ಭಾಗ-13
ಇಸ್ಮಾಯಿಲ್ ಕುತ್ತಿಗೆಯಲ್ಲಿದ್ದ ಹಗ್ಗದ ಪರಿಶೀಲನೆ
ಇಸ್ಮಾಯಿಲ್ ಹತ್ಯಾ ಪ್ರಕರಣದ ತನಿಖೆಯನ್ನು ಪ್ರಮುಖ ಪಾತ್ರ ವಹಿಸಿದ್ದು ಸಿಓಡಿ ಪೊಲೀಸರು ವಶಪಡಿಸಿಕೊಂಡಿದ್ದ ಹಲವಾರು ಸೊತ್ತುಗಳು. ಈ ಸೊತ್ತುಗಳು ವೈಜ್ಞಾನಿಕ ರೀತಿಯಲ್ಲಿ ಪರೀಕ್ಷೆಗೆ ಒಳಪಡಿಸಿ ಇಸ್ಮಾಯಿಲ್ ಅವರನ್ನು ಕೊಲೆ ಮಾಡಿದ ಸಂದರ್ಭದಲ್ಲಿ ಉಪಯೋಗಿಸಲ್ಪಟ್ಟದ್ದು ಎಂದು ವರದಿ ನೀಡಿದ್ದವರು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ ಸೈಂಟಿಫಿಕ್ ಆಫೀಸರ್ ಕೆಂಚಪ್ಪ.
ಅವರು ನ್ಯಾಯಾಲಯದಲ್ಲಿ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಅವರು ಹೇಳಿದ್ದು ಹೀಗೆ. ನಾನು ಬೆಂಗಳೂರಿನ ಎಫ್.ಎಸ್.ಎಲ್ನಲ್ಲಿ ಸೈಂಟಿಫಿಕ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ತಾ. 9-9-76ರಂದು ನಾನು ಬಂಟ್ವಾಳಕ್ಕೆ ಬಂದೆ. 10-9-76ರಿಂದ 1-10-76ರವರೆಗೆ ಸಿಓಡಿ ಪೊಲೀಸರ ಸೂಚನೆ ಪ್ರಕಾರ ಒಟ್ಟು 117 ಜೀಪುಗಳನ್ನು (ಪೊಲೀಸ್ ಜೀಪುಗಳ ಸಮೇತ) ಕೂಲಂಕಷವಾಗಿ ತನಿಖೆ ನಡೆಸಿದೆ.
ಆದರೆ ಅದರಿಂದ ಈ ಕೇಸಿಗೆ ಸಂಬAಧಪಟ್ಟ ಕುರುಹು ಸಿಗಲಿಲ್ಲ’ ಎಂದು ವಿವರಿಸಿದರು. ಅಷ್ಟು ಮಾತ್ರವಲ್ಲದೆ ಸಿಓಡಿ ಡಿಎಸ್ಪಿಯವರು ತಮ್ಮ ವಶಕ್ಕೆ ಕೊಟ್ಟ ಮೃತ ಇಸ್ಮಾಯಿಲ್ರವರ ಕುತ್ತಿಗೆಯಲ್ಲಿ ಸಿಕ್ಕಿದ ನೈಲಾನ್ ಮತ್ತು ಹುರಿ ಹಗ್ಗಗಳನ್ನೂ ತಾನು ಪರೀಕ್ಷಿಸಿದುದಾಗಿಯೂ ಹುರಿ ಹಗ್ಗದಲ್ಲಿ ಕೂದಲುಗಳು ಸಿಕ್ಕಿದುವೆಂದೂ ಅವರು ಹೇಳಿದರು.
