ಬೈಲೂರು ಪಳ್ಳಿ ಸರಕಾರಿ ಬಸ್ ಕಾಂಗ್ರೆಸ್ ಸರಕಾರದ ಕೊಡುಗೆ : ಶುಭದರಾವ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

Picture of RB NEWS

RB NEWS

Bureau Report

ಕಾರ್ಕಳ : ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ಕಾರ್ಕಳದ ಶಾಸಕ ವಿ.ಸುನೀಲ್ ಕುಮಾರು ರಾಜ್ಯ ಸರಕಾರದಲ್ಲಿ ಪ್ರಮುಖ ಖಾತೆ ಹೊಂದಿದ್ದರು ಆದರೂ ಸರಕಾರಿ ಬಸ್ಸ್ ಬಿಡಲು ಅವರಿಂದ ಸಾದ್ಯವಾಗಲಿಲ್ಲ.ಈಗ ಕಾಂಗ್ರೆಸ್ ಸರಕಾರ ನೀಡಿದ ಭರವಸೆಗಳು ಅನುಷ್ಠಾನಗೊಂಡಿತು. ಜನರ ಆಶೋತ್ತರಗಳು ಈಡೇರಿಕೆಯಾಗಿದೆ ಎಂದು ಕಾರ್ಕಳ ಬ್ಲಾಕ್ ಅಧ್ಯಕ್ಷ ಶುಭದರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಚಿತ ಯೋಜನೆಗಳ ಕುರಿತು ಬಿಜೆಪಿಗರಿಂದಲೇ ಟೀಕೆ ಬಂತು. ಆದರೂ ಎದೆಗುಂದಲಿಲ್ಲ. ಉಚಿತ ಯೋಜನೆಯ ಫಲವಾಗಿ ಖಚಿತವಾಗಿ ರಸ್ತೆಗೆ ಇಳಿಯಿತು ಕೆ ಎಸ್ ಆರ್ ಟಿ ಸಿ. ಬೈಲೂರು-ಪಳ್ಳಿ ಮಾರ್ಗವಾಗಿ ಓಡಾಡುತ್ತಿದೆ ಸರಕಾರಿ ಬಸ್.

ನುಡಿದಂತೆ ನಡೆಯುವ ಸರಕಾರ ಇದ್ದರೆ ಅದು ಕಾಂಗ್ರೆಸ್ ಸರಕಾರ ಎಂಬುವುದನ್ನು ಕಾರ್ಕಳ ಜನತೆ ಅರಿತುಕೊಂಡಿದ್ದಾರೆ. ಸರಕಾರಿ ಬಸ್ಸ್ ಕೊಡುಗೆ ನೀಡಿದ ಕರ್ನಾಟಕ ಸರಕಾರಕ್ಕೆ ಕೃತಜ್ಞತೆಗಳು ಸಲ್ಲಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top