ಭಾರತದ ಪ್ರತ್ಯುತ್ತರ “ಆಪರೇಷನ್ ಸಿಂಧೂರ್” ಯಶಸ್ವಿ ಕಾರ್ಯಾಚರಣೆ: ಭಯೋತ್ಪಾದಕರ ನೆಲೆಗಳು ಧ್ವಂಸ

Picture of RB NEWS

RB NEWS

Bureau Report

ಹೊಸದಿಲ್ಲಿ: ‘ಆಪರೇಷನ್ ಸಿಂಧೂರ್ ಎಂಬ ಹೆಸರಿನ ಕಾರ್ಯಾಚರಣೆಯಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ಮುಂಜಾನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿವೆ ಎಂದು ಭಾರತದ ರಕ್ಷಣಾ ಸಚಿವಾಲಯ ತಿಳಿಸಿದೆ.

‘ಆಪರೇಷನ್‌ ಸಿಂಧೂರ್’ ಅಡಿಯಲ್ಲಿ ಭಾರತೀಯ ಸೇನಾ ಕಾರ್ಯಾಚರಣೆಯ ಪರಿಣಾಮವಾಗಿ ಪಾಕಿಸ್ತಾನ ಮತ್ತು ಪಿಒಕೆಯಲ್ಲಿ ಸ್ಪೋಟಗಳ ವರದಿಗಳು ಬಂದಿವೆ ಎಂದು ರಕ್ಷಣಾ ಸಚಿವಾಲಯ ದೃಢಪಡಿಸಿದ ಸ್ವಲ್ಪ ಸಮಯದ ನಂತರ, ಭಾರತೀಯ ಸೇನೆಯು ಎಕ್ಸ್ ಪೋಸ್ಟ್‌ನಲ್ಲಿ “ನ್ಯಾಯ ದೊರಕಿತು. ಜೈ ಹಿಂದ್!” ಎಂದು ತಿಳಿಸಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಕ್ಸ್‌ನಲ್ಲಿ ‘ಭಾರತ್ ಮಾತಾ ಕೀ ಜೈ’ ಎಂದು ಬರೆದಿದ್ದಾರೆ.

ಪಾಕಿಸ್ತಾನದಲ್ಲಿ ಒಂಭತ್ತು ಸ್ಥಳಗಳನ್ನು ಗುರಿಯಾಗಿರಿಸಿಕೊಂಡು ಸೇನಾ ದಾಳಿಗಳು ನಡೆದಿದೆ ಎಂದು ಪತ್ರಿಕಾ ಮಾಹಿತಿ ಬ್ಯೂರೋ ಪ್ರಕಟಣೆಯಲ್ಲಿ ತಿಳಿಸಿದೆ.

ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಹೇಳಿಕೆಯೊಂದರಲ್ಲಿ ಭಾರತೀಯ ವಾಯುಪಡೆಯು ಮುರಿಡೈ ಮತ್ತು ಬಹಾವಲ್ಪುರದಲ್ಲಿನ ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಕೋಟಿ ಮತ್ತು ಮುಜಫರಾಬಾದ್‌ನಲ್ಲಿರುವ ನಿಯಂತ್ರಣ ರೇಖೆಯಾದ್ಯಂತದ ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿ ನಡೆಸಿದೆ ಎಂದು ತಿಳಿಸಿದೆ.

ದಾಳಿಗಳಿಂದಾಗಿ ಸಾವುನೋವುಗಳು ಸಂಭವಿಸಿದೆ ಎಂದು ಹೇಳಿಕೊಂಡ ಪಾಕಿಸ್ತಾನವು, “ತಾನು ಆಯ್ಕೆ ಮಾಡಿದ ಸಮಯ ಮತ್ತು ಸ್ಥಳದಲ್ಲಿ ದಾಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸಲಿದೆ”, ಎಂದು ತಿಳಿಸಿದೆ.

ದಾಳಿಗೆ ಕೆಲವೇ ನಿಮಿಷಗಳ ಮೊದಲು, ಭಾರತೀಯ ಸೇನೆಯು “ದಾಳಿಗೆ ಸಿದ್ದ ಗೆಲ್ಲಲು ತರಬೇತಿ ಪಡೆದಿದೆ” ಎಂಬ ಶೀರ್ಷಿಕೆಯೊಂದಿಗೆ X ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿತ್ತು.

PIBಯು ಬೆಳಗಿನ ಜಾವ 1:44 ಕ್ಕೆ ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಆಪರೇಷನ್ ಸಿಂಧೂರ್ ಬಗ್ಗೆ ವಿವರಗಳನ್ನು ಹಂಚಿಕೊಂಡಿದೆ.

ಬೆಳಗಿನ ಜಾವ 1:51 ಕ್ಕೆ ಭಾರತೀಯ ಸೇನೆಯು X ನಲ್ಲಿ “ನ್ಯಾಯವನ್ನು ಸಲ್ಲಿಸಲಾಗಿದೆ. ಜೈ ಹಿಂದ್!”, ಎಂದು ಪೋಸ್ಟ್ ಮಾಡಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top