ಭಾರತದ ಸ್ವಾತಂತ್ರ್ಯಅಪಾಯದಲ್ಲಿದೆ: ಜಯನ್ ಮಲ್ಪೆ

Picture of RB NEWS

RB NEWS

Bureau Report


ಮಲ್ಪೆ: ನಮ್ಮ ದೇಶದಲ್ಲಿ ವೈಚಾರಿಕತೆ,ವ್ಯಕ್ತಿ ಸ್ವಾತಂತ್ರ್ಯಮತ್ತು ಸಮಾನತೆಗಳ ಮೇಲೆ ದೌರ್ಜನ್ಯ ಎಸಗುತ್ತಿರುವ ಅಧಿಕಾರಶಾಹಿತ್ವ, ಬಂಡವಾಳಶಾಹಿತ್ವ,ವೈದಿಕಶಾಹಿತ್ವ,ಧಾರ್ಮಿಕ ಡಾಂಬಿಕತನ,ಸಾಮಾಜಿಕ ಅಸಹಿಷ್ಣತೆ ಈ ದೇಶದ ಸ್ವಾತಂತ್ರ್ಯಕಸಿದು ಅಪಾಯಕ್ಕೆ ಸಿಳುಕಿಸಿದೆ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.
ಅವರು ಮಲ್ಪೆ ಸಿಟಿಝನ್ ಸರ್ಕಲ್ ಅಟೋ ಚಾಲಕ ಮಾಲಕರ ಸಂಘ ಏರ್ಪಡಿಸಿದ ೭೮ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡುತ್ತಾ,
ದೇಶದ ಪ್ರಜ್ಞಾವಂತ ಸಮುದಾದಲ್ಲಿ ಸಂಭ್ರಮಕ್ಕೆ ಬದಲಾಗಿ ಸೂತಕದ ಛಾಯೆಗಳು ಮೂಡಿವೆ. ಸ್ವಾತಂತ್ರ್ಯ ಪೂರ್ವ ಕಾಲದ ಹೋರಾಟಗಳು ಮತ್ತು ಸ್ವಾತಂತ್ರ್ಯ ನ0ತರದ ನಮ್ಮ ಸಂಘರ್ಷ,ನಿರೀಕ್ಷೆಗಳು ಈ ತಲ್ಲಣ ಮತ್ತು ಕಳವಳಕ್ಕೆ ಕಾರಣವಾಗಿದೆ ಎಂದರು.
ಮುಖ್ಯಅತಿಥಿಗಳಾದ ನ್ಯಾಯವಾದಿ ಪ್ರವೀಣ್ ಪೂಜಾರಿ ಮಾತನಾಡಿ ದೇಶದೊಳಗಿನ ಅಸಮಾನತೆ ತೊಲಗಿದರೆ ಮಾತ್ರ ನಿಜವಾದ ಸ್ವಾತಂತ್ರ್ಯಕ್ಕೆ ಅರ್ಥಬರುತ್ತದೆ.ಜಾತಿ ಮತ,ಮೇಲು ಕೀಳುಗಳ ವಿರುದ್ಧ ಹೋರಾಡಿದ ನಾರಾಯಣಗುರು ಅಂಬೇಡ್ಕರ್ ಚಿಂತನೆಯನ್ನು ಈ ನೆ0ಲದ ಶೋಷಿತರು ಮೈಗೂಡಿಸಿಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಉದ್ಯಮಿ,ಸಮಾಜಸೇವಕ ಶೇಖರ್ ತಿಂಗಳಾಯ,ಶಮ್ಮಿ ಕೊಡವೂರು,ಗಣೇಶ್‌ನೆರ್ಗಿ,ಶಾರದ ಕಾಂಚನ್,ಅನ0ತ ನೆರ್ಗಿ,ಅಶ್ವಿನಿ ಟೀಚರ್ ಮುಂತಾದವರು ಉಪಸ್ಥಿತರಿದ್ದರು.
ಬುರಾನ್ ಮಲ್ಪೆ ಸ್ವಾಗತಿಸಿ, ರವಿ ನೆರ್ಗಿ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top