ಕಾರ್ಕಳ : ಭಾರತ್ ಸ್ಕೌಟ್ ಅಂಡ್ ಗೈಡ್ ಸ್ಥಳೀಯ ಸಂಸ್ಥೆ ಕಾರ್ಕಳ ಇಲ್ಲಿಯ ಶ್ರೀ ಭುವನೇಂದ್ರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾರ್ಚ್ 7ರಂದು ಭಾರತ್ ಸ್ಕೌಟ ಅಂಡ್ ಗೈಡ್ ವತಿಯಿಂದ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಕಥಾಮಹಿ ಎಂದು ಪ್ರಸಿದ್ಧಿಯನ್ನು ಪಡೆದ ಜ್ಯೋತಿ ಜಿ ಪ್ರಭು ಅವರು ಆಗಮಿಸಿ ಮಕ್ಕಳಿಗೆ ರಾಮಾಯಣ ಮಹಾಭಾರತ ಹಾಗೂ ನೀತಿ ಬೋಧಕ ಕಥೆಗಳನ್ನು ಹೇಳಿದರು.
ಜಿಲ್ಲಾ ಸಹಾಯಕ ಗೈಡ್ ಕಮಿಷನರ್ ಬೋಳ ಗೀತಾ ಕಾಮತ್ ರವರು ಮಾತನಾಡಿ,ಭಾರತೀಯ ಪರಂಪರೆಯಲ್ಲಿ ಸ್ತ್ರೀ ಯರಿಗೆ ವಿಶೇಷ ಸ್ಥಾನಮಾನಗಳಿವೆ. ವಿದ್ಯಾರ್ಥಿಗಳು ಎಳವೆಯಲ್ಲಿ ಇರುವಾಗಲೇ ವಿದ್ಯಾರ್ಥಿಗಳು ಮಹಿಳೆಯರಿಗೆ ಗೌರವವನ್ನು ನೀಡಲು ಕಲಿಯಬೇಕು ಎಂದರು
ಜಿಲ್ಲಾ ಗೈಡ್ ಸಹಾಯಕ ಕಮಿಷನರ್ ಹಾಗೂ ಶಾಲಾ ಮುಖಿ ಶಿಕ್ಷಕಿ ವಿದ್ಯಾ ವಿ ಕಿಣಿ ಸ್ವಾಗತಿಸಿದರು.
ಸ್ಥಳೀಯ ಸಂಸ್ಥೆಯ ಸಹಕಾರ್ಯದರ್ಶಿ ಹಾಗೂ ಶಾಲಾ ಗೈಡರ್ ಸೀಮಾ ಕಾಮತ್ ಅತಿಥಿಗಳ ಪರಿಚಯಿಸಿದರು.
ಸ್ಕಾಟರ್ ಸುಜಾತ ಹೆಗ್ಡೆ ನಿರೂಪಿಸಿದರು.
ಜ್ಯೋತಿ ಜಿ ಪ್ರಭು ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಶಾಲಾ ಸಹ ಶಿಕ್ಷಕರು ಉಪಸ್ಥಿತರಿದ್ದರು.
ಸ್ಕೌಟ್ ಗೈಡ್ ಮಕ್ಕಳು ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು








































