ಕಾರ್ಕಳ : ಬೋಳ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ 10 ಗಂಟೆಗೆ 108 ಅಂಬುಲೆನ್ಸ್ ನೊಳಗೆ ಗರ್ಭಿಣಿಯೊಬ್ಬರು ನವಜಾತ ಶಿಶುವಿಗೆ ಜನ್ಮ ನೀಡಿದ್ದಾರೆ.
ಹೆರಿಗೆ ವೇದನೆಯಿಂದ ಅಸಹಾಯಕಿಯಾಗಿ ಮನೆಯಲ್ಲಿ ಇದ್ದ ಗರ್ಭಿಣಿ ಪ್ರಿಯ (37) ಅವರನ್ನು ಆಸ್ಪತ್ರೆಗೆ ದಾಖಲಿಸಲು ಕರೊಯ್ಯುತ್ತಿರುವ ದಾರಿ ಮಧ್ಯೆ ಅಂಬುಲೆನ್ಸ್ ನಲ್ಲಿ ಪ್ರಸವವಾಗಿದೆ.
ಆಶಾವರ್ಕರು ಜಯಂತಿ ಗರ್ಭಿಣಿಯ ಆರೋಗ್ಯ ಸ್ಥಿತಿ ವಿಚಾರಿಸಿ 108 ಆರೋಗ್ಯ ಕವಚ ಕಾರ್ಕಳ ಅಂಬುಲೆನ್ಸ್ ಗೆ ಕರೆ ಮಾಡಿದ್ದಾರೆ.
ಅದರನ್ವಯ ಘಟನಾ ಸ್ಥಳಕ್ಕೆ ತೆರಳಿದ ಆರೋಗ್ಯ ಕವಚ 108 ಕಾರ್ಕಳ ಸಿಬ್ಬಂದಿ. ರಾಜಶೇಖರ್ ಎಂ ಟಿ ಪೈಲೆಟ್ ಈರಣ್ಣ ಅವರು ಅಂಬುಲೆನ್ಸ್ ನಲ್ಲಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ.
ಬಾಣಂತಿ ಮತ್ತು ಗಂಡು ಮಗು ಆರೋಗ್ಯದಿಂದ ಇದ್ದಾರೆ. ಅವರನ್ನು ನಿಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಅವರಿಬ್ಬರು ಆರೋಗ್ಯವಂತರಾಗಿದ್ದಾರೆ ಎಂದು ಅಲ್ಲಿನ ವೈದ್ಯಧಿಕಾರಿ ಡಾ ಸಂದೀಪ್ ಮಾಹಿತಿ ತಿಳಿಸಿರುತ್ತಾರೆ.



