ತಾ. 23-2-77ರಂದು ನಾನು ಬಂಟ್ವಾಳಕ್ಕೆ ಬಂದು ಸಿಓಡಿ ಡಿಎಸ್ಪಿ ಮತ್ತಿತರರ ಜತೆ ಪುರಂದರ ಭಟ್ಟರ ಮನೆಗೆ ಹೋದೆ. ಅಲ್ಲಿ ಕಿಟಕಿಯ ಬಿಳಿ ಪೈಂಟ್ ಹಾಗೂ ಅದರ ಕೆಳಗಡೆ ಬಿಳಿ ಪೈಂಟ್ ಉಜ್ಜಿದ ಕುರುಹು ಕಂಡು ಬಂತು. ಇವುಗಳ ಫೊಟೊಗಳನ್ನು ತೆಗೆಯಲು ಬರುವಂತೆ ಬೆಂಗಳೂರಿನ ವೆಂಕಟರಾಜುವಿಗೆ ಹೇಳಿ ಕಳುಹಿಸಿದೆ. ತಾ. 25-2-77ರಂದು ಆ ಫೊಟೋಗ್ರಾಫರ್ ಬಂದು ಫೊಟೊಗಳನ್ನು ತೆಗೆದ ಮೇಲೆ ಆ ಪೈಂಟನ್ನೂ, ನೆಲದಲ್ಲಿದ್ದ ಪೈಂಟಿನ ಕುರುಹುಗಳನ್ನೂ ಕೆರೆದು ತೆಗೆದೆ’ ಎಂದು ಹೇಳಿದರು.
ಸೀಲ್ಡ್ ಪ್ಯಾಕೆಟ್ಗಳು ತಾ. 8-2-77ರಂದು ಸಿಓಡಿ ಡಿಎಸ್ಪಿಯವರಿಂದ ಬಂದ ರಿಕ್ವಿಜಿಶನ್ ಪ್ರಕಾರ 19 ಸೀಲ್ಡ್ ಪ್ಯಾಕೆಟ್ಗಳು ಸಿಕ್ಕಿದವು ಎಂದು ಹೇಳಿದ ಕೆಂಚಪ್ಪ ಅವರು ಅವುಗಳನ್ನು ಬಿಡಿಸಿ ನೋಡಿದಾಗ ನೇಯ್ದ ಪ್ಲಾಸ್ಟಿಕ್ ಚೀಲ, ಪೊಲೀಸ್ ಯೂನಿಫಾರ್ಮ್ಗಳು, ಓಪನ್ ಶರ್ಟ್ ಪೊಲೀಸ್ ಯೂನಿಫಾರ್ಮ್ಗಳು, ಕ್ಲೋಸ್ಡ್ ಕಾಟನ್ ಬುಶ್ ಶರ್ಟ್, ಖಾಕಿ ಕಾಟನ್ ಪ್ಯಾಂಟ್ಗಳು, ಟೊಪ್ಪಿಗಳು, ಖಾಕಿ ಉಲ್ಲನ್ ಮಾದರಿ ಟೊಪ್ಪಿ, ಕಲ್ಲುಗಳು ಮೊದಲಾದ ವಸ್ತುಗಳು ಇದ್ದವು. ಇವುಗಳನ್ನು ಪರೀಕ್ಷಿಸಿ ಅವುಗಳ ಬಗ್ಗೆ ವರದಿ ಕೊಟ್ಟಿದ್ದೇನೆ’ ಎಂದು ವಿವರಿಸಿದರು.
ತಮಗೆ ಪುನ: 24 ಸೀಲ್ಡ್ ಪ್ಯಾಕೆಟ್ಗಳು ಸಿಓಡಿ ಡಿಎಸ್ಪಿಯವರಿಂದ ಬಂದವು. ಅದನ್ನು ಬಿಡಿಸಿ ನೋಡಿದಾಗ ಅದರಲ್ಲಿ ಹುರಿಹಗ್ಗದ ತುಂಡು ಮತ್ತು ನೈಲಾನ್ ಹಗ್ಗ (ಮೃತ ಇಸ್ಮಾಯಿಲ್ ಅವರ ಕುತ್ತಿಗೆಯಲ್ಲಿದ್ದುದು), ಹುರಿಹಗ್ಗ ಮತ್ತು ನೈಲಾನ್ ಹಗ್ಗ (ಪುರಂದರ ಭಟ್ಟರ ಮನೆಯಲ್ಲಿ ಸಿಕ್ಕಿದುದು, ಒಂದು ಬದಿಯಲ್ಲಿ ಎಂವೈಎಕ್ಸ್ 101 ಮತ್ತೊಂದು ಬದಿಯಲ್ಲಿ ಎಂಇಎಕ್ಸ್ 5471 ನಂಬ್ರವಿದ್ದ ನಂಬರ್ ಪ್ಲೇಟ್ (ನಿಡಿಂಗಲ್ ಸೇತುವೆ ಬಳಿ ದೊರಕಿದುದು), ಕಟ್ಟಿಂಗ್ ಪ್ಲೇಯರ್, ಇತರ ನಂಬರ್ ಪ್ಲೇಟ್ಗಳು. 