
ಬ್ರೇಕ್ ವೈಫಲ್ಯ ; ವಾಹನಪಲ್ಟಿ : ನಾಲ್ವರು ಗಾಯ, ಓರ್ವ ಮೃತ್ಯು
ಕಾರ್ಕಳ : ಕಳಸ ಜಾತ್ರೆ ಮುಗಿಸಿ ಮಂದಾರ್ತಿ ಜಾತ್ರೆಗೆ ಹೋಗುತ್ತಿದ್ದ ವ್ಯಾಪಾರಿಗಳು ಪ್ರಯಾಣಿಸುತ್ತಿದ್ದ ವಾಹನವೊಂದು ಮಾಳ ಎಸ್ ಕೆ ಬಾರ್ಡರ್ ಕೆಳಗಿನ ಪೆಟ್ರೋಲ್ ಬಂಕ್ ಬಳಿ ಬ್ರೇಕ್ ವೈಫಲ್ಯಕ್ಕೊಳಗಾಗಿ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದು, ನಾಲ್ವರು ಗಂಭೀರಗೊಂಡಿದ್ದು, ಓರ್ವ ಮೃತಪಟ್ಟಿದ್ದಾನೆ.
ಜೆತೇಂದ್ರ(38) ಮಹಾರಾಷ್ಟ್ರದ ಹುಮಗ್ರ (ಮೃತ ಪಟ್ಟವರು) ರಾಜ(37) ಹುಬ್ಬಳ್ಳಿ, ಆದಿತ್ಯ (16) ಹುಬ್ಬಳ್ಳಿ,
ಶಾಬಾಸ್ (25) ಭದ್ರಾವತಿ,ಬಾಬು(55) ಭದ್ರಾವತಿ ಗಾಯಗೊಂಡವರು.
ಗಾಯಾಳುಗಳು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅತ್ತೂರಿನಿಂದ ಕಳಸಕ್ಕೆ….

ಜಾತ್ರೆಗಳಲ್ಲಿ ವ್ಯಾಪಾರ ನಡೆಸಿ ಬದುಕು ನಿರ್ವಹಿಸುವ ಮಂದಿ ಇವರಾಗಿದ್ದಾರೆ.
ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕೋತ್ಸವದಲ್ಲಿ ವ್ಯಾಪಾರ ಮುಗಿಸಿ ಕಳಸ ಜಾತ್ರೆಗೆ ಈ ತಂಡ ತೆರಳಿತು.
ಕಳಸದಿಂದ ಮಂದಾರ್ತಿ ಜಾತ್ರೆಯಲ್ಲಿ ವ್ಯಾಪಾರ ಮಾಡುವ ಸಲುವಾಗಿ ಕಾರ್ಕಳದತ್ತ ಪ್ರಯಾಣ ಬೆಳೆಸಿದ್ದರು.





































