ಬೋಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರ ವಜಾ ಅದೇಶವನ್ನು ರದ್ದುಗೊಳಿಸಿದ ಹೈಕೋರ್ಟ್

Picture of RB NEWS

RB NEWS

Bureau Report

ಬೆಂಗಳೂರು : ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ಕುಂದಾಪುರ ಇವರು ಬೋಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿ.ಸದಾಶಿವ ಶೆಟ್ಟಿ ಇವರನ್ನು ಕಾನೂನುಬಾಹಿರ ಆದೇಶದ ಮೂಲಕ ರಾಜಕೀಯ ಒತ್ತಡದಿಂದ ಅಧ್ಯಕ್ಷ ಹಾಗೂ ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಿದ ಬಗ್ಗೆ ಬಿ.ಸದಾಶಿವ ಶೆಟ್ಟಿಯವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು ವಿಚಾರಣೆಯಲ್ಲಿ ಹೈಕೋರ್ಟ್ ನ್ಯಾಯಾಪೀಠವು ಸಹಕಾರ ಸಂಘಗಳ ಸಹಾಯಕ ನಿಬಂಧಕರು ಕುಂದಾಪುರ ಇವರ ಆದೇಶವನ್ನು ರದ್ದುಗೊಳಿಸಿದೆ.

ಅರೆನ್ಯಾಯಿಕ ಪೀಠವಾದ ಸಹಕಾರಿ ಸಂಘಗಳ ನ್ಯಾಯಾಲಯ ಆದೇಶವನ್ನು ಮಾಡುವಾಗ ಕೆಲವೊಂದು ಮಾನದಂಡವನ್ನು ಪಾಲಿಸುವುದು ಮತ್ತು ಆನ್ ಲೈನ್ ಮೂಲಕ ಅರ್ಜಿದಾರರಿಗೆ ಮತ್ತು ಪ್ರತಿವಾದಿಗಳಿಗೆ ಸರಿಯಾದ ಮಾಹಿತಿ ನೀಡುವ ಕ್ರಮಕೈಗೊಳ್ಳಬೇಕೆಂದು ಈ ಪ್ರಕರಣದ ಮೂಲಕ ಆದೇಶಿಸುತ್ತಾ ಸರಕಾರದ ಮುಖ್ಯಕಾರ್ಯದರ್ಶಿಗೆ ಸೂಕ್ತ ನಿರ್ದೇಶನವನ್ನು ನೀಡಿದೆ.

ಕೈಗೊಂಡ ಕ್ರಮದ ಬಗ್ಗೆ 4 ವಾರಗಳಲ್ಲಿ ವರದಿಯನ್ನು ನೀಡುವಂತೆ ಹೈಕೋರ್ಟ್ ನ್ಯಾಯಾಪೀಠವು ಸರಕಾರಕ್ಕೆ ಆದೇಶಿಸಿದೆ.

ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ಕಾನೂನು ಸಮ್ಮತವಲ್ಲದ ಈ ಆದೇಶದ ವಿರುದ್ದ ಹೈಕೋರ್ಟ್ ನೀಡಿದ ತೀರ್ಮಾನವು ಇನ್ನು ಮುಂದೆ ನಿರ್ಣಾಯಕ ಘಟ್ಟವಾಗಿ ಪರಿಣಮಿಸಲಿದೆ ಎಂದು ಹೈಕೋರ್ಟ್ ನ್ಯಾಯಾವಾದಿ ದೇವಿಪ್ರಸಾದ್‌ಶೆಟ್ಟಿ ಇವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top