3 ಖಾಕಿ ಶರ್ಟ್ಗಳು, 4 ಖಾಕಿ ಪ್ಯಾಂಟ್ ಗಳು, 4 ಖಾಕಿ ಬೆಲ್ಟ್ ಗಳು, 1 ಬೆಡ್ ಶೀಟ್, 3 ಸಿವಿಲ್ ಬುಶ್ ಶರ್ಟ್ಗಳು, 1 ಪ್ಯಾಂಟ್, 1 ತಲೆದಿಂಬಿನ ಕವರ್ (ಪುರಂದರ ಭಟ್ಟರ ಮನೆಯಿಂದ), 13 ವಿವಿಧ ಬಟ್ಟೆ ತುಂಡುಗಳು, 18 ಖಾಕಿ ಬಟನ್ಗಳು, 1 ಕೆಂಪು ನೂಲಿನ ಉಂಡೆ. 1 ಕಬ್ಬಿಣದ ಸರಿಗೆಯ ಕಟ್ಟ, ಬಿಳಿ ಪೈಂಟಿನ ಡಬ್ಬ, ಪುರಂದರ ಭಟ್ಟರ ಮನೆಯಿಂದ ತೆಗೆದ ಪೈಂಟ್, 1 ಉಷಾ ಹೊಲಿಗೆ ಯಂತ್ರ ಮೊದಲಾದವುಗಳು ಇದ್ದವು’ ಎಂದು ವಿವರಿಸಿದರು.
ಅವುಗಳನ್ನು ಪರೀಕ್ಷಿಸಿ ನೋಡಿದಾಗ ಇಸ್ಮಾಯಿಲ್ರವರ ಕೊರಳಲ್ಲಿ ಸಿಕ್ಕಿದ ನೈಲಾನ್ ಹಗ್ಗ ಮತ್ತು ಪುರಂದರ ಭಟ್ಟರ ಮನೆಯಲ್ಲಿ ಸಿಕ್ಕಿದ ನೈಲಾನ್ ಹಗ್ಗ ಒಂದೇ ತರದ್ದೆಂದು ಕಂಡುಬAತೆAದು ಸಾಕ್ಷಿ ಹೇಳಿದರು.
ನನಗೆ ಕಳುಹಿಸಿದ ನಂಬರ್ ಪ್ಲೇಟನ್ನು ಪರೀಕ್ಷಿಸಿದಾಗ ಒಂದು ನಂಬರ್ ಪ್ಲೇಟ್ನಲ್ಲಿಪಿ’ಎಂಬ ಅಕ್ಷರದ ಕೆಲವಂಶದ ಕುರುಹು ಹಾಗೂ ಇ ಅಕ್ಷರದ ಕೆಲವುÀ ಕುರುಹು ಕಂಡು ಬಂತು. ಅದರ ಫೊಟೊವನ್ನು ಕೂಡಾ ತೆಗೆದಿದ್ದು ಆ ಫೊಟೊದಲ್ಲಿಯೂ ಆ ಕುರುಹುಗಳು ಕಾಣಿಸಿದವು’ ಎಂದವರು ವಿವರಿಸಿದರು.
ಈ ನಂಬರ್ ಪ್ಲೇಟನ್ನು ಪರೀಕ್ಷಿಸಿದ ಕೋರ್ಟ್ ಆ ಕುರುಹುಗಳು ಕಾಣಿಸುವುದಿಲ್ಲವೆಂದು ಅಭಿಪ್ರಾಯಪಟ್ಟಿತು. ಅಡ್ಡ ವಿಚಾರಣೆಯಲ್ಲಿ À ನೈಲಾನ್ ಹಗ್ಗ, ಹುರಿ ಹಗ್ಗ ಹಾಗೂ ಸರಿಗೆಗಳು ಮಾರುಕಟ್ಟೆಯಲ್ಲೂ ಸಿಗುತ್ತವೆ ಎಂಬುದನ್ನು ಸಾಕ್ಷಿ ಒಪ್ಪಿಕೊಂಡರು.
