ಭಾಗವತ ಅಣ್ಣಿ ದೇವಾಡಿಗ ನಿಧನ
ಕೆರ್ವಾಶೆ: ಶಿವಮೊಗ್ಗದ ಭೀಮೇಶ್ವರ ಯಕ್ಷಗಾನ ಕಲಾ ಸಂಘದಲ್ಲಿ ಬಾಯಾರು ಪ್ರಕಾಶ್ಚಂದ್ರ ರಾಯರಿಂದ ತೆಂಕುತಿಟ್ಟು ಹಾಗೂ ಹೊಸ್ತೋಟ ಮಂಜುನಾಥ ಭಾಗವತರಿಂದ ಬಡಗುತಿಟ್ಟು ಯಕ್ಷಗಾನ ಭಾಗವತಿಕೆ ಅಭ್ಯಾಸ ಮಾಡಿಕೊಂಡು ಕರಾವಳಿಯ ನೂರಾರು ಸಂಘ ಸಂಸ್ಥೆಗಳಲ್ಲಿ ಇತರ ಮೇಳಗಳಲ್ಲಿ ಭಾಗವತರಾಗಿ ಕಲಾ ಸೇವೆ ಮಾಡಿಕೊಂಡಿದ್ದ ಕೆರ್ವಾಶೆ ಅಣ್ಣಿ ದೇವಾಡಿಗ (65) ನಿನ್ನೆ (11.9.24 ರಂದು) ಸಂಜೆ ಅನಾರೋಗ್ಯ ನಿಮಿತ್ತ ನಿಧನರಾದರು.
1983/84 ರ ಸಾಲಿನಲ್ಲಿ ಮೈಸೂರು ದಸರಾ ಸಂಧರ್ಭ , ದೆಹಲಿಯಲ್ಲಿ ನಡೆದ ದಕ್ಷಿಣ ರಾಜ್ಯಗಳ ನಾಟಕೋತ್ಸವಗಳಲ್ಲಿ ಮತ್ತು 1989 ರಿಂದ ಸುರತ್ಕಲ್ ಕಾಂತಾವರ ಮೇಳಗಳಲ್ಲಿ ಭಾಗವತರಾಗಿದ್ದವರು. ಪತ್ನಿ ಓರ್ವ ಪುತ್ರ ಓರ್ವ ಪುತ್ರಿ ಕುಟುಂಬ ವರ್ಗವನ್ನು ಅಗಲಿದ್ದಾರೆ. ಊರಿನ ಗಣ್ಯರು ಯಕ್ಷಗಾನ ಸಂಘದವರು ಸಂತಾಪ ಸೂಚಿಸಿದರು





















