[t4b-ticker]

ಕೊಡವೂರು ಬ್ರಾಹ್ಮಣ ಮಹಾ ಸಭಾ : ವಿಪ್ರ ಮಹಿಳಾ ದಿನಾಚರಣೆ

Picture of RB NEWS

RB NEWS

Bureau Report

ಉಡುಪಿ: ಅಂತರಾಷ್ಟ್ರೀಯ ‌ಮಹಿಳಾ ದಿನದ ಅಂಗವಾಗಿ ಕೊಡವೂರು ಬ್ರಾಹ್ಮಣ ಮಹಾ ಸಭಾದಿಂದ ಅಪರೂಪದ ಚುಕ್ಕಿ ಮಂಡಲ ಆರ್ಟ್ ಕಲಾವಿಭಾಗದಲ್ಲಿ ರಾಷ್ಟ್ರೀಯ ‌ಮಟ್ಟದಲ್ಲಿ ಸಾಧನೆಗೈದ ಕಲಾವಿದೆ, ರಂಗವಲ್ಲಿ,ಸಂಗೀತ, ವಾರ್ಲಿ ಕಲೆ, ಫ್ಯಾಬ್ರಿಕ್ ಪೇಂಟಿಂಗ್, ಕಸೂತಿ ಹೀಗೆ ಲಲಿತ ಕಲೆಗಳ ವಿವಿಧ ಪ್ರಕಾರಗಳಲ್ಲಿ ಸಾಧನೆಗೈದ ಅಶ್ವಿನಿ ಶ್ರೀನಿವಾಸ್ ಇವರನ್ನು ಅವರ ಸ್ವಗೃಹ ಶ್ರೀವಾಸದಲ್ಲಿ ಅಭಿನಂದಿಸಲಾಯಿತು‌.

ಬ್ರಾಹ್ಮಣ ಮಹಾ ಸಭಾ ಕೊಡವೂರು ಇದರ ಅಧ್ಯಕ್ಷ ಶ್ರೀನಿವಾಸ ಉಪಾಧ್ಯಾಯ, ಕೋಶಾಧಿಕಾರಿ ಶ್ರೀಧರ ಶರ್ಮ, ಸದಸ್ಯರಾದ ರೋಹಿಣಿ ಬಾಯರಿ, ಸೌಮ್ಯಾ ಗಣೇಶ್, ಕೌಸ್ತುಭ ಚಂದನ್, ಶೃತಿ ಸುಕುಮಾರ್, ಮುರಳೀಧರ ಭಟ್, ಸುಲೋಚನಾ ಉಪಾಧ್ಯಾಯ ಉಪಸ್ಥಿತಿತರಿದ್ದರು.

ಜತೆ ಕಾರ್ಯದರ್ಶಿ ರಾಜಶ್ರೀ ಪ್ರಸನ್ನ ಸನ್ಮಾನ ಪತ್ರ ವಾಚಿಸಿದರು. ಪದಾಧಿಕಾರಿ ದೀಪಾ ರಾಮಕೃಷ್ಣ ಧನ್ಯವಾದವಿತ್ತರು. ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ ಸ್ವಾಗತಿಸಿ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top