ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಹಾತ್ಮಾ ಗಾಂಧೀಜಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ
ಕಾರ್ಕಳ : ದೇಶದಲ್ಲಿ ಸಮಾನತೆಯನ್ನು ಬಯಸಿದ್ದೇ ಗಾಂಧೀಜಿಯವರ ಹತ್ಯೆಗೆ ಕಾರಣವಾಯಿತು. ಶೂದ್ರ ಮತ್ತು ಅತ್ಯಂತ ತಳ ಸಮುದಾಯದ ಜನರಿಗೆ ದೇವಸ್ಥಾನ ಪ್ರವೇಶ ನೀಡಬೇಕು. ಯಾವ ದೇವಸ್ಥಾನದಲ್ಲಿ ತಳ ಸಮುದಾಯದ ಜನರಿಗೆ ಪ್ರವೇಶವಿಲ್ಲವೋ ಅಂತಹ ದೇವಸ್ಥಾನಕ್ಕೆ ನಾನು ಹೋಗುವುದಿಲ್ಲ ಎನ್ನುವ ಜಾತಿ ವ್ಯವಸ್ಥೆಯ ವಿರುದ್ದದ ಸಮಾನತೆಯ ಪರವಾದ ಹೋರಾಟವೇ ಗಾಂಧಿ ವಿರೋದಿಗಳ ಹುಟ್ಟಿಗೆ ಕಾರಣವಾಯಿತು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಅಭಿಪ್ರಾಯಪಟ್ಟರು.








