ಭತ್ತ ಕಟಾವು ಯಂತ್ರದ ಹೆಸರಿನಲ್ಲಿ ರೈತರ ಲೂಟಿ ನಿಲ್ಲಿಸಲು ರೈತ ಸಂಘದ ಪ್ರತಿಭಟನೆ

Picture of RB NEWS

RB NEWS

Bureau Report

ಉಡುಪಿ:ನ.: ಜಿಲ್ಲೆಯಾದ್ಯಂತ ಭತ್ತ ಕಟಾವು ಯಂತ್ರಗಳು ಗಂಟೆಯೊಂದರ ರೂ. 2400 ಕ್ಕೂ ಮಿಕ್ಕಿ ದರ ವಸೂಲಿ ಮಾಡುತ್ತಿದು ಇದು ರೈತರನ್ನು ಲೂಟಿ ಮಾಡುವುದಾಗಿದೆ. ಜಿಲ್ಲಾಧಿಕಾರಗಳು ಕೂಡಲೇ ಮಧ್ಯಪ್ರವೇಶ ಮಾಡಿ ಘಂಟೆಗೆ ವೈಜ್ಞಾನಿಕವಾಗಿ ಗರಿಷ್ಠ ದರ ನಿಗದಿ ಪಡಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ (KPRS)ಉಡುಪಿ ಜಿಲ್ಲಾ ಸಂಚಲನ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕರ್ನಾಟಕ ಪ್ರಾಂತ ರೈತ ಸಂಘವು ಕಳೆದ ಒಂದು ತಿಂಗಳ ಹಿಂದೆ ಸಮಸ್ಯೆ ಬಗೆಹರಿಸಲು ಮನವಿ ನೀಡಿದರೂ ನಿರ್ಲಕ್ಷ್ಯ ವಹಿಸಲಾಗಿದ್ದು ರೈತರಿಂದ ಹೆಚ್ಚುವರಿ ದರ ವಸೂಲಿ ಮಾಡುವ ಯಂತ್ರದ ಮಾಲಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಕ್ರಮವಹಿಸಿಲ್ಲ ಎಂದು ದೂರಿದರು.ಕೃಷಿ ಕೇಂದ್ರಗಳ ಮೂಲಕ ಭತ್ತ ಕಟಾವು ಯಂತ್ರ ಒದಗಿಸಲು ಹಾಗೂ ಭತ್ತ ಖರೀದಿ ಕೇಂದ್ರವನ್ನು ತಕ್ಷಣವೇ ಎಲ್ಲ ತಾಲೂಕು ಕೇಂದ್ರಗಳಲ್ಲಿ ತೆರೆಯಬೇಕು, ಸೂಕ್ತ ಬೆಂಬಲ ಬೆಲೆ ಘೋಷಿಸಬೇಕು ಎಂದು ಪ್ರತಿಭಟನೆಯಲ್ಲಿ ರೈತರು ಆಗ್ರಹಿಸಿದರು.

ಹೋರಾಟದ ನೇತೃತ್ವವನ್ನು ರೈತ ಮುಖಂಡರಾದ ಚಂದ್ರಶೇಖರ್ ವಿ, ಅನಿಲ್ ಬಾರ್ಕೂರು, ಗಣೇಶ್ ಬಾರ್ಕೂರು, ಕಾರ್ಮಿಕ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಸುರೇಶ್ ಕಲ್ಲಾಗರ, ಕೆ ಶಂಕರ್, ಚಿಕ್ಕ ಮೊಗವೀರ, ಶಶಿಧರ್ ಗೊಲ್ಲ , ಬಲ್ಕಿಸ್, ಸುಭಾಷ್ ನಾಯಕ್ ವಹಿಸಿದ್ದರು.

ಪ್ರತಿಭಟನೆಯ ನಂತರ ಅಪರ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top