.
- ಅವರ ಬೋಳು ತಲೆ, ಅಗಲಗಲ ಹಲ್ಲುಗಳು,ನಗುವುದೋ ನಗಿಸುವುದೋ ಗೊಂದಲವನ್ನೇ ಸೃಷ್ಠಿಸಿಟ್ಟುಕೊಂಡ ರಾಜು ಬಿ ಶೆಟ್ಟಿ ಈಗ ಕಲ್ಲಡ್ಕದ ಗೊಂಬೆಯೂ ಆಗಿ ರೈಸುತ್ತಿದ್ದಾರೆ(ಮೆರೆಯುವುದು) ಎಂದರೆ ರಾಜು ಬಿ. ಶೆಟ್ಟರಿಗೆ ಸಭೆ ಸಮಾರಂಭಗಳಲ್ಲಿನ ಗೊಂಬೆ ನಡಿಗೆಯಲ್ಲೂ ಡಿಮಾಂಡಪ್ಪೋ ಡಿಮಾಂಡು…!
- ಕಲ್ಲಡ್ಕದ ಶಿಲ್ಪಾ ಗೊಂಬೆ ಕುಣಿತದವರು ಹೊಸತಾದ ಯೋಚನೆ ಮಾಡಿದ್ದು ನಿಜಕ್ಕೂ ಆಶ್ಚರ್ಯಕರ ರೀತಿಯಲ್ಲಿ ಖುಶಿ ಕೊಟ್ಟಿದೆ.
- ಬರಬೇಕಾದ ಅತಿಥಿಗಳಿಗಿಂತ ಮುಂಚಿತವಾಗಿ ರೈಟ್ ಟೈಮಲ್ಲೇ #ಭಾವ ರಾಜು ಬಿ. ಶೆಟ್ಟಿಯವರು ಕಲ್ಲಡ್ಕ ತಂಡದ ಮೆರವಣಿಗೆಯನ್ನು ಕಟ್ಟಿಕೊಂಡೇ ಬರುತ್ತಾರೆ!
- ಕಾರ್ಕಳದಲ್ಲಿ ಬಾಹುಬಲಿ ಮಹಾಮಸ್ತಕಾಭಿಷೇಕ ಕಾರ್ಯಾಲಯ ಉದ್ಘಾಟನಾ ಸಮಾರಂಭದ ವೇಳೆ ರಾಜು ಬಿ. ಶೆಟ್ಟಿಯವರು ಗೊಂಬೆಯವತಾರಿಯಾಗಿ ಆಗಮಿಸಿದ್ದರು. ಕಲ್ಲಡ್ಕದ ಶಿಲ್ಪಾ ತಂಡಕ್ಕೆ ಫೋನ್ ಕರೆ ಮಾಡಿದರೆ ಸಾಕು #ಭಾವ ಸಲೀಸಾಗಿ ಬರುವರು!
-ವಿ. ಕೆ. ವಾಲ್ಪಾಡಿ






































