ಭಜನಾ ಸಂಕೀರ್ತನ ಪಾದಯಾತ್ರೆ
ಕಾರ್ಕಳ: ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನ ದೇಗುಲದ ಜೀರ್ಣೋದ್ದಾರದ ಪ್ರಯುಕ್ತ ಭಜನಾ ಸಂಕೀರ್ತನ ಪಾದಯಾತ್ರೆನ್ನು ಮಿಯ್ಯಾರು ಜೋಡುಕಟ್ಟೆ ಶ್ರೀ ಆದಿಶಕ್ತಿ ದೇವಸ್ಥಾನದಿಂದ ಜುಲಾಯಿ 06ರ (ಈ ದಿನ) ಸಂಜೆ 4 ಘಂಟೆಗೆ ಹಮ್ಮಿಕೊಳ್ಳಲಾಗಿದೆ.
ಎಂದಿನಂತೆ ಅಮವಾಸ್ಯೆಯ ಮರುದಿನವಾದ ಈ ದಿನ ಮಿಯ್ಯಾರು ದೇಗುಲದಲ್ಲಿ ಗಣಹೋಮ,ಏಕದಶಾ ರುದ್ರಾಭಿಷೇಕ, ಸಂಜೆ ದುರ್ಗಾ ನಮಸ್ಕಾರ ಪೂಜೆ ನಡೆಯಲಿದೆ.
ಪೂಜೆಯ ನಂತರ ಪ್ರಸಾದ ವಿತರಣೆ,ಅನ್ನ ಸಂತರ್ಪಣೆಯೊಂದಿಗೆ ಪೂಜೆಯು ಸಮಾಪ್ತಿಗೊಳ್ಳಲಿದೆ.
ಎಲ್ಲಾ ಮಾಗಣೆಯ ಗ್ರಾಮದ ಭಕ್ತಾಭಿಮಾನಿಗಳು ಭಜನಾ ಸಂಕೀರ್ತನ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕಾಗಿ ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.





































