ಭಜನೆಯಲ್ಲಿ ಹಿಂದೂ ಧರ್ಮದ ಅಂತರ್ಸತ್ವ ಅಡಗಿದೆ

ಭಜನಾ ಭಜಕರಿಂದ ಮೂಡುಬಿದಿರೆಯಲ್ಲಿ ಬೃಹತ್ ಪ್ರತಿಭಟನೆ ಮೆರವಣಿಗೆ

ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ : ಮೂಡುಬಿದಿರೆ ತಾಲೂಕು ಭಜನಾ ಪರಿಷತ್ ಆಶ್ರಯದಲ್ಲಿ ಸಾವಿರ ಕಂಬದ ಬಸದಿಯಿಂದ ಹೊರಟು ಭಜನೆಯೊಂದಿಗೆ ಸ್ವರಾಜ್ಯ ಮೈದಾನದವರೆಗೆ ಭಜನಾ ಭಜಕರಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.

ಮೆರವಣಿಗೆಯನ್ನು ಉದ್ಘಾಟಿಸಿ ಮಾತನಾಡಿದ ಮೂಡುಬಿದಿರೆ ಜೈನ ಮಠದ ಭಾರತ ಭೂಷಣ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸ್ತ್ರೀ ಹಾಗೂ ಮಹಿಳೆಗೆ ಅತ್ಯುನ್ನತ ಸ್ಥಾನ ನೀಡಿದ ಸನಾತನ ಧರ್ಮದ ಕಾರ್ಯ ಮತ್ತು ಭಜನೆಗಳನ್ನು ನಾವು ಸದಾ ಬೆಂಬಲಿಸುತ್ತೇವೆ. ಭಾರತೀಯ ಧರ್ಮ ಅನಾದಿಕಾಲದಿಂದ ಸಭ್ಯತೆಯ ಭಜನೆಗೆ ಹೆಸರುವಾಸಿಯಾದದು ಎಂದರು.
































