ಬ್ಯಾಂಕ್ ಖಾತೆಯ ಬಗ್ಗೆ ಜಾಗರೂಕತೆ ವಹಿಸಿ
ಅವಿಭಜಿತ ದ.ಕ .ಜಿಲ್ಲೆಗೆ ಕಾಲಿಟ್ಟ ಎಟಿಎಂ ಕಾರ್ಡ್ ವಂಚಕ
ಉಡುಪಿ: ಆತನೊಬ್ಬ ಮಹಾ ಮಂಚಕ. ಹೆಸರು ಅರುಣ್ ಕುಮಾರ್, ತುಮಕೂರಿನ ಶಿರಾದ ಬುಕ್ಕಾ ಪಟ್ಟಣದ ಮಾದೇನಹಳ್ಳಿಯ ನಿವಾಸಿ. ಅಧುನಿಕ ತಂತ್ರಜ್ಞಾನ ದಲ್ಲಿ ಪರಿಣಿತನಾಗಿದ್ದಾನೆ.

ಎಟಿಎಂ ಕಾರ್ಡ್ ಎಕ್ಸ್ಚೇಂಜ್ ಮಾಡಿ ಹಣ ಎಗರಿಸುವುದೇ ಈತನ ಕಾಯಕ.
ಈತನ ಮೇಲೆ ಹಿರಿಯೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಟಿಎಂ ಕೇಂದ್ರದೊಳಗೆ ಹೋಗುವವರಿಗೆ ನೆರವು ನೀಡುವ ಸೋಗಿನಲ್ಲಿ ಎಟಿಎಂ ಎಕ್ಸ್ಚೇಂಜ್ ಮಾಡಿ, ಗ್ರಾಹಕರಲ್ಲಿ ಪಿನ್ ಪಡೆದುಕೊಂಡು ಪಂಗನಾಮ ಹಾಕುವುದರಲ್ಲಿ ಪಳಗಿದವನು ಈತನೆಂದು ಅಪರಾಧ ಮೂಲಗಳಿಂದ ತಿಳಿದುಬಂದಿದೆ. ATM ಕಾರ್ಡ್ ಎಕ್ಸ್ಚೇಂಜ್ ಅಫೆನ್ಡರ್ ಆಗಿರುತ್ತಾನೆ.

ಈ ದಿವಸ ಉಡುಪಿ ಅಥವಾ ಮಂಗಳೂರು ಜಿಲ್ಲೆಯಲ್ಲಿ ಅಫೆನ್ಸ್ ಮಾಡೋ ಚಾನ್ಸ್ ಇದೆ ಎಲ್ಲರೂ ಅಲರ್ಟ್ ಆಗಿರಿ.
ಆರೋಪಿ ಅರುಣ್ ಸದ್ಯದಲ್ಲಿ ತುಂಬಾ ಆಕ್ಟಿವ್ ಇದ್ದಾನೆ. ಬಸ್ ಸ್ಟ್ಯಾಂಡ್ ಪಕ್ಕದ ವಸತಿಯಲ್ಲಿ ಉಳಿದುಕೊಳ್ಳುವ ಪ್ರವೃತ್ತಿ ಇವನಿಗಿದೆ ಎಂಬ ಮಾಹಿತಿ ಪೊಲೀಸ್ ಇಲಾಖೆಯದಾಗಿದೆ.






