ಪೋಲಿ’ ಗುರುತು ಇತ್ತು ಆ ಮೇಲೆ ಪೊಲೀಸರು ನನಗೆ 9 ಸೀಲ್ಡ್ ಪ್ಯಾಕೆಟ್ಗಳನ್ನು ಕಳುಹಿಸಿದರು. ಅವುಗಳನ್ನು ಬಿಡಿಸಿ ನೋಡಿದಾಗ ಅರ್ಧ ಹೊತ್ತಿದ್ದ ಕಾಲರ್, ಅರ್ಧ ಹೊತ್ತಿದ್ದ ಬಟ್ಟೆ ಚೂರು, ಅರ್ಧ ಹೊತ್ತಿದ್ದ ಬನಿಯನ್, ಎರಡು ನಂಬರ್ ಪ್ಲೇಟುಗಳು, ಉಪಯೋಗ ಮಾಡಿದ ಒಂದು ಜತೆ ಚಪ್ಪಲಿ, ಒಂದು ಜತೆ ಪ್ಲಾಸ್ಟಿಕ್ ಚಪ್ಪಲಿ, ಸ್ಯಾಂಪಲ್ ಬೂದಿ, ಸ್ಯಾಂಪಲ್ ಮಣ್ಣು, ಒಂದು ಜತೆ ಹಳೆ ಮೆಟ್ಟು, ಟೆರಿಕೊಟ್ ಶರ್ಟ್ ಮತ್ತು ಒಂದು ಪ್ಲಾಸ್ಟಿಕ್ ಚೀಲ ಮೊದಲಾದವುಗಳಿದ್ದವು. ಅವುಗಳನ್ನು ಪರೀಕ್ಷಿಸಿದಾಗ ಒಂದು ನಂಬರ್ ಪ್ಲೇಟಿನಲ್ಲಿ ಕನ್ನಡದಲ್ಲಿ ಪೋಲಿ’ ಎಂದು ಬರೆದುದು ಕಾಣಿಸಿತು. ಅದರ ಫೊಟೊಗಳನ್ನು ತೆಗೆದಿದ್ದು ಅದರಲ್ಲಿಯೂಪೋಲಿ’ ಎಂಬ ಅಕ್ಷರಗಳು ಕಾಣುತ್ತವೆ’ ಎಂದು ವಿವರಿಸಿದರು.
ಅದನ್ನು ಈಗ ಪರೀಕ್ಷೆ ಮಾಡುವಾಗ ಅದರಲ್ಲಿ ಪೋಲಿ’ ಎಂಬ ಅಕ್ಷರಗಳು ಕಾಣುವುದಿಲ್ಲವೆಂದು ಕೋರ್ಟು ಅಭಿಪ್ರಾಯಪಟ್ಟಿತು. ನಾನು ಇದರಲ್ಲಿ ಅಂಟಿಕೊAಡಿದ್ದ ಮಣ್ಣನ್ನು ತೊಳೆದು ಆಮೇಲೆ ಪರೀಕ್ಷಿಸಿದಾಗ ನನಗೆ ಮೇಲೆ ಹೇಳಿದ ಪೋಲಿ’ ಎಂಬ ಅಕ್ಷರ ಕಂಡವು. ಆಮೇಲೆ ಅದರ ಫೊಟೊ ತೆಗೆಯಲಾಯಿತು ಎಂದು ಸಾಕ್ಷಿ ಹೇಳಿದರು. ಈ ಬಗ್ಗೆ ತಾವು ತಮ್ಮ ಪರೀಕ್ಷೆಯ ವರದಿಯನ್ನು ಕೊಟ್ಟಿರುವುದಾಗಿಯೂ ಅವರು ತಿಳಿಸಿದರು. ಆಮೇಲೆ ಸಿಓಡಿ ಪೊಲೀಸರು ಎಂವೈಜಿ 3501 ಜೀಪನ್ನು ಪರೀಕ್ಷೆಗಾಗಿ ಕಳುಹಿಸಿಕೊಟ್ಟರು. ನಾನು ಆ ಜೀಪನ್ನು ಸೂಕ್ಷö್ಮವಾಗಿ ಪರೀಕ್ಷಿಸಿದಾಗ ಅದರ ಹಿಂದಿನ ನಂಬರ್ ಪ್ಲೇಟಿನಲ್ಲಿ ಓ’ ಮತ್ತುಐ’ರ ಮಧ್ಯೆ ಬಿಳಿ ಪೈಂಟಿನ ಗುರುತು ಕಂಡೆ. ಆ ಬಿಳಿ ಪೈಂಟಿನ ಗುರುತು ಮತ್ತು ನಂಬರ್ ಪ್ಲೇಟಿನಲ್ಲಿ ನಂಬ್ರ ಬರೆದ ಪೈಂಟ್ ಬೇರೆ ಬೇರೆಯಾಗಿತ್ತು’ ಎಂದ ಕೆಂಚಪ್ಪವನರು ತಿಳಿಸಿದರು.
