ಭಗವಾನ್ ೧೦೦೮ ಶ್ರೀ ಶ್ರೀ ಬಾಹುಬಲಿ ಸ್ವಾಮಿ ಹಾಗೂ ಭಗವಾನ್ ಶ್ರೀ ಮುನಿಸುವೃತ ಸ್ವಾಮಿಗಳ ವಾರ್ಷಿಕೋತ್ಸವ
RB NEWS
Bureau Report
ಭಗವಾನ್ ೧೦೦೮ ಶ್ರೀ ಶ್ರೀ ಬಾಹುಬಲಿ ಸ್ವಾಮಿ ಹಾಗೂ ಭಗವಾನ್ ಶ್ರೀ ಮುನಿಸುವೃತ ಸ್ವಾಮಿಗಳ ವಾರ್ಷಿಕೋತ್ಸವ
ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಬಜಗೋಳಿ ಗ್ರಾಮದ ಧರ್ಮಶಾಲಾ ತೀರ್ಥಕ್ಷೇತ್ರದಲ್ಲಿ ಭಗವಾನ್ ೧೦೦೮ ಶ್ರೀ ಶ್ರೀ ಬಾಹುಬಲಿ ಸ್ವಾಮಿ ಹಾಗೂ ಭಗವಾನ್ ಶ್ರೀ ಮುನಿಸುವೃತ ಸ್ವಾಮಿಗಳ ವಾರ್ಷಿಕೋತ್ಸವ ಭಕ್ತಿಭಾವದಿಂದ ಆಚರಿಸಲಾಯಿತು. ಈ ಪವಿತ್ರ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಸಾನಿಧ್ಯದಲ್ಲಿ ಜಗದ್ಗುರು ಭಾರತಭೂಷಣ ಶ್ರೀಮದಭಿನವ ಡಾ. ಚಾರುಕೀರ್ತಿ ಪಂಡಿತಾಚಾರ್ಯ ಭಟ್ಟಾರಕ ಮಹಾಸ್ವಾಮಿಗಳು, ಜೈನ ಮಠ ಮೂಡುಬಿದಿರೆ ಇವರ ದಿವ್ಯ ಮಾರ್ಗದರ್ಶನದಲ್ಲಿ ಭಗವಾನ್ ಬಾಹುಬಲಿ ಸ್ವಾಮಿಯ ಏಕಶಿಲಾ ಮೂರ್ತಿಗೆ ಜಲಾಭಿಷೇಕ ಸಹಿತ ವಿವಿಧ ದ್ರವ್ಯಗಳಿಂದ ಮಸ್ತಕಾಭಿಷೇಕದ ಪುಣ್ಯ ಕಾರ್ಯಗಳು ಭಕ್ತಿಪೂರ್ವಕವಾಗಿ ನೆರವೇರಿದವು. ಸಾವಿರಾರು ಸಂಖ್ಯೆಯ ಜಿನಭಕ್ತರು ಹಾಗೂ ಊರಪರವೂರಿನ ಮಹನೀಯರು ಈ ಭಾವುಕ ಧಾರ್ಮಿಕ ಕ್ಷಣಗಳಿಗೆ ಸಾಕ್ಷಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಧನ್ಯತೆಯನ್ನು ಪಡೆದರು. ಈ ಧರ್ಮಶಾಲಾ ತೀರ್ಥಕ್ಷೇತ್ರದಲ್ಲಿನ ಭಗವಾನ್ ಬಾಹುಬಲಿ ಸ್ವಾಮಿಯ ವಿಗ್ರಹವನ್ನು ಇತ್ತೀಚಿನ ವರ್ಷದಲ್ಲಷ್ಟೇ ಪ್ರತಿಷ್ಠಾಪಿಸಲಾಗಿದ್ದು, ಮೂಡುಬಿದಿರೆ ಜೈನ ಮಠದ ಮಹಾಸ್ವಾಮಿಗಳಾದ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಮಹಾಸ್ವಾಮಿಗಳ ಸಂಕಲ್ಪದಂತೆ ಈ ಪ್ರತಿಷ್ಠಾಪನೆ ನೆರವೇರಿದೆ. ಧರ್ಮಶಾಲಾ ತೀರ್ಥಕ್ಷೇತ್ರದ ಎಲ್ಲ ಧಾರ್ಮಿಕ ಹಾಗೂ ಆಡಳಿತಾತ್ಮಕ ನಡವಳಿಕೆಗಳು ಡಾ. ಮಹಾಸ್ವಾಮಿಗಳ ಮಾರ್ಗದರ್ಶನ ಮತ್ತು ನಿರ್ದೇಶನದಂತೆ ನಡೆಯುತ್ತಿವೆ. ಈ ವಾರ್ಷಿಕೋತ್ಸವವು ಜೈನ ಧರ್ಮದ ತತ್ವಗಳು ಹಾಗೂ ಅಹಿಂಸಾ ಸಂದೇಶವನ್ನು ಮತ್ತಷ್ಟು ಗಟ್ಟಿಯಾಗಿ ಸಾರುವಂತಾಯಿತು.