ಕಾರ್ಕಳ: ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಕಾರ್ಕಳ ಮತ್ತು ಸರ್ಕಾರ ಜಿಲ್ಲಾ ಆಸ್ಪತ್ರೆ, ರಕ್ತದಾನಿ ವಿಭಾಗ ಅಜ್ಜರಕಾಡು ಉಡುಪಿ ಇದರ ಸಹಾಯದೊಂದಿಗೆ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಜುಲಾಯಿ 07 ಜರುಗಿತು.


ಬೃಹತ್ ಸ್ವಯಂ ಪ್ರೇರಿತ ರಕ್ತದಾನದಲ್ಲಿ “108 ಅಂಬುಲೆನ್ಸ್” ಸಿಬ್ಬಂದಿಗಳು ಸ್ವಯಂ ಪ್ರೇರಿತರಾಗಿ ಪಾಲ್ಗೊಂಡು ರಕ್ತದಾನ ಮಾಡಿದರು. ಇದೇ ಸಂದರ್ಭದಲ್ಲಿ ಕೊಟ್ರೇಶ್ ಮತ್ತು ರಾಜಶೇಖರ್ ಅವರು ರಕ್ತದಾನದ ಮಹತ್ವವನ್ನು ತಿಳಿಯಪಡಿಸಿದರು.

