ಆ ಜೀಪನ್ನು ಪರೀಕ್ಷಿಸಿದಾಗ ಅದರಲ್ಲಿ ಕೂದಲುಗಳು ಕಾಣಸಿಕ್ಕಿದವು ಎಂದೂ ಅವರು ಹೇಳಿದರು.
ಅಡ್ಡ ವಿಚಾರಣೆಯಲ್ಲಿ ತಾವು ಪ್ರಥಮತ: ಬಂದಾಗ ಸೆಪ್ಟಂಬರ್ನಲ್ಲಿ ಎಂವೈಜಿ 3501 ನಂಬ್ರದ ಜೀಪನ್ನು ಪರೀಕ್ಷೆ ಮಾಡಿರಲಿಲ್ಲವೆಂದೂ, ಎಂವೈಎಕ್ಸ್ 701 ನಂಬ್ರದ ಜೀಪನ್ನು (ಹೆಬ್ಬಾರರ ಇನ್ನೊಂದು ಜೀಪು)ಪರೀಕ್ಷಿಸಿದಾಗಿಯೂ ಸಾಕ್ಷಿ ಹೇಳಿದರು.
ರಾಜಕೀಯ ದ್ವೇಷವಿತ್ತು
46ನೇ ಸಾಕ್ಷಿ ವೈ.ಬಿ. ಆಲೂರ್ ಅವರು ತಮ್ಮ ಹೇಳಿಕೆಯಲ್ಲಿ ನಾನು 1972ನೇ ಅಕ್ಟೋಬರ್ನಿಂದ 1976ನೇ ಮೇವರೆಗೆ ಬಂಟ್ವಾಳ ಸರ್ಕಲ್ ಇನ್ಸ್ಪೆಕ್ಟರ್ರವರ ಕೆಲಸ ಮಾಡುತ್ತಿದ್ದೆ. ನನಗೆ ಮೃತ ಇಸ್ಮಾಯಿಲ್ರವರ ಪರಿಚಯ ಇತ್ತು. ಅವರು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಅವರು ನನಗೆ ಹಾಗೂ ಇತರ ಪೊಲೀಸರಿಗೆಇನ್ಫಾರ್ಮೆಂಟ್’ ಆಗಿದ್ದರು. ಮೃತ ಇಸ್ಮಾಯಿಲ್ ಅವರು ಭಾರತೀಯ ಜನ ಸಂಘ ಮತ್ತು ಆರ್ಎಸ್ಎಸ್ಗಳಿಗೆ ವಿರೋಧಿಯಾಗಿದ್ದರು’ ಎಂದು ಹೇಳಿದರು.
ಕಲ್ಲಡ್ಕದಲ್ಲಿ ಪ್ರಭಾಕರ ಭಟ್ ಮತ್ತು ಇತರ ಕೆಲವರು ಭಾರತೀಯ ಜನ ಸಂಘ ಮತ್ತು ಆರ್ಎಸ್ಎಸ್ಗಳಲ್ಲಿ ದುಡಿಯುತ್ತಿದ್ದರು. 2ನೇ ಆರೋಪಿ ಪುರಂದರ ಭಟ್ ಮತ್ತು 4ನೇ ಆರೋಪಿ ಮಹಾಬಲ ದೇವಾಡಿಗರೂ ಭಾರತೀಯ ಜನ ಸಂಘ ಪಾರ್ಟಿಗೆ ಸೇರಿದವರು. ಅವರೆಲ್ಲರೂ ಒಟ್ಟಾಗಿ ಇರುತ್ತಿದ್ದರು. ಮೃತ ಇಸ್ಮಾಯಿಲ್ ಅವರಿಗೆ ಮತ್ತು ಮೇಲೆ ಹೇಳಿದವರಿಗೆ ರಾಜಕೀಯ ಕಾರಣಗಳಿಂದ ದ್ವೇಷವಿತ್ತು’ ಎಂದು ಆಲೂರ್ ಹೇಳಿದರು.
ಸಚಿವ ರಂಗನಾಥ್ ಬಂದಾಗ?
ತಾ. 27-4-1974ರಂದು ಆಗಿನ ಸಾರಿಗೆ ಸಚಿವ ರಂಗನಾಥ್ ಪುತ್ತೂರಿನಿಂದ ಮಂಗಳೂರಿಗೆ ಹೋಗುತ್ತಿದ್ದಾಗ ಕಲ್ಲಡ್ಕದಲ್ಲಿ ಜನ ಸಂಘ ಮತ್ತು ಆರ್ಎಸ್ಎಸ್ನವರು ಸುಮಾರು 200 ಮಂದಿ ಸಚಿವರ ಕಾರನ್ನು ತಡೆದು ಆತಂಕ ಉಂಟು ಮಾಡಿದರು. ಪೊಲೀಸರು ಇದನ್ನು ತಡೆಯಲು ಹೋದಾಗ ಪೊಲೀಸರ ವ್ಯಾನಿಗೂ ಹಾಗೂ ಸಚಿವರು ಹೋಗುತ್ತಿದ್ದ ಕಾರಿಗೂ ಕಲ್ಲೆಸೆದು ಹಾನಿ ಮಾಡಿದರು.
ಈ ಬಗ್ಗೆ ಪ್ರಭಾಕರ ಭಟ್, ಪುರಂದರ ಭಟ್. ಮಹಾಬಲ ದೇವಾಡಿಗ ಮೊದಲಾದವರ ಮೇಲೆ ಬಂಟ್ವಾಳ ಕೋರ್ಟಿನಲ್ಲಿ ಚಾರ್ಜ್ಶೀಟ್ ದಾಖಲು ಮಾಡಿದೆ. ಈ ಕೇಸಿನಲ್ಲಿ ಮೃತ ಇಸ್ಮಾಯಿಲ್ ಅವರೂ ಒಂದು ಸಾಕ್ಷಿಯಾಗಿದ್ದರು’ ಎಂದು ವಿವರಿಸಿದರು. ಅಡ್ಡ ವಿಚಾರಣೆಯಲ್ಲಿ ಮೀಸಾದಲ್ಲಿ ಒಂದೆರಡು ಮಂದಿಯನ್ನು ಬಂಧಿಸಬೇಕೆAದು ಇಸ್ಮಾಯಿಲ್ರವರು ತಮ್ಮಲ್ಲಿ ಹೇಳಿದ್ದರೆಂಬುದನ್ನು ಆಲೂರ್ ಒಪ್ಪಿಕೊಂಡರು.
47ನೇ ಸಾಕ್ಷಿ ದೇವದಾಸ್ ಸುವರ್ಣ ಅವರು ತಮ್ಮ ಹೇಳಿಕೆಯಲ್ಲಿ ನನಗೆ ಬಿಸಿ.ರೋಡ್ನಲ್ಲಿ ಒಂದು ಟೈಲರಿಂಗ್ ಅಂಗಡಿಯಿದೆ. ನನ್ನನ್ನು ಪೊಲೀಸ್ ಠಾಣೆಗೆ ಬರುವಂತೆ ಹೇಳಿದ ಪ್ರಕಾರ ನಾನು ಅಲ್ಲಿಗೆ ಹೋದೆ. ಆಗ ಸಿಓಡಿ ಪೊಲೀಸರ ಜತೆಯಲ್ಲಿ ಬೇರೆ ಬೇರೆಯಾಗಿ 1ನೇ ಆರೋಪಿ ಶ್ರೀಧರ ಭಟ್, 2ನೇ ಆರೋಪಿ ಪುರಂದರ ಭಟ್, 3ನೇ ಆರೋಪಿ ಈಶ್ವರ ಭಟ್, 5ನೇ ಆರೋಪಿ ಭೋಜರಾಜ ಸೇಮಿತರು ಇದ್ದರು. ನಾನು ಅವರೆಲ್ಲರ ಪ್ಯಾಂಟ್ ಮತ್ತು ಶರ್ಟಿನ ಅಳತೆ ತೆಗೆದೆ. ಈ ಬಗ್ಗೆ ಬೇರೆ ಬೇರೆ ಮಹಜರಿನಲ್ಲಿ ಈ ವಿಷಯ ನಮೂದಿಸಿ ಒಂದು ಮಹಜರು ತಯಾರಿಸಿದ್ದಕ್ಕೆ ನಾನು ಸಹಿ ಹಾಕಿದೆ. 1ನೇ ಆರೋಪಿ ಶ್ರೀಧರ ಭಟ್ಟರ ಮಾದರಿ ಕೈಬರಹ ತೆಗೆದಾಗ ಅದಕ್ಕೂ ಸಹಿ ಹಾಕಿದೆ’ ಎಂದು ವಿವರಿಸಿದರು.
48ನೇ ಸಾಕ್ಷಿ ಪಿ.ಕೆ. ಮೂಸಾರವರು ನ್ಯಾಯಾಲಯದಲ್ಲಿ ತಮ್ಮ ಹೇಳಿಕೆ ನೀಡುತ್ತಾ ತಾ 16-2-77ರಂದು ಸುಳ್ಯದಲ್ಲಿರುವ ನನ್ನ ಅಂಗಡಿಯಲ್ಲಿ ನಾನಿದ್ದಾಗ ಸಿಓಡಿ ಪೊಲೀಸರ ಜೀಪೊಂದು ಬಂತು. ಅದರಲ್ಲಿ 1ನೇ ಆರೋಪಿ ಶ್ರೀಧರ ಭಟ್ಟರೂ ಇದ್ದರು. ಶ್ರೀಧರ ಭಟ್ಟರು ಹೇಳಿದ ಪ್ರಕಾರ ನಾವೆಲ್ಲರೂ ತೋಡಿಕಾನದಲ್ಲಿರುವ ಶ್ರೀನಿವಾಸ ಭಟ್ಟರ ಮನೆಗೆ ಹೋದೆವು. ಅಲ್ಲಿ ಶ್ರೀಧರ ಭಟ್ಟರು ಮೋಟಾರು ಸೈಕಲನ್ನು ತೋರಿಸಿದರು. ಅದನ್ನು ಪೊಲೀಸರು ಸ್ವಾಧೀನಪಡಿಸಿಕೊಂಡರು. ಆಮೇಲೆ ಅಲ್ಲಿಯೇ ನಾರಾಯಣ ಭಟ್ಟರ ಮನೆಗೆ ಹೋದಾಗ ಅಲ್ಲಿಂದ ಅನೇಕ ಕಾಗದ ಪತ್ರಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡರು. ಅಲ್ಲಿಂದ ಶ್ರೀಧರ ಭಟ್ಟರ ಮನೆಗೆ ಹೋಗಿ ಅಲ್ಲಿಯೂ ಅನೇಕ ಕಾಗದ ಪತ್ರಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡರು.
ಈ ಸಂಬAಧ ತಯಾರು ಮಾಡಿದ ಮಹಜರುಗಳಿಗೆ ನಾನು ಮತ್ತು ಇತರ ಸಾಕ್ಷಿಗಳು ಸಹಿ ಹಾಕಿದೆವು’ ಎಂದು ಹೇಳಿದರು. ಅಡ್ಡ ವಿಚಾರಣೆಯಲ್ಲಿನೀವು ಪೊಲೀಸರೊಂದಿಗೆ ಆ ಸ್ಥಳಗಳಿಗೆ ಹೋದುದು ಸುಳ್ಳು. ಮಹಜರುಗಳಿಗೆ ನೀವು ಪೊಲೀಸ್ ಸ್ಟೇಷನ್ ನಲ್ಲಿ ಸಹಿ ಹಾಕಿದುದು’ ಎಂದು ಆರೋಪಿ ಪರ ವಕೀಲರು ಹೇಳಿದಾಗ ಸಾಕ್ಷಿ ಅದನ್ನು ನಿರಾಕರಿಸಿದರು.
