ಭಕ್ತರ ಆಕರ್ಷಣೆಯ ಕೇಂದ್ರವಾದ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ

Picture of RB NEWS

RB NEWS

Bureau Report

ಕಾರ್ಕಳ : ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾದಲ್ಲಿ ಇಂದಿನ ಪುಣ್ಯಕ್ಷೇತ್ರದ ಚಟುವಟಿಕೆಗಳು ಭಕ್ತರ ಆಕರ್ಷಣೆಯ ಕೇಂದ್ರವಾಗಿದ್ದವು. ಸಾವಿರಾರು ಭಕ್ತರು ಹರಕೆಗಳನ್ನು ಈಡೇರಿಸಲು ಮತ್ತು ಬಿನ್ನಹಗಳನ್ನು ಸಲ್ಲಿಸಲು ಅತ್ತೂರಿನ ಪುಣ್ಯಸ್ಥಳಕ್ಕೆ ಆಗಮಿಸಿದರು. ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು, ಮತ್ತು ನಾಟಕದ ಪ್ರದರ್ಶನ ದಿನದ ಮುಖ್ಯ ವಿಧಿ ಆಚರಣೆಗಳಾಗಿದ್ದವು.

ನಸುಕಿನಿಂದಲೇ ವಿವಿಧ ಸ್ಥಳಗಳಿಂದ ಭಕ್ತರು ಧಾವಿಸಿ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಸಾಯಂಕಾಲ ಸಂತ ಲಾರೆನ್ಸ್ ಅವರ ಜೀವನ ಆಧಾರಿತ “ಲಾರೆನ್ಸ್ ಮಹಾತ್ಮೆ” ನಾಟಕ ಪ್ರದರ್ಶಿಸಲಾಯಿತು.

ಪುಷ್ಕರಣಿಗೆ ಭೇಟಿ, ಮೊಂಬತ್ತಿ ಬೆಳಗುವಿಕೆ, ಪೂಜಾ ಬಿನ್ನಹ ಸಲ್ಲಿಕೆ, ಬಲಿಪೂಜೆ, ಪಾಪ ನಿವೇದನೆ ಸಂಸ್ಕಾರ, ಮತ್ತು ಪುಷ್ಪತೀರ್ಥದಲ್ಲಿ ಭಾಗವಹಿಸಲು ಭಕ್ತಸಾಗರ ಮುಗಿಬಿದ್ದಿತ್ತು. ನಸುಕಿನಿಂದ ರಾತ್ರಿ ವರೆಗೆ ಪುಣ್ಯಕ್ಷೇತ್ರ ಭಕ್ತರ ಪುಣ್ಯದಾಯಕ ಸ್ಥಳವಾಗಿ ಪರಿವರ್ತಿತಗೊಂಡಿತ್ತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top