ಭತ್ತದ ಬೇಸಾಯ ಮಾಡದಿದ್ದರೆ ಮುಂದೆ ತುತ್ತು ಅನ್ನಕ್ಕೂ ಸಂಕಷ್ಟ : ಲೀಲಾವತಿ

Picture of RB NEWS

RB NEWS

Bureau Report

ವರದಿ : ಸುಕುಮಾರ್‌ ಮುನಿಯಾಲ್‌


ಅವರು ಹೆಬ್ರಿಯ ಕುಚ್ಚೂರು ಕುಡಿಬೈಲು ಶಾಂತಿನಿಕೇತನ ಯುವ ವೃಂದದ ವತಿಯಿಂದ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಬೆಳ್ವೆ ಕೃಷ್ಣ ನಾಯ್ಕ್‌ ಅವರನ್ನು ಗೌರವಿಸಲಾಯಿತು.
ಸಹಕಾರದಲ್ಲಿ ಶುಕ್ರವಾರ ನಡೆದ ಹಡಿಲು ಗದ್ದೆ ಬೇಸಾಯ ಕಾರ್ಯಕ್ರಮಕ್ಕೆ ಗದ್ದೆಗೆ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದರು.


ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಡಿಲು ಗದ್ದೆ ಬೇಸಾಯ ಮಾಡುವವರಿಗೆ ವಿಶೇಷ ಸಹಕಾರ ನೀಡಲಿದೆ. ಶಾಲೆಯ ಮಕ್ಕಳಿಗೆ ಭತ್ತದ ಬೇಸಾಯ, ನಾಟಿಯ ಮಾಹಿತಿ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕುಚ್ಚೂರು ಕುಡಿಬೈಲು ಶಾಂತಿನಿಕೇತನ ಸೌಹಾರ್ಧ ಸಹಕಾರಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನರೇಂದ್ರ ಎಸ್‌ ಮರಸಣಿಗೆ ಮಾತನಾಡಿ ಭತ್ತದ ಕೃಷಿಯನ್ನು ಉಳಿಸಿ ಮುನ್ನಡೆಸುವುದು ಮತ್ತು ವಿದ್ಯಾರ್ಥಿಗಳ ಮೂಲಕ ಮುಂದಿನ ಯುವ ಸಮುದಾಯವನ್ನು ಕೃಷಿಯತ್ತ ಆಕರ್ಷಿಸುವುದು ನಮ್ಮ ಮುಖ್ಯ ಉದ್ದೇಶ ಎಂದರು.
ಹೆಬ್ರಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಗದ್ದೆ ನಾಟಿ ಕಾರ್ಯದಲ್ಲಿ ಭಾಗವಹಿಸಿದರು. ಕುಚ್ಚೂರು ಕುಡಿಬೈಲು ಶಾಂತಿನಿಕೇತನ ಯುವ ವೃಂದದ ಸದಸ್ಯರ ಸಹಕಾರದಲ್ಲಿ ಕುಡಿಬೈಲಿ ಹಡಿಲು ಗದ್ದೆಯಲ್ಲಿ ಪೂರ್ಣ ನಾಟಿ ಕಾರ್ಯ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಬೆಳ್ವೆ ಕೃಷ್ಣ ನಾಯ್ಕ್‌ ಅವರನ್ನು ಗೌರವಿಸಲಾಯಿತು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಯೋಜನಾಧಿಕಾರಿ ಸುಧೀರ್‌ ಕುಮಾರ್‌ ಜೈನ್‌, ಹೆಬ್ರಿ ತಾಲ್ಲೂಕು ಕೃಷಿ ಅಧಿಕಾರಿ ಉಮೇಶ್‌, ಯೋಜನೆಯ ಶೇಷಾದ್ರಿ, ಹೆಬ್ರಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಕುಮಾರ್‌ ಮುನಿಯಾಲ್‌, ಹೆಬ್ರಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿಯರಾದ ಶಿಲ್ಪಾ, ಸುಷ್ಮಾ , ಕುಚ್ಚೂರು ಕುಡಿಬೈಲು ಶಾಂತಿನಿಕೇತನ ಯುವ ವೃಂದದ ಅಧ್ಯಕ್ಷ ದೀಕ್ಷಿತ್‌ ನಾಯಕ್‌, ಸದಸ್ಯರಾದ ಕೆ.ಗಣೇಶ್‌, ರಾಜೇಶ್ರೀ, ಮಹೇಶ್‌, ವಿನೋದ, ಶೇಖರ್‌, ಜಯಶ್ರೀ ಮುಂತಾದವರು ಉಪಸ್ಥಿತರಿದ್ದರು. ನರೇಂದ್ರ ಎಸ್‌ ಸ್ವಾಗತಿಸಿ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top