49ನೇ ಸಾಕ್ಷಿ ಅಬ್ದುಲ್ ಖಾದರ್ ಅವರು ತಮ್ಮ ಹೇಳಿಕೆಯಲ್ಲಿ ನಾನು ಕಾವಳಿಕಟ್ಟೆಯಲ್ಲಿ ಬೀಡಿ ಕಟ್ಟಿ ಜೀವನ ಮಾಡುತ್ತಿದ್ದೇನೆ. ತಾ. 23-2-77ರಂದು ನಾನು ಸಿಓಡಿ ಪೊಲೀಸರ ಜತೆ ಪುರಂದರ ಭಟ್ಟರ ಮನೆಗೆ ಹೋಗಿದ್ದೆ. ಅವರ ಮನೆಯ ಹತ್ತಿರ ಇರುವ ಬಾವಿಯೊಂದರ ನೀರು ಆರಿಸಿ ಆ ಬಾವಿಯಿಂದ ಒಂದು ನಂಬರ್ ಪ್ಲೇಟ್ ಸ್ವಾಧೀನಪಡಿಸುವಾಗ ನಾನು ಅಲ್ಲಿದ್ದೆ. ಆಗ ತಯಾರಿಸಿದ ಮಹಜರಿಗೆ ನಾನು ಸಹಿ ಹಾಕಿದೆ’ ಎಂದು ವಿವರಿಸಿದರು. ಅಡ್ಡ ವಿಚಾರಣೆಯಲ್ಲಿ ಅಲ್ಲಿ ಮಹಜರನ್ನು ಯಾರು ಬರೆದರು ಎಂದು ಹೇಳಲು ಸಾಧ್ಯವಿಲ್ಲವೆಂದು ಸಾಕ್ಷಿ ಹೇಳಿದರು. ಪೊಲೀಸ್ ಠಾಣೆಯಲ್ಲಿ ಮಹಜರಿಗೆ ದಸ್ಕತ್ತು ಹಾಕಿದುದು ಎಂದು ಆರೋಪಿ ಪರ ವಕೀಲರು ಹೇಳಿದಾಗ ಸಾಕ್ಷಿ ಅದನ್ನು ನಿರಾಕರಿಸಿದರು. 50ನೇ ಸಾಕ್ಷಿ ಸುಲೇಮಾನ್ ಅವರು ಸಾಕ್ಷಿ ಹೇಳುತ್ತಾ ತಾ. 19-3-77ರಂದು ಸಿಓಡಿ ಪೊಲೀಸರು ಕರೆದ ಮೇರೆಗೆ ನಾನು ಬಂಟ್ವಾಳ ಠಾಣೆಗೆ ಹೋದೆ. ಅಲ್ಲಿ 1 ನೇ ಆರೋಪಿಯ ಮಾದರಿ ಕೈಬರಹ ಪಡೆಯುತ್ತಿದ್ದಾಗ ನಾನು ಹಾಜರಿದ್ದೆ. ಅದಕ್ಕೆ ಹಾಗೂ ಅದರ ಬಗ್ಗೆ ಮಾಡಿದ ಮಹಜರಿಗೆ ನಾನು ಸಹಿ ಹಾಕಿದೆ’ ಎಂದರು.
51ನೇ ಸಾಕ್ಷಿ ಮಾಯಿ ಗೌಡರು ತಮ್ಮ ಹೇಳಿಕೆಯಲ್ಲಿ ` ನಾನು ಸಿಓಡಿ ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದೇನೆ. ತಾ 4-4-77ರಂದು ಸಿಓಡಿ ಡಿಎಸ್ಪಿಯವರು ತನ್ನ ವಶ ಕೊಟ್ಟ 12 ಸೀಲ್ಡ್ ಪ್ಯಾಕೆಟ್ಗಳನ್ನು ತಾ 5-4-77ರಂದು ಬೆಂಗಳೂರಿನಲ್ಲಿ ಎಫ್ಎಸ್ಎಲ್ನವರಿಗೆ ಕೊಟ್ಟ. ಮತ್ತು 5-7-77ರಂದು ಎಫ್ಎಸ್ಎಲ್ಗೆ ಹೋಗಿ ಅಲ್ಲಿಂದ 38 ವಸ್ತುಗಳನ್ನು ತಂದು ಆಫೀಸಿನಲ್ಲಿ ಕೊಟ್ಟೆ’ ಎಂದರು.
ಮುಂದುವರಿಯುವುದು…….